ಕಾರ್ಕಳ – ಹೆಬ್ರಿಯ ವಿವಿಧೆಡೆ ಗುಡುಗು ಸಹಿತ ಮಳೆ

ಕಾರ್ಕಳ :ಕಾರ್ಕಳ – ಹೆಬ್ರಿ ತಾಲೂಕಿನ ವಿವಿಧ ಭಾಗದಲ್ಲಿ ಎ.7ರ ಸಂಜೆ ಗುಡುಗು ಸಹಿತ ಮಳೆಯಾಗಿದೆ. ಬಿಸಿಲ ಬೇಗೆಯಿಂದ ಬಸವಳಿದ ಜನರಿಗೆ ಮಳೆರಾಯ ಸ್ವಲ್ಪತಂಪೆರೆದಿದ್ದಾನೆ. ಏ.6 ಮಧ್ಯರಾತ್ರಿ 2 ಗಂಟೆಯ ಹೊತ್ತಿಗೆ ಹನಿ ಹನಿ ಮಳೆಯಾಗಿದ್ದು ಬೆಳಗ್ಗಿನಿಂದಲೇ ಮೋಡ ಕವಿದ ವಾತಾವರಣವಿತ್ತು. ಶುಕ್ರವಾರದಂದು ಸಂಜೆ 5ಗಂಟೆಗೆ ಮಳೆ ಸುರಿದಿದೆ. ಕಾರ್ಕಳ ನಗರ ಭಾಗದಲ್ಲಿ ಸಾಧಾರಣ ಮಳೆಯಾಗಿದ್ದು, ಹೊಸ್ಮಾರು, ಮಾಳ, ಅಜೆಕಾರು ಭಾಗದಲ್ಲಿ ಮತ್ತು ಹೆಬ್ರಿಯ ವಿವಿಧೆಡೆ ಧಾರಕಾರ ಮಳೆಯಾಗಿದೆ.









































































































error: Content is protected !!
Scroll to Top