ಕಾರ್ಕಳ : ಚಲಿಸುತ್ತಿರುವ ಬೈಕ್‌ನಿಂದ ಬಿದ್ದು ಅಂಗನವಾಡಿ ಕಾರ್ಯಕರ್ತೆಯೋರ್ವರು ದಾರುಣವಾಗಿ ಸಾವಿಗೀಡಾದ ಘಟನೆ ನಿಡ್ಡೊಡಿಯಲ್ಲಿ ಎ. 6ರಂದು ಮುಂಜಾನೆ ಸಂಭವಿಸಿದೆ. ಬಜಗೋಳಿ ವಲಯದ ಈದು ಅಂಗನವಾಡಿ ಕಾರ್ಯಕರ್ತೆ ಮಮತಾ (40) ಎಂಬವರೇ ಮೃತಪಟ್ಟ ದುರ್ದೈವಿ. ಕಟೀಲು ದೇವಸ್ಥಾನಕ್ಕೆ ತೆರಳಿ ತನ್ನ ಪತಿಯ ಬೈಕಿನಲ್ಲಿ ಮನೆಗೆ ವಾಪಾಸಾಗುವ ಸಂದರ್ಭ ನಿಡ್ಡೊಡಿಯಲ್ಲಿ ಬೈಕಿನಿಂದ ಆಯತಪ್ಪಿ ರಸ್ತೆಗೆ ಬಿದ್ದ ಪರಿಣಾಮ ಗಂಭೀರವಾಗಿ ಗಾಯಗೊಂಡ ಮಮತಾ ಸಾವನಪ್ಪಿದ್ದಾರೆ. ಈ ಕುರಿತು ಮೂಡಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೈಕ್‌ನಿಂದ ಬಿದ್ದು ಅಂಗನವಾಡಿ ಕಾರ್ಯಕರ್ತೆ ದುರ್ಮರಣ




















