ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳೇ ಆಲ್‌ ದಿ ಬೆಸ್ಟ್….

ವಿದ್ಯಾರ್ಥಿಗಳೇ ….
ನಮಸ್ಕಾರ.. ಮೊದಲಾಗಿ
ಮನದುಂಬಿ ಹಾರೈಸುವೆ ಗೆಲುವು….ನಿಮ್ಮದಾಗಲಿ

ನಿಮ್ಮ ಭವಿಷ್ಯದ ಸುಂದರ ಕನಸುಗಳು ಸಾಕಾರಗೊಳಿಸಲು ಕಾಲ ಕೂಡಿ ಬಂದಿದೆ. ಪ್ರೌಢ ಚಿಂತನೆಯುಳ್ಳ ಪ್ರೌಢ ವಿದ್ಯಾರ್ಥಿಗಳು ನೀವಾಗಿದ್ದೀರಿ….
ಶೈಕ್ಷಣಿಕ ವರ್ಷದ ಕೊನೆಯಲ್ಲಿ ಹತ್ತನೆಯ ತರಗತಿ ವಿದ್ಯಾರ್ಥಿಗಳಿಗೆ ಮಾರ್ಚ್ 31 ರಿಂದ ಏಪ್ರಿಲ್ 15 ರವರೆಗೆ ರಾಜ್ಯಾದ್ಯಂತ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಯಲಿದೆ. ನೀವೂ ಅರ್ಹರಾಗಿದ್ದೀರಿ, ಸಿದ್ಧರಾಗಿದ್ದೀರಿ. ಪ್ರವೇಶ ಪತ್ರವನ್ನು ಪಡೆದಿರುವಿರಿ.
ನಿಮ್ಮ ಬೌದ್ಧಿಕ ಸಾಮರ್ಥ್ಯವನ್ನು ಒರೆಗೆ ಹಚ್ಚುವ ಕಾಲ ಕೂಡಿ ಬಂದಿದೆ ಎಂದು ಅಭಿಮಾನ ಪಟ್ಟುಕೊಳ್ಳಿ. ಜಿಲ್ಲಾಡಳಿತ ಶಿಕ್ಷಣ ಇಲಾಖೆ ಸಕಲ ಸಿದ್ಧತೆಯನ್ನು ಮಾಡಿಕೊಂಡಿದೆ. ಹೆಮ್ಮೆಯ ಎಸ್ಸೆಸ್ಸೆಲ್ಸಿ ವಾರ್ಷಿಕ ಪಬ್ಲಿಕ್ ಪರೀಕ್ಷೆಯ ಹಬ್ಬ ಇದಾಗಿದೆ.. ಯೋಗ್ಯ ಕಲಿಕೆಯ ಮೌಲ್ಯಮಾಪನದ ಸುಯೋಗ ನಿಮ್ಮದಾಗಿದೆ. ಇದೀಗ 2022 -23 ನೇ ಬ್ಯಾಚಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಾಗಿ ಗುರುತಿಸಿಕೊಂಡಿರುವುದಕ್ಕೆ ನಿಮಗೆ ನೀವೇ ಸಾಕ್ಷಿಗಳಾಗಿದ್ದೀರಿ. ಶುಭವಾಗಲಿ ಕಲಿಕೆಯ ಸಾಫಲ್ಯವನ್ನು ಲಿಖಿತ ಪರೀಕ್ಷೆಯ ಮೂಲಕ ಮೌಲ್ಯಮಾಪನ ಮಾಡಲು ಈ ಪರೀಕ್ಷೆಯು ಬಹಳ ಅತ್ಯಗತ್ಯವಾಗಿದೆ.

ಈ ಬಾರಿ ರಾಜ್ಯದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ 15,498 ಶಾಲೆಗಳಿಂದ 8,42,811ವಿದ್ಯಾರ್ಥಿಗಳು ನೋಂದಣಿ ಮಾಡಿಸಿಕೊಂಡಿದ್ದಾರೆ. ಅಂತೆಯೇ 3,305 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಇಲ್ಲಿ ನೀವೂ ಕೂಡ ಒಂದು ಪರೀಕ್ಷಾ ಕೇಂದ್ರದಲ್ಲಿ ಸಾಧಕ ವಿದ್ಯಾರ್ಥಿಯಾಗಿ ಪರೀಕ್ಷೆ ಬರೆಯಲಿದ್ದೀರಿ. ನೀವೂ ಚೆನ್ನಾಗಿ ಬರೆಯುವಿರಿ ಒಳ್ಳೆಯ ಅಂಕ ಪಡೆಯುವಿರಿ ಎನ್ನುವ ವಿಶ್ವಾಸ ನಮ್ಮದು. ಅಂತಹ ಓದಿನ ಸಿದ್ಧತೆ ನೀವು ಮಾಡಿರುವಿರಿ ಇಡೀ ನಾಡೇ ನಿಮಗೆ ಶುಭಾಶಯ ಕೋರಿದೆ.

ಬಹಳ ಹೆಮ್ಮೆಯ ಸಂಗತಿ ನೀವು ರಾಜ್ಯದ ಗಮನವನ್ನು ಸೆಳೆಯುವ ಎಸ್ಸೆಸ್ಸೆಲ್ಸಿ ಪಬ್ಲಿಕ್ ಪರೀಕ್ಷೆಯನ್ನು ಬರೆಯುತ್ತಿದ್ದೀರಿ.

ಈ ಸಂದರ್ಭದಲ್ಲಿ ನಿಮಗೆಲ್ಲರಿಗೂ ಶುಭಾಶಯಗಳನ್ನು ಕೋರುತ್ತಾ ಗೆಲುವು ನಿಮ್ಮದಾಗಲಿ ಎಂದು ಮತ್ತೆ ಮತ್ತೆ ಮತ್ತೆ ಹಾರೈಸುತ್ತಾ ಪರೀಕ್ಷೆಯ ಸಿದ್ಧತೆಗೆ ಪೂರಕವಾಗಬಲ್ಲ ಒಂದಿಷ್ಟು ‌ಸಂಗತಿಗಳನ್ನು ನಿಮಗೆ ತಿಳಿಸುತ್ತಿದ್ದೇವೆ

ಮೊದಲಾಗಿ ಗೆದ್ದೆ ಗೆಲುವೆನೆಂಬ ಆತ್ಮವಿಶ್ವಾಸವನ್ನು ಹೊಂದಿರಿ. ಸಮಯದ ಮೌಲ್ಯವನ್ನರಿತು ಓದಿ ಅನವಶ್ಯಕವಾಗಿ ಸಮಯ ವ್ಯರ್ಥ ಮಾಡದಿರಿ. ಆರೋಗ್ಯವೇ ಭಾಗ್ಯವೆಂದರಿತು ಸರಿಯಾದ ಸಮಯಕ್ಕೆ ಬೆಳಿಗ್ಗೆ ಎದ್ದು ಓದಿರಿ. ರಾತ್ರಿ 10 30 ರಿಂದ ನಿದ್ದೆ ಮಾಡಿ ಬೆಳಿಗ್ಗೆ 5 00 ಗಂಟೆಗೆ ಸರಿಯಾಗಿ ಎದ್ದು ಓದಲು ಸಿದ್ಧತೆ ಮಾಡಿರಿ ಓದಿರಿ. ಈ ಪರೀಕ್ಷೆ ಬರೆಯುವ ಭಾಗ್ಯ ನನ್ನ ಪಾಲಿಗೆ ಬಂದಿರುವುದು ನನ್ನ ಸುಯೋಗ್ಯವೆಂದೇ ಭಾವಿಸಿರಿ.
ಪರೀಕ್ಷೆಯನ್ನು ಗಂಭೀರವಾಗಿ ಪರಿಗಣಿಸಿರಿ. ಪ್ರತೀ ನಿಮಿಷವೂ ಅಮೂಲ್ಯವಾದುದೆಂದು ಸಮಯವನ್ನು ಹೊಂದಿಸಿಕೊಳ್ಳಿರಿ.

ಪ್ರತೀ ಪರೀಕ್ಷೆಗೆ ಆಯಾಯ ಪಠ್ಯ ವಿಷಯಗಳ ಓದಿನ ಸಿದ್ಧತೆಯನ್ನು ಚೆನ್ನಾಗಿ ಮಾಡಿರಿ. ಒಂದು ವಿಷಯದ ಪರೀಕ್ಷೆ ಮುಗಿದ ಬಳಿಕ ಮತ್ತೆ ಅದೇ ಪರೀಕ್ಷೆಯ ಬಗ್ಗೆ ಯೋಚಿಸುತ್ತಾ ಚಿಂತಿಸುತ್ತಾ ಇರಬೇಡಿ. ಬರಲಿರುವ ಪರೀಕ್ಷೆಗೆ ಇನ್ನಷ್ಟು ಚೆನ್ನಾಗಿ ಓದಿ ತಯಾರಾಗಿರಿ ನಿಮಗೆ ದೊರೆತ ಉತ್ತರ ಪತ್ರಿಕೆಯಲ್ಲಿ ಹಾಗೂ ಪ್ರಶ್ನಾಪತ್ರಿಕೆಯಲ್ಲಿ ಮುದ್ರಣ ದೋಷವಿದ್ದಲ್ಲಿ ಉತ್ತರಿಸುವ ಮೊದಲೇ ಕೊಠಡಿ ಮೇಲ್ವಿಚಾರಕರಿಗೆ ತಿಳಿಸಿರಿ. ಅವರು ನಿಮಗೆ ಸರಿಯಾಗಿರುವುದನ್ನೇ ನೀಡುವರು.ಪ್ರಶ್ನೆ ಪತ್ರಿಕೆಯನ್ನು ಚೆನ್ನಾಗಿ ಓದಿರಿ ಸೂಚನೆಗಳನ್ನು ಮತ್ತೆ ಅರ್ಥೈಹಿಸಿ ಉತ್ತರಿಸಲು ಆರಂಭಿಸಿರಿ. ಅಕ್ಷರ ಚೆಂದವಾಗಿರುವಂತೆ ಬರೆಯಿರಿ ಪ್ರತೀ ಪ್ರಶ್ನೆಯ ಸಂಖ್ಯೆಯನ್ನು ಬರೆಯಲು ಮರೆಯದಿರಿ ಹಾಗೆಯೇ ಪ್ರತೀ ಪ್ರಶ್ನೆಯ ಅಂಕವನ್ನು ಗಮನಿಸಿ ಉತ್ತರಿಸಿರಿ. ಪರೀಕ್ಷೆಗೆ ಬೇಕಾಗುವ ಪೆನ್ನು ಪೆನ್ಸಿಲ್ ಕಂಪಾಸ್ ನೆನಪಿನಲಿ ತೆಗೆದುಕೊಳ್ಳಿ. ಪ್ರತೀ ಪ್ರಶ್ನೆಗೆ ಉತ್ತರಿಸಿರಿ ಯಾವುದೇ ಪ್ರಶ್ನೆ ಗಳನ್ನು ಬಿಡಬೇಡಿ ಪ್ರಶ್ನೆಗಳಲ್ಲಿ ಆಯ್ಕೆ ಇದ್ದರೆ ಗಮನಿಸಿ ಉತ್ತರಿಸಿರಿ. ಶಿಕ್ಷಕರು ಸೂಚಿಸಿದ ಸಮಯಕ್ಕೆ ಸರಿಯಾಗಿ ಪರೀಕ್ಷಾ ಕೇಂದ್ರವನ್ನು ತಲುಪಿರಿ. ಯಾವುದೇ ಧಾವಂತವಿಲ್ಲದೇ ಯಾವುದೇ ಒತ್ತಡವಿಲ್ಲದೇ ಭಯವಿಲ್ಲದೇ…ಪರೀಕ್ಷೆ ಬರೆಯಿರಿ.. ಪರೀಕ್ಷಾ ಕೇಂದ್ರಕ್ಕೆ ಬರುವ ಮೊಧಲು ಮತ್ತೊಮ್ಮೆ ಪ್ರವೇಶ ಪತ್ರ ತಮ್ಮಲ್ಲಿ ಇದೆಯೋ ಎಂದು ಖಾತ್ರಿಪಡಿಸಿಕೊಳ್ಳಿ. ಹಾಗೆಯೇ ಪರೀಕ್ಷೆ ಬರೆಯಲು ಕುಳಿತುಕೊಳ್ಳುವ ಕೊಠಡಿ ಸಂಖ್ಯೆಯನ್ನು ಗಮನಿಸಿಕೊಳ್ಳಿ. ಪ್ರತೀ ಪರೀಕ್ಷೆಯು ಆರಂಭವಾಗುವ ಮತ್ತು ಮುಕ್ತಾಯಗೊಳ್ಳುವ ಸಮಯವನ್ನು ಸರಿಯಾಗಿ ತಿಳಿದುಕೊಳ್ಳಿರಿ. ಪರೀಕ್ಷಾ ಕೇಂದ್ರಕ್ಕೆ ಬಂದಾಗ ಕೇಳಬೇಕಾದ ಮಾಹಿತಿಯನ್ನು ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರಿಂದ ಇಲ್ಲವೇ ಉಪಅಧೀಕ್ಷಕರಿಂದ ಹಾಗೆಯೇ ಕರ್ತವ್ಯ ನಿರತ ಅಧಿಕಾರಿಗಳಿಂದ ಶಿಕ್ಷಕರಿಂದ ಯಾರಲ್ಲೂ ಮಾಹಿತಿ ಪಡೆಯಿರಿ. ಇವರೆಲ್ಲರೂ ನಿಮಗೆ ಸರಿಯಾದ ಮಾಹಿತಿ ನೀಡುವರು.
ಪರೀಕ್ಷಾ ಪ್ರವೇಶ ಪತ್ರದಲ್ಲಿ ದಿನಾಂಕ ಸಮಯ ಮತ್ತು ಪರೀಕ್ಷಾ ಕೇಂದ್ರದ ಸ್ಥಳವನ್ನು ಸ್ಪಷ್ಟಪಡಿಸಿಕೊಳ್ಳಿ.

ನಿಮ್ಮ ಮನೆಗೂ ಪರೀಕ್ಷಾ ಕೇಂದ್ರಕ್ಕೂ ಇರುವ ದೂರವನ್ನು ಸಮಯವನ್ನು ಗಮನಿಸಿಕೊಂಡು ಮನೆಯವರ ಸಹಾಯ ಪಡೆದು ಸರಿಯಾದ ಸಮಯಕ್ಕೆ ಪರೀಕ್ಷಾ ಕೇಂದ್ರವನ್ನು ತಲುಪಿರಿ. ಪರೀಕ್ಷಾ ಕೊಠಡಿಯಲ್ಲಿ ಪರೀಕ್ಷಾ ನಿಯಮವನ್ನು ಪಾಲಿಸಿರಿ. ಜವಾಬ್ದಾರಿಯುತವಾಗಿ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಮಹತ್ವವನ್ನು ಅರಿತು ಬರೆಯಿರಿ ಯಶಸ್ವಿಯಾಗಿರಿ. ನಿಮ್ಮ ಪೋಷಕರ ಪ್ರೀತಿ ಮತ್ತು ಆಶೀರ್ವಾದ ಪಡೆಯಿರಿ. ನಿಮ್ಮ ಆತ್ಮವಿಶ್ವಾಸದ ಗೆಲುವನ್ನು ತೋರಿಸಿ ಎಲ್ಲರಿಗೂ ಮಾದರಿಯಾಗಿರಿ. ಪರೀಕ್ಷಾ ಓದಿನ ಸಿದ್ಧತೆಯಲ್ಲಿ ಏನೇ ಸಂದೇಹ ಕಂಡು ಬಂದರೂ ನಿಮ್ಮ ಶಿಕ್ಷಕರಿಗೆ ತಿಳಿಸಿರಿ ಪರಿಹಾರ ಕಂಡುಕೊಳ್ಳಿರಿ. ಪ್ರತೀ ಶಿಕ್ಷಕರು ನಿಮ್ಮ ಒಳಿತಿಗಾಗಿ ಸದಾ ಸಿದ್ಧರಿರುವರು

ಈ ಪರೀಕ್ಷೆಯು ನಿಮ ಶೈಕ್ಷಣಿಕ ಸಾಧನೆಗೆ ಮೊದಲ ಹೆಜ್ಜೆಗಳ ಗುರುತಾಗಿದೆ. ಖುಷಿ ಖುಷಿಯಿಂದಲೇ ಪರೀಕ್ಷೆಗೆ ಬನ್ನಿ. ಶಿಕ್ಷಣ ಇಲಾಖಾಧಿಕಾರಿಗಳು ಶಿಕ್ಷಕರು ಪೋಷಕರು ವಿದ್ಯಾಭಿಮಾನಿ ಬಂಧುಗಳು ಎಂದೆಂದೂ ನಿಮ್ಮನ್ನು ಪ್ರೋತ್ಸಾಹಿಸುವರು..ಹರಸುವರು. ಉತ್ತಮ ಪರೀಕ್ಷಾ ವಾತಾವರಣ ನಿಮಗಾಗಿ ಕಾದಿದೆ ಉತ್ತಮ ಅಂಕಗಳು ನಿಮಗೆ ಬರಲಿ ಮುಂದಿನ ವ್ಯಾಸಂಗ ಸುಗಮವಾಗಲಿ.

All the best good luck

ಚೆನ್ನಾಗಿ ಯೋಚಿಸಿರಿ ಚೆನ್ನಾಗಿ ಬರೆಯಿರಿ
ಗೆಲುವು ನಿಮ್ಮದೇ…..

ಕೊನೆಯ tips….ನೆನಪಿಟ್ಟು ಕೇಳಿ

ಕಾಲ ಮಿಂಚಿಲ್ಲ..ಒಳ್ಳೆಯ ಫಲಿತಾಂಶಕ್ಕೆ ಬೆಲೆಬಾಳುವ ಸಮಯ ಕಾದಿದೆ.. ಇರುವ ಸಮಯವನ್ನು ಸದುಪಯೋಗಪಡಿಸುವ ಜಾಣತನ ನಿಮ್ಮದಾಗಲಿ..

ಶುಭವಾಗಲಿ
✒️ಗಣೇಶ್ ಜಾಲ್ಸೂರು
ಶಿಕ್ಷಕರು ಕಾರ್ಕಳ

































































































error: Content is protected !!
Scroll to Top