ಕಾರ್ಕಳ : ಹಿರಿಯ ದೈವಪಾತ್ರಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಲಾಡಿ ಅಣ್ಣು ಶೆಟ್ಟಿ (78) ಅವರು ಎ.7 ರಂದು ನಿಧನ ಹೊಂದಿದರು. ಅಲ್ಪಕಾಲದ ಅಸೌಖ್ಯದಿಂದದಾಗಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇವರು ಶುಕ್ರವಾರ ಮುಂಜಾನೆ ಅಲ್ಲೇ ಕೊನೆಯುಸಿರೆಳೆದಿದ್ದಾರೆ.
ಕಾರ್ಕಳದ ವಿವಿಧ ದೈವಸ್ಥಾನದಲ್ಲೂ ಸೇವೆ ಸಲ್ಲಿಸಿದ್ದರು
ದ.ಕ ಉಡುಪಿ ಜಿಲ್ಲೆಯ ಹಲವಾರು ದೈವಸ್ಥಾನಗಳಲ್ಲಿ ದೈವಪಾತ್ರಿಯಾಗಿ ಸೇವೆ ಸಲ್ಲಿಸುತ್ತಿದ್ದ ಇವರು ಅಂಡಾರು, ಅಜೆಕಾರು, ಶಿರ್ಲಾಲು, ಮುಂಡ್ಲಿ, ಸಾಣೂರು ಜೋಡುಗರಡಿ, ನಿಂಜೂರು ಸೇರಿದಂತೆ ಕಾರ್ಕಳ ತಾಲೂಕಿನ ವಿವಿಧ ಗರಡಿಳಲ್ಲಿ ದೈವ ಪಾತ್ರಿಯಾಗಿ ಸೇವೆ ಸಲ್ಲಿಸಿದ್ದರು.
ಮೂಡುಬಿದಿರೆಯ ಮಾಸ್ತಿಕಟ್ಟೆಯಲ್ಲಿ ವಾಸವಾಗಿದ್ದ ಇವರ ಅಂತ್ಯಸಂಸ್ಕಾರವು ಮಾರ್ನಾಡು ಕಲ್ಲಬೆಟ್ಟು ಮನೆಯಲ್ಲಿ ನಡೆಯಿತು. ಮೃತರು ಪತ್ನಿ, ಇಬ್ಬರು ಪುತ್ರಿಯರು ಮತ್ತು ಓರ್ವ ಪುತ್ರನನ್ನು ಅಗಲಿದ್ದಾರೆ.























