ಕಾರ್ಕಳ : ಪುರಸಭೆಯ ಸ್ಥಾಯಿ ಸಮಿತಿ ನೂತನ ಅಧ್ಯಕ್ಷರಾಗಿ 13ನೇ ವಾರ್ಡ್ ಸದಸ್ಯ ಪ್ರದೀಪ್ ರಾಣೆ ಅವರನ್ನು ಆಯ್ಕೆ ಮಾಡಲಾಯಿತು. ಮಮತಾ ಅವರು ಪ್ರದೀಪ್ ಅವರ ಹೆಸರನ್ನು ಅಧ್ಯಕ್ಷ ಸ್ಥಾನಕ್ಕೆ ಸೂಚಿಸಿದ್ದು, ಭಾರತಿ ಅಮೀನ್ ಅನುಮೋದಿಸಿದರು. ಮುಂದಿನ ಒಂದು ವರ್ಷದ ಅವಧಿಗೆ ಅವರು ಸ್ಥಾಯಿ ಸಮಿತಿ ಅಧ್ಯಕ್ಷರಾಗಿರಲಿದ್ದು, ಸದಸ್ಯರಾಗಿ ನೀತಾ ಆಚಾರ್ಯ, ಸೋಮನಾಥ, ವಿನ್ನಿ ಬೋಲ್ಡ್ ಮೆಂಡೋನ್ಸಾ, ಮಮತಾ, ಭಾರತಿ ಅಮೀನ್, ಮೀನಾಕ್ಷಿ, ಹರೀಶ್ ದೇವಾಡಿಗ, ಪ್ರಭಾ ಕಾರ್ಯನಿರ್ವಹಿಸಲಿದ್ದಾರೆ.





























































