ನಾರ್ಕೊ ಪರೀಕ್ಷೆಗೆ ಸಿದ್ದ ಎಂದ ಬ್ರಿಜ್‌ಭೂಷಣ್ ಸಿಂಗ್

ಆರೋಪ ಮಾಡಿದವರೂ ಇದೇ ಪರೀಕ್ಷೆಗೆ ಒಳಪಡಬೇಕೆಂಬ ಸವಾಲು

ಹೊಸದಿಲ್ಲಿ: ಕುಸ್ತಿಪಟುಗಳಿಂದ ಲೈಂಗಿಕ ಕಿರುಕುಳದ ಆರೋಪ ಎದುರಿಸುತ್ತಿರುವ ಕುಸ್ತಿ ಫೆಡರೇಶನ್ (ಡಬ್ಲ್ಯುಎಫ್‌ಐ) ಅಧ್ಯಕ್ಷ ಬ್ರಿಜ್‌ಭೂಷಣ್ ಶರಣ್ ಸಿಂಗ್ ನಾರ್ಕೋ ಪರೀಕ್ಷೆಗೆ ಒಳಗಾಗಲು ಸಿದ್ಧ ಎಂದು ಹೇಳಿದ್ದಾರೆ.
ಆದರೆಇದಕ್ಕೆ ಷರತ್ತು ವಿಧಿಸಿರುವ ಅವರು ನಾನು ನಾರ್ಕೋ ಪರೀಕ್ಷೆ, ಪಾಲಿಗ್ರಾಫ್ ಪರೀಕ್ಷೆ ಅಥವಾ ಸುಳ್ಳು ಪತ್ತೆ ಪರೀಕ್ಷೆಗೆ ಒಳಗಾಗಲು ಸಿದ್ಧನಿದ್ದೇನೆ. ಆದರೆ ನನ್ನ ಷರತ್ತು ಆರೋಪ ಮಾಡಿರುವ ವಿನೇಶ್ ಫೋಗಟ್ ಮತ್ತು ಬಜರಂಗ್ ಪುನಿಯಾ ಕೂಡ ಅವುಗಳಿಗೆ ಒಳಪಡಬೇಕು. ನನ್ನೊಂದಿಗೆ ಈ ಇಬ್ಬರು ಕುಸ್ತಿಪಟುಗಳು ಪರೀಕ್ಷೆಗೆ ಒಪ್ಪಿದರೆ ಪತ್ರಿಕಾಗೋಷ್ಠಿ ಕರೆದು ಘೋಷಣೆ ಮಾಡಲಿ. ನಾನು ಪರೀಕ್ಷೆಗೆ ಸಿದ್ಧನಿದ್ದೇನೆ ಎಂದು ನಾನು ಅವರಿಗೆ ಭರವಸೆ ನೀಡುತ್ತೇನೆ ಎಂದಿದ್ದಾರೆ.
ಪ್ರತಿಭಟನಾ ನಿರತ ಕುಸ್ತಿಪಟುಗಳು ರಾಜಕೀಯದ ಆಟಿಕೆಗಳಾಗಿದ್ದಾರೆ. ಯಾರ ಯಶಸ್ಸಿಗಾಗಿ ನಾನು ಎಲ್ಲವನ್ನೂ ತ್ಯಾಗ ಮಾಡಿದೆನೋ ಅದೇ ಮಕ್ಕಳು ಇಂದು ರಾಜಕೀಯದ ಆಟಿಕೆಗಳಾಗಿದ್ದಾರೆ ಎಂಬುದು ನನಗೆ ಅರ್ಥವಾಗಿದೆ. ನಾಲ್ಕು ತಿಂಗಳ ನಂತರವೂ ಕುಸ್ತಿಪಟುಗಳು ಆರೋಪಗಳನ್ನು ಸಾಬೀತುಪಡಿಸಲು ಯಾವುದೇ ಆಡಿಯೋ, ವಿಡಿಯೋ ಅಥವಾ ಇತರ ಯಾವುದೇ ದಾಖಲೆ ಬಿಡುಗಡೆ ಮಾಡಿಲ್ಲ ಎಂದಿದ್ದಾರೆ.
ಅಪ್ರಾಪ್ತ ವಯಸ್ಕ ಸೇರಿದಂತೆ ಏಳು ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಸಿಂಗ್ ಅವರನ್ನು ಬಂಧಿಸುವಂತೆ ಒತ್ತಾಯಿಸಿ ವಿನೇಶ್ ಫೋಗಟ್, ಬಜರಂಗ್ ಪುನಿಯಾ ಮತ್ತು ಸಾಕ್ಷಿ ಮಲಿಕ್ ಸೇರಿದಂತೆ ಭಾರತದ ಅಗ್ರ ಕುಸ್ತಿಪಟುಗಳು ಏಪ್ರಿಲ್ 23 ರಿಂದ ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.









































error: Content is protected !!
Scroll to Top