ಹೆಬ್ರಿ : ರಾಜ್ಯಮಟ್ಟದ ಪ್ರಶಿಕ್ಷಣ ಶಿಬಿರ ಉದ್ಘಾಟನೆ

ಹೆಬ್ರಿ : ಪಾಂಡುರಂಗ ರಮಣ ನಾಯಕ‌ ಅಮೃತ ಭಾರತಿ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾಭಾರತಿ ಕರ್ನಾಟಕ ಪ್ರಾಂತ ಆಯೋಜಿಸಿದ ರಾಜ್ಯ ಮಟ್ಟದ ಪ್ರಶಿಕ್ಷಣ ಶಿಬಿರಕ್ಕೆ ಸೋಮವಾರದಂದು ಅಮೃತ ಭಾರತಿ ಟ್ರಸ್ಟ್ ಕಾರ್ಯದರ್ಶಿ ಗುರುದಾಸ ಶೆಣೈ ದೀಪ ಬೆಳಗಿಸಿ ಚಾಲನೆ ನೀಡಿದರು. ಇದೇ ಸಂದರ್ಭ ಅನ್ನಪೂರ್ಣ ಸಭಾಂಗಣದಲ್ಲಿ ವಿದ್ಯಾವಿಕಾಸ ಮತ್ತು ಶಿಶುವಾಟಿಕಾ ಆಚಾರ್ಯ ಪ್ರಶಿಕ್ಷಣ ವರ್ಗದ ಉದ್ಘಾಟನೆಯು ನಡೆಯಿತು.

ವಿದ್ಯಾಭಾರತಿ ದಕ್ಷಿಣ ಮಧ್ಯೆ ಕ್ಷೇತ್ರ ಸಹ ಸಂಘಟನಾ ಕಾರ್ಯದರ್ಶಿ ಜಿ. ಆರ್. ಜಗದೀಶ್ ಪ್ರಾಸ್ತಾವಿಕವಾಗಿ ಮಾತನಾಡಿ, ಸಮಾಜದ ಪ್ರಗತಿಯಲ್ಲಿ ಶಿಕ್ಷಣದ ಪಾತ್ರ ಮಹತ್ವವಾದುದು. ಶಿಕ್ಷಣವು ವ್ಯಕ್ತಿಗೆ ಬದುಕುವ ದಾರಿಯನ್ನು ರೂಪಿಸುತ್ತದೆ ಎಂದ ಅವರು, ವಿದ್ಯಾಭಾರತಿಯ ಧ್ಯೇಯೋದ್ದೇಶದ ಕುರಿತು ತಿಳಿಸಿದರು. ಈ ಸಂದರ್ಭ ಪ್ರಾಂತ ಶಿಶುವಾಟಿಕಾ ಪ್ರಮುಖ್ ಸ್ವರ್ಣ, ವಿದ್ಯಾಭಾರತಿ ಕರ್ನಾಟಕ ಪ್ರಾಂತ ಸಂಘಟನಾ ಕಾರ್ಯದರ್ಶಿ ಉಮೇಶ್ ಎಂ. ಉಪಸ್ಥಿತರಿದ್ದರು. ವಿದ್ಯಾಭಾರತಿ ಕರ್ನಾಟಕ ಪ್ರಾಂತ ಕಾರ್ಯದರ್ಶಿ ವಸಂತ ಮಾಧವ ಸ್ವಾಗತಿಸಿ, ವಿಮಲ ಮಾತಾಜಿ ನಿರೂಪಿಸಿದರು. ಪ್ರಚಾರ ಪ್ರಮುಖ್ ಮಹೇಶ್ ಹೈಕಾಡಿ ವಂದಿಸಿದರು.

















































error: Content is protected !!
Scroll to Top