ಬಿಜೆಪಿ ಆಡಳಿತದಿಂದ ಅಪವಿತ್ರವಾಗಿತ್ತು ಎಂದು ಶುದ್ಧೀಕರಣ
ಬೆಂಗಳೂರು : ಕಾಂಗ್ರೆಸ್ ಬಹುಮತದಿಂದ ಅದಿಕಾರಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಇಂದು ಕಾಂಗ್ರೆಸ್ ಕಾರ್ಯಕರ್ತರು ವಿಧಾನ ಸೌಧವನ್ನು ಗೋಮೂತ್ರ ಸಿಂಪಡಿಸಿ ಶುದ್ಧಗೊಳಿಸಿದ್ದಾರೆ. ಭ್ರಷ್ಟ ಬಿಜೆಪಿ ಸರಕಾರದಿಂದ ವಿಧಾನ ಸೌಧ ಅಪವಿತ್ರವಾಗಿತ್ತು. ಹೀಗಾಗಿ ಗೋಮೂತ್ರ ಸಿಂಪಡಿಸಿ ಶುದ್ಧಗೊಳಿಸಿದ್ದೇವೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಹೇಳಿಕೊಂಡಿದ್ದಾರೆ.
ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಕಳೆದ ಜನವರಿಯಲಿ ವಿಧಾನ ಸೌಧವನ್ನು ಗೋಮೂತ್ರದಿಂದ ಶುದ್ಧೀಕರಿಸಬೇಕು ಎಂದು ಹೇಳಿದ್ದರು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಇಂದು ಗೋಮೂತ್ರ ಸಿಂಪಡಿಸಿದ್ದಾರೆ.