ಮೋದಿಗೆ ಫಿಜಿ ದೇಶದ ಅತ್ಯುನ್ನತ ಪ್ರಶಸ್ತಿ

ಕಂಪಾನಿಯನ್‌ ಆಫ್‌ ದ ಆರ್ಡರ್‌ ಆಐ ಫಿಜಿ ಗೌರವ

ಪಪುವ ನ್ಯೂ ಗಿನಿಯ : ಪ್ರಧಾನಿ ನರೇಂದ್ರ ಮೋದಿಗೆ ಫಿಜಿ ದೇಶ ತನ್ನ ಅತ್ಯುನ್ನತ ನಾಗರಿಕ ಪ್ರಶಸ್ತಿ ಕಂಪಾನಿಯನ್‌ ಆಫ್‌ ದ ಆರ್ಡರ್‌ ಆಐ ಫಿಜಿ ಪ್ರದಾನಿಸಿ ಗೌರವಿಸಿದೆ. ಫಿಜಿ ದೇಶದ ನಾಗರಿಕಲ್ಲದವರಿಗೆ ಈ ಪ್ರಶಸ್ತಿ ಸಿಗುವುದು ಬಹಳ ವಿರಳ ಎಂಬ ಕಾರಣಕ್ಕೆ ಈ ಅಪರೂಪದ ಗೌರವ ಬಹಳ ಮಹತ್ವ ಪಡೆದುಕೊಂಡಿದೆ. ಮೋದಿಯ ಜಾಗತಿಕ ನಾಯಕತ್ವವನ್ನು ಮೆಚ್ಚಿ ಫಿಜಿ ದೇಶ ಈ ಪ್ರಶಸ್ತಿ ನೀಡಿದೆ.
ಫಿಜಿ ಪ್ರಧಾನಿ ಸಿಟಿವೆನಿ ರಬುಕ ಇಂದು ಪಪುವ ನ್ಯೂ ಗಿನಿಯದಲ್ಲಿ ಪ್ರಶಸ್ತಿ ಪ್ರದಾನಿಸಿದರು. ಇದು ನನಗೆ ಸಿಕ್ಕಿರುವ ಗೌರವ ಅಲ್ಲ, ಭಾರತದ 140 ಕೋಟಿ ಪ್ರಜೆಗಳಿಗೆ ಭಾರತ-ಫಿಜಿ ದೇಶಗಳ ಶತಮಾನಗಳ ಸಂಬಂಧಕ್ಕೆ ಸಂದ ಗೌರವ ಎಂದು ಮೋದಿ ಪ್ರಶಸ್ತಿ ಸ್ವೀಕರಿಸಿ ಪ್ರತಿಕ್ರಿಯಿಸಿದ್ದಾರೆ. ಫಿಜಿ ದೇಶದ ಹೊರತಾದ ಕೆಲವೇ ಮಂದಿಗೆ ಮಾತ್ರ ಈ ಉನ್ನತ ಗೌರವ ಸಿಕ್ಕಿದೆ.

error: Content is protected !!
Scroll to Top