ಕಾರಿನ ಅತಿವೇಗ, ರಾಂಗ್‌ ಸೈಡ್‌ ಚಾಲನೆ ಅಪಘಾತಕ್ಕೆ ಕಾರಣ

ಅಪಘಾತ ತಪ್ಪಿಸಲು ಯತ್ನಿಸಿದರೂ ಸಾಧ್ಯವಾಗಲಿಲ್ಲ

ಮಂಗಳೂರು : ಧಾರವಾಡ ಸಮೀಪ ರಾಷ್ಟ್ರೀಯ ಹೆದ್ದಾರಿ ಬೈಪಾಸ್‌ನಲ್ಲಿ ನಿನ್ನೆ ರಾತ್ರಿ ಮುಂಬಯಿಯಿಂದ ಮಂಗಳೂರಿಗೆ ಬರುತ್ತಿದ್ದ ಬಸ್‌ ಅಪಘಾತಕ್ಕೆ ಕಾರಿನ ಚಾಲಕ ಕಾರಣ ಎಂದು ಬಸ್ಸಿನ ಚಾಲಕ ಹೇಳಿದ್ದಾರೆ. ಕಾರು ರಾಂಗ್‌ ಸೈಡಲ್ಲಿ ವಿಪರೀತ ವೇಗದಿಂದ ಬರುತ್ತಿತ್ತು ಮತ್ತು ಚಾಲಕ ಮದ್ಯಪಾನ ಮಾಡಿದ್ದರು. ಕಾರಿನಲ್ಲಿ ಒಬ್ಬನೇ ಇದ್ದರು. ಕಾರು ರಾಂಗ್‌ ಸೈಡಿನಲ್ಲಿ ಇದ್ದ ಕಾರಣ ಅಪಘಾತ ತಪ್ಪಿಸಲು ಸಾಧ್ಯವಾಗಲಿಲ್ಲ. ಒಂದು ವೇಳೆ ತಪ್ಪಿಸಲು ಪ್ರಯತ್ನಿಸಿದ್ದರೆ ಬಸ್ಸಿನಲ್ಲಿದ್ದ 30-35 ಪ್ರಯಾಣಿಕರ ಪ್ರಾಣವನ್ನು ಅಪಾಯಕ್ಕೊಡ್ಡಬೇಕಾಗುತ್ತಿತ್ತು. ರಾಂಗ್‌ ಸೈಡಿನಲ್ಲಿ ಬಂದ ಕಾರು ಚಾಲಕನ ಬದಿಯಿಂದ ಬಸ್ಸಿಗೆ ಅಪ್ಪಳಿಸಿದೆ ಎಂದು ತಿಳಿಸಿದ್ದಾರೆ.
ಅಪಘಾತದಲ್ಲಿ ಕಾರು ಚಲಾಯಿಸುತ್ತಿದ್ದ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ತಡರಾತ್ರಿ ಮುಂಬಯಿಯಿಂದ ಮಂಗಳೂರಿಗೆ ಬರುತ್ತಿದ್ದ ಖಾಸಗಿ ಬಸ್‌ಗೆ ಕಾರಿಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಬಸ್‌ನಲ್ಲಿದ್ದ ಪ್ರಯಾಣಿಕರು ಪಾರಾಗಿದ್ದಾರೆ. ಡಿಕ್ಕಿಯ ಬಿರುಸಿಗೆ ಕಾರು ಸಂಪೂರ್ಣ ನುಜ್ಜುಗುಜ್ಜಾಗಿದೆ.









































































































error: Content is protected !!
Scroll to Top