ಸಂಸದ ಶ್ರೀನಿವಾಸ ಪ್ರಸಾದ್‌ ರಾಜಕೀಯಕ್ಕೆ ಗುಡ್‌ಬೈ

ಸಂಸದರಾಗಿದ್ದರೂ ಟಿಕೆಟ್‌ ಸಿಗದ ನಿರಾಶೆ

ಮೈಸೂರು: ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ಸಿಗದೆ ನಿರಾಶರಾಗಿರುವ ಚಾಮರಾಜನಗರದ ಬಿಜೆಪಿ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಅವರು ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ.
ತಮ್ಮ ಸಂಸದರ ಅವಧಿ 2024ರಲ್ಲಿ ಕೊನೆಗೊಂಡ ನಂತರ ಸಕ್ರಿಯ ರಾಜಕೀಯದಿಂದ ಹೊರನಡೆಯುವುದಾಗಿ ಹೇಳಿದ್ದಾರೆ. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನಲ್ಲಿ ಬುಧವಾರ ಬಿಜೆಪಿ ಪಕ್ಷದ ಅಭ್ಯರ್ಥಿ ಸಿ. ಎಸ್‌. ನಿರಂಜನ್‌ಕುಮಾರ್‌ ಪರ ಪ್ರಚಾರ ನಡೆಸಿದ ಅವರು 2024ರ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ತಿಳಿಸಿದ್ದಾರೆ.
ಅವರು ನಂಜನಗೂಡು ಉಪಚುನಾವಣೆಯಲ್ಲಿ ಸ್ಪರ್ಧಿಸಿ 2017ರಲ್ಲಿ ಸೋತರು. ನಂತರ, 2019ರಲ್ಲಿ ನಡೆದ ಚಾಮರಾಜನಗರ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿ ಗೆದ್ದಿದ್ದರು. ಕಳೆದ ವರ್ಷ ತಮ್ಮ 75ನೇ ಹುಟ್ಟುಹಬ್ಬ ಆಚರಿಸುತ್ತಿದ್ದಾಗಲೇ ಪ್ರಸಾದ್ ರಾಜಕೀಯದಿಂದ ನಿವೃತ್ತಿ ಬಗ್ಗೆ ಮಾತನಾಡಿದ್ದರು.

















































error: Content is protected !!
Scroll to Top