ಕಾರ್ಕಳ : ವಸುಧಾ ಶೆಣೈ ಅವರು ರಚಿಸಿದ ಕಥಾಸಂಕಲನ ಭಾವಾಂತರಂಗ ಮಾ. 30ರಂದು ಬಿಡುಗಡೆಗೊಂಡಿತು. ವಸುಧಾ ಅವರ ತಾಯಿ ಲಕ್ಷ್ಮೀ ದೇವಿ ಶೆಣೈ ಪುಸ್ತಕ ಬಿಡುಗಡೆಗೊಳಿಸಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿರುವ ವಿಶ್ರಾಂತ ಪ್ರಾಂಶುಪಾಲೆ ಮಿತ್ರಪ್ರಭಾ ಹೆಗ್ಡೆ, ಕಥಾಸಂಕಲನದ ಕಥೆಗಳು ಲಲಿತ ಪ್ರಬಂಧಗಳ ಮಾದರಿಯಲ್ಲಿ ಸುಲಲಿತ ನಿರೂಪಣೆ ಮತ್ತು ತಿಳಿಹಾಸ್ಯದ ಮಿಶ್ರಣದಿಂದ ಕೂಡಿದೆ. ಕಥೆಗಳು ನವಿರಾದ ಅನುಭವ, ನಮ್ಮ ಸುತ್ತಮುತ್ತಲಿನ ಸನ್ನಿವೇಶ ಕಟ್ಟಿಕೊಡುತ್ತಿದೆ ಎಂದರು.
ಜಗದೀಶ್ ಶೆಣೈ, ಸತ್ಯನಾರಾಯಣ ಶೆಣೈ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಗಂಗಾ ನಾಯಕ್ ಪ್ರಾರ್ಥಿಸಿ, ಆರತಿ ಪೈ ಸ್ವಾಗತಿಸಿದರು. ವೈಷ್ಣವಿ ಕಾರ್ಯಕ್ರಮ ನಿರೂಪಿಸಿದರು.
ವಸುಧಾ ಶೆಣೈ ಅವರ ಕಥಾಸಂಕಲನ ಭಾವಾಂತರಂಗ ಬಿಡುಗಡೆ
























