ಸ್ವಪ್ರಯತ್ನ, ಪ್ರತಿಭೆಯಿಂದ ಮೇಲೆ ಬಂದ ನಾಯಕ ಎಂದು ಬಣ್ಣನೆ
ಕಾರ್ಕಳ: ಉಡುಪಿಯ ಮಾಜಿ ಶಾಸಕ, ಕಾಂಗ್ರೆಸ್ನ ಹಿರಿಯ ನಾಯಕ ಯು.ಆರ್. ಸಭಾಪತಿ ನಿಧನಕ್ಕೆ ಕಾರ್ಕಳದ ಕಾಂಗ್ರೆಸ್ ಮುಖಂಡ ಡಿ.ಆರ್. ರಾಜು ಸಂತಾಪ ವ್ಯಕ್ತಪಡಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ಪರಿಷತ್ ಸದಸ್ಯರಾಗಿ, ಪರಿಷತ್ನ ಶಿಕ್ಷಣ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿ, ದಕ್ಷಿಣ ಕನ್ನಡ ಜಿಲ್ಲೆಯ ಉತ್ತರ ವಿಭಾಗದ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ, ಶಾಸಕರಾಗಿ ಸಭಾಪತಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ್ದರು. ಸ್ವಪ್ರತಿಭೆ ಮತ್ತು ಸ್ವಪ್ರಯತ್ನದಿಂದ ಮೇಲೇರಿದ ಅವರು ಅಗಲಿಕೆ ಕಾಂಗ್ರೆಸ್ಗೆ ದೊಡ್ಡ ನಷ್ಟ. 1994ರಿಂದ ಅವರ ಜೊತೆಗೆ ತನಗೆ ಆತ್ಮೀಯ ಒಡನಾಟವಿತ್ತು. ಅವರ ನಿಧನದಿಂದಾಗಿ ಕರಾವಳಿ ಭಾಗ ಓರ್ವ ಉತ್ತಮ ರಾಜಕಾರಣಿಯನ್ನು ಕಳೆದುಕೊಂಡಂತಾಗಿದೆ ಎಂದು ಡಿ.ಆರ್. ರಾಜು ಸಂತಾಪ ವ್ಯಕ್ತಪಡಿಸಿದ್ದಾರೆ.






































