ಎ. 17- 27 : ಹೆಬ್ರಿಯಲ್ಲಿ ರಾಜ್ಯ ಮಟ್ಟದ ಪ್ರಶಿಕ್ಷಣ ಶಿಬಿರ

ಹೆಬ್ರಿ : ಪಾಂಡುರಂಗ ರಮಣ ನಾಯಕ‌ ಅಮೃತ ಭಾರತಿ ಸಮೂಹ ಶಿಕ್ಷಣ ಸಂಸ್ಥೆಗಳು ಮತ್ತು ವಿದ್ಯಾಭಾರತಿ ಕರ್ನಾಟಕ ಪ್ರಾಂತ ಆಯೋಜಿಸಿರುವ ರಾಜ್ಯ ಮಟ್ಟದ ಪ್ರಶಿಕ್ಷಣ ಶಿಬಿರವು ಏ. 17 – 27ರ ತನಕ ನಡೆಯಲಿರುವುದು. ಇದರ ಜೊತೆಗೆ ವಿದ್ಯಾವಿಕಾಸ ಮತ್ತು ಶಿಶುವಾಟಿಕಾ ಆಚಾರ್ಯ ಪ್ರಶಿಕ್ಷಣ ವರ್ಗ ನಡೆಯಲಿದೆ. ವಿವಿಧ ಜಿಲ್ಲೆಗಳಿಂದ 300 ಶಿಕ್ಷಕರು ಭಾಗವಹಿಸಲಿದ್ದು, ವಿದ್ಯಾಭಾರತಿ ಕರ್ನಾಟಕ ಶೈಕ್ಷಣಿಕ ಸಂಯೋಜಿತ ಸಂಸ್ಥೆಗಳ ಶಿಕ್ಷಕರು ತರಬೇತಿ ವರ್ಗದಲ್ಲಿ ಪಾಲ್ಗೊಳ್ಳುವರು. ಶೈಕ್ಷಣಿಕ, ಯೋಗ, ವಿದ್ಯಾಭಾರತಿ ಪ್ರಾರ್ಥನೆ, ಪರೀಕ್ಷೆ, ಮೌಲ್ಯಮಾಪನ, ಶಿಕ್ಷಕರ ಮನೋಭಾವ ಮೊದಲಾದ ಹಲವು ವಿಷಯಗಳ ಬೌದ್ಧಿಕ ನೀಡಲು ರಾಜ್ಯ ಮಟ್ಟದ ಮತ್ತು ಜಿಲ್ಲಾ ಮಟ್ಟದ ಸಂಪನ್ಮೂಲ ವ್ಯಕ್ತಿಗಳು ಆಗಮಿಸಲಿದ್ದಾರೆ. ವಿದ್ಯಾಭಾರತಿ ದಕ್ಷಿಣ ಸಹ ಸಂಘಟನಾ ಕಾರ್ಯದರ್ಶಿ ಜಿ. ಆರ್. ಜಗದೀಶ್, ವಿದ್ಯಾಭಾರತಿ ಕರ್ನಾಟಕ ಪ್ರಾಂತ ಅಧ್ಯಕ್ಷ ಪರಮೇಶ್ವರ ಹೆಗಡೆ, ವಿದ್ಯಾಭಾರತಿ ಕರ್ನಾಟಕ ಪ್ರಾಂತ ಕಾರ್ಯದರ್ಶಿ ವಸಂತ ಮಾಧವ, ವಿದ್ಯಾಭಾರತಿ ದಕ್ಷಿಣ ಶಿಶುವಾಟಿಕಾ ಸಹ ಪ್ರಮುಖ್ ತಾರ ಕೆ. ಮತ್ತು ಪ್ರಾಂತ ಶಿಶುವಾಟಿಕಾ ಪ್ರಮುಖ್ ಸ್ವರ್ಣ, ಉಮೇಶ್ ಎಮ್. ಸಂಘಟನಾ ಕಾರ್ಯದರ್ಶಿ ವಿದ್ಯಾಭಾರತಿ ಕರ್ನಾಟಕ ಪ್ರಾಂತ, ಪ್ರಾಂತ ಪ್ರಶಿಕ್ಷಣ ಪ್ರಮುಖ್ ನರಸಪ್ಪ, ಪ್ರಾಂತ ಕೋಶಾಧಿಕಾರಿ ರಾಮಕೃಷ್ಣ ಬಿ.ಕೆ., ಎಂದು ಅಮೃತ ಭಾರತಿ ಟ್ರಸ್ಟ್ ನ ಕಾರ್ಯದರ್ಶಿ ಗುರುದಾಸ ಶೆಣೈ ಪ್ರಕಟನೆಯಲ್ಲಿ ತಿಳಿಸಿದ್ದಾರೆ.





























































































































error: Content is protected !!
Scroll to Top