ಎ. 1 : ವಿಜೇತ ವಸತಿಯುತ ವಿಶೇಷ ಶಾಲೆಯ ಸಪ್ತಮ ವಾರ್ಷಿಕೋತ್ಸವ

ಕಾರ್ಕಳ : ಕುಕ್ಕುಂದೂರು ಅಯ್ಯಪ್ಪನಗರ ಶ್ರೀ ದುರ್ಗಾ ಹೈಸ್ಕೂಲ್‌ ಕಟ್ಟಡದಲ್ಲಿರುವ ವಿಜೇತ ವಸತಿಯುತ ವಿಶೇಷ ಶಾಲೆ ಮತ್ತು ವೃತ್ತಿ ಶಿಕ್ಷಣ ತರಬೇತಿ ಸಂಸ್ಥೆಯ ಸಪ್ತಮ ವಾರ್ಷಿಕೋತ್ಸವ ಸಮಾರಂಭ ಎ.1 ರಂದು ಜರುಗಲಿದೆ.

ಬೆಳಗ್ಗೆ 9:30ಕ್ಕೆ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಪ್ರಸನ್ನ ಹೆಚ್ ಅವರು ಧ್ವಜಾರೋಹಣ ನಡೆಸಿ ಗೌರವ ವಂದನೆ ಸ್ವೀಕರಿಸಲಿದ್ದಾರೆ. ತಾ. ಪಂ. ಮಾಜಿ ಅಧ್ಯಕ್ಷ ವಿಕ್ರಂ ಹೆಗ್ಡೆ ದೀಪ ಪ್ರಜ್ವಲನೆ ಮಾಡಲಿದ್ದು, ಮುಖ್ಯ ಅತಿಥಿಗಳಾಗಿ ಉದ್ಯಮಿ ವಿಜಯ್‌ ಶೆಟ್ಟಿ, ಕಾಡುಹೊಳೆ ಜನಪ್ರಿಯ ರೈಸ್‌ ಮಿಲ್‌ ಮಾಲಕ ಮಂಜುನಾಥ್‌, ಎಮ್‌ಜೆಎಫ್‌ ಕೆಮ್ಮಂಜ ಮತ್ತು ಅಜೆಕಾರು ಮಿಲನ್‌ ಮಲ್ಟಿ ಪರ್ಪಸ್‌ ಎಸಿ ಹಾಲ್‌ ಮಾಲಕ ಗುರುಪ್ರಸಾದ್‌ ಶೆಟ್ಟಿ, ಅಧ್ಯಾಪಕ ಶಂಕರ್ ಪೂಜಾರಿ ಹಾಗೂ ಬಿ. ಆರ್‌. ಐತಾಳ್‌ ಭಾಗವಹಿಸಲಿದ್ದಾರೆ.

ಕಟ್ಟಡ ಉದ್ಘಾಟನೆ ಮತ್ತು ಸಭಾ ಕಾರ್ಯಕ್ರಮ
ಸಂಜೆ 6 ಗಂಟೆಗೆ ಯೂನಿಯನ್‌ ಬ್ಯಾಂಕ್‌ ಸಿಎಸ್‌ಆರ್‌ ಪ್ರಾಯೋಜಕತ್ವದ ಕಟ್ಟಡ, ಕರಾವಳಿ ಅಭಿವೃದ್ಧಿ ಪ್ರಾಧಿಕಾರ ನಿರ್ಮಾಣದ ಕೊಠಡಿ ಹಾಗೂ ಫಿಸಿಯೋ ಥೆರಪಿ ಕೇಂದ್ರ ಉದ್ಘಾಟನೆ ಮತ್ತು ಸೋಲಾರ್‌ ಇನ್ವರ್ಟರ್‌ ಗ್ರಿಡ್‌ ಟೈ ಸಿಸ್ಟಮ್‌ ಹಸ್ತಾಂತರ ಹಾಗೂ ಸಭಾ ಕಾರ್ಯಕ್ರಮ ನಡೆಯಲಿದ್ದು, ಶಾಲಾ ಗೌರವಾಧ್ಯಕ್ಷ, ಉದಯ ಕೃಷ್ಣಯ್ಯ ಚಾರಿಟೇಬಲ್‌ ಟ್ರಸ್ಟ್‌ ಅಧ್ಯಕ್ಷ ಉದಯ್‌ ಶೆಟ್ಟಿ ಮುನಿಯಾಲು ಸಭಾಧ್ಯಕ್ಷತೆಯನ್ನು ವಹಿಸಲಿದ್ದಾರೆ.

ಸಾಂಸ್ಕೃತಿಕ ಕಾರ್ಯಕ್ರಮ
ಸಂಜೆ 5ಗಂಟೆಗೆ ಶಾಲಾ ವಿದ್ಯಾರ್ಥಿಗಳಿಂದ ನೃತ್ಯ ವೈವಿಧ್ಯ ಹಾಗೂ ಕಲ್ಯಾಣಿ ಕಲಾ ಕೇಂದ್ರದ ಅಧ್ಯಕ್ಷ ನಿರಂಜನ್‌ ಭಟ್‌ ಪರಿಕಲ್ಪನೆಯ ನೃತ್ಯ ರೂಪಕ ಕೃಷ್ಣ ಲೀಲೆ ಪ್ರದರ್ಶನಗೊಳ್ಳಲಿದೆ. ಸಭಾ ಕಾರ್ಯಕ್ರಮದ ನಂತರ ಶ್ರೀ ದುರ್ಗಾ ಯಕ್ಷಗಾನ ಕೇಂದ್ರದ ವಿದ್ಯಾರ್ಥಿಗಳಿಂದ ಮೀನಾಕ್ಷಿ ಕಲ್ಯಾಣ ಎಂಬ ಯಕ್ಷಗಾನ ಪ್ರಸಂಗ ನಡೆಯಲಿದ್ದು, ಬಳಿಕ ಸುನೀಲ್‌ ನೆಲ್ಲಿಗುಡ್ಡೆ ನೇತೃತ್ವದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ತೆಲಿಕೆದ ತೆನಾಲಿ ತಂಡದವರಿಂದ ತೆಲಿಕದ ಬರ್ಸ ಪ್ರದರ್ಶನಗೊಳ್ಳಲಿದೆ.

















































error: Content is protected !!
Scroll to Top