ನಿಂತಿದ್ದ ವ್ಯಕ್ತಿಗೆ ಬೈಕ್‌ ಡಿಕ್ಕಿ – ಗಾಯ

ಹೆಬ್ರಿ : ರಸ್ತೆ ಬದಿಯಲ್ಲಿ ನಿಂತುಕೊಂಡಿದ್ದ ವ್ಯಕ್ತಿಯೋರ್ವರಿಗೆ ದ್ವಿಚಕ್ರ ವಾಹನವೊಂದು ಡಿಕ್ಕಿ ಹೊಡೆದಿರುವ ಘಟನೆ ಹೆಬ್ರಿ ಕೆಳಪೇಟೆ ನಾಯಕ್‌ ರೆಸ್ಟೋರೆಂಟ್‌ ಬಳಿ ಎ. 12ರಂದು ಸಂಭವಿಸಿದೆ. ಚಾರಾ ಗ್ರಾಮದ ಮಂಡಾಡಿಜೆಡ್ಡು ನಿವಾಸಿ ಅಶೋಕ್‌ ಕುಮಾರ್‌ ಎಂಬುವವರು ನಿಂತುಕೊಂಡಿದ್ದಾಗ ಭಾಸ್ಕರ ಎಂಬುವವರು ಉಡುಪಿ ಕಡೆಯಿಂದ ಹೆಬ್ರಿ ಕಡೆಗೆ ತನ್ನ ದ್ವಿಚಕ್ರ ವಾಹನ ಚಲಾಯಿಸಿಕೊಂಡು ಬಂದು ಡಿಕ್ಕಿ ಹೊಡೆದಿದ್ದಾರೆ. ಡಿಕ್ಕಿ ಹೊಡೆದ ಪರಿಣಾಮ ಅಶೋಕ್‌ ಅವರ ಎಡಕೈ ಮೂಳೆ ಮುರಿತಗೊಂಡು ತೀವ್ರ ಸ್ವರೂಪದ ಗಾಯವಾಗಿರುತ್ತದೆ. ಈ ಕುರಿತು ಹೆಬ್ರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.





























































































































error: Content is protected !!
Scroll to Top