ಹೆಬ್ರಿ : ಕಾರ್ಕಳ : ಹೆಬ್ರಿ ವ್ಯವಸಾಯ ಸೇವಾ ಸಹಾಕಾರಿ ಸಂಘದ ಸದಸ್ಯ, ಗ್ರಾ. ಪಂ. ಮಾಜಿ ಸದಸ್ಯ ಸುರೇಶ್ ಭಂಡಾರಿ ಅವರು ತನ್ನ ಬೆಂಬಲಿಗರೊಂದಿಗೆ ಎ. 13 ರಂದು ಬಿಜೆಪಿ ಸೇರ್ಪಡೆಗೊಂಡರು. ವಿಕಾಸ ಕಚೇರಿಯಲ್ಲಿ ಸಚಿವ ವಿ. ಸುನೀಲ್ ಕುಮಾರ್ ಪಕ್ಷದ ಧ್ವಜ ನೀಡಿ ಅವರನ್ನು ಸ್ವಾಗತಿಸಿದರು. ರಿಕ್ಷಾ ಚಾಲಕ ಮಾಲಕರ ಸಂಘದ ಸ್ಥಾಪಕಾಧ್ಯಕ್ಷರಾಗಿ, ತಾಲೂಕು ಸವಿತಾ ಸಮಾಜದ ಅಧ್ಯಕ್ಷರಾಗಿ ಸಾಮಾಜಿಕ, ಧಾರ್ಮಿಕ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ಸುರೇಶ್ ಭಂಡಾರಿ ಅವರು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿಕೊಂಡಿದ್ದಾರೆ.
ಬಿಜೆಪಿ ಹಿರಿಯ ಮುಖಂಡರಾದ ಬೋಳ ಪ್ರಭಾಕರ್ ಕಾಮತ್, ಬಿಜೆಪಿ ಕ್ಷೇತ್ರಾಧ್ಯಕ್ಷ ಮಹಾವೀರ ಹೆಗ್ಡೆ, ಉಪಾಧ್ಯಕ್ಷ ಸುರೇಶ್ ಶಿವಪುರ, ಪ್ರಧಾನ ಕಾರ್ಯದರ್ಶಿಗಳಾದ ನವೀನ್ ನಾಯಕ್, ಜಯರಾಂ ಸಾಲ್ಯಾನ್, ಜಿ.ಪಂ. ನಿಕಟಪೂರ್ವ ಸದಸ್ಯೆ ಜ್ಯೋತಿ ಹರೀಶ್, ಪಕ್ಷದ ಪ್ರಮುಖರಾದ ಸತೀಶ್ ಪೈ, ಗುರುದಾಸ್ ಶೆಣೈ, ಹೆಬ್ರಿ ಬಿಜೆಪಿ ಶಕ್ತಿಕೇಂದ್ರದ ಅಧ್ಯಕ್ಷ ರಮೇಶ್ ಶಿವಪುರ, ಗ್ರಾಮ ಸಮಿತಿ ಅಧ್ಯಕ್ಷ ಸುಧಾಕರ್ ಹೆಗ್ಡೆ, ಡಾ. ಶೋಧನ್, ಶೇಖರ್ ತಾಣ ಮೊದಲಾದವರು ಉಪಸ್ಥಿತರಿದ್ದರು.
ಹೆಬ್ರಿ ಕಾಂಗ್ರೆಸ್ ಕಾರ್ಯಕರ್ತ ಸುರೇಶ್ ಭಂಡಾರಿ ಬಿಜೆಪಿ ಸೇರ್ಪಡೆ


























