ಮಾ. 8 : ತೆಳ್ಳಾರು ಕನ್ನಡಿ ಶ್ರೀ ಜಲದುರ್ಗಾ ದೇವಸ್ಥಾನದ ವರ್ಧಂತಿ ಉತ್ಸವ

ಶಿವ ಭಕ್ತ ವೀರಮಣಿ – ಯಕ್ಷಗಾನ ತಾಳಮದ್ದಲೆ

ಕಾರ್ಕಳ : ತೆಳ್ಳಾರು ಕನ್ನಡಿ ಶ್ರೀ ಜಲದುರ್ಗಾ ದೇವಸ್ಥಾನದ ವರ್ಧಂತಿ ಉತ್ಸವವು ಮಾ. 8 ರಂದು ಜರುಗಲಿದೆ. ವೇದಮೂರ್ತಿ ಜಾರ್ಕಳ ಶ್ರೀ ಪ್ರಸಾದ ತಂತ್ರಿಯವರ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳು ನೆರವೇರಲಿದೆ. ಅಂದು ಬೆಳಗ್ಗೆ 8:30 ಗಂಟೆಗೆ ಶ್ರೀ ದೇವತಾ ಪ್ರಾರ್ಥನೆ, ತೋರಣ ಮುಹೂರ್ತ, ಗಣಹೋಮ, ನವಕ ಪ್ರಧಾನ ಹೋಮ ಹಾಗೂ ಕಲಶಾಭಿಷೇಕ, ಮಧ್ಯಾಹ್ನ 11 ಗಂಟೆಗೆ ಶ್ರೀ ಜಲದುರ್ಗಾ ಭಜನಾ ಮಂಡಳಿಯಿಂದ ಭಜನೆ, 12:30 ಗಂಟೆಗೆ ಮಹಾಪೂಜೆ, ಪಲ್ಲಪೂಜೆ ನಂತರ ಅನ್ನಸಂತರ್ಪಣೆ ನಡೆಯಲಿದೆ.

ಮಧ್ಯಾಹ್ನ 2 ಗಂಟೆಯಿಂದ ಯಕ್ಷಜಲ ಕಲಾಸೇವೆ ಗೆಳೆಯರ ಬಳಗದ ಸಂಯೋಜನೆಯಲ್ಲಿ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ಶಿವ ಭಕ್ತ ವೀರಮಣಿ ಯಕ್ಷಗಾನ ತಾಳಮದ್ದಲೆ ನಡೆಯಲಿದೆ. ಭಾಗವತರಾಗಿ ರವಿಚಂದ್ರ ಕನ್ನಡಿಕಟ್ಟೆ, ಮದ್ದಲೆ- ಚೈತನ್ಯ ಕೃಷ್ಣ ಪದ್ಯಾಣ, ಚೆಂಡೆ-ಶ್ರೀಧರ್‌ ವಿಟ್ಲ, ಅರ್ಥಧಾರಿಗಳಾಗಿ ಹನುಮಂತ ಪಾತ್ರದಲ್ಲಿ ಜಬ್ಬಾರ್‌ ಸಮೋ, ಈಶ್ವರ ಪಾತ್ರಧಾರಿಯಾಗಿ ಪೆರ್ಮುದೆ ಜಯಪ್ರಕಾಶ್‌, ವೀರಮಣಿ ಪಾತ್ರದಲ್ಲಿ ಗಣೇಶ್‌ ಶೆಟ್ಟಿ, ಶತ್ರುಘ್ನನಾಗಿ ಸದಾಶಿವ ಆಳ್ವ, ಶ್ರೀರಾಮ ಪಾತ್ರಧಾರಿಯಾಗಿ ಪೃಥ್ವಿ ಎನ್.‌ ಇರಲಿದ್ದಾರೆ. ಸಂಜೆ 6:15 ಜಲದುರ್ಗಾ ಭಜನಾ ಮಂಡಳಿಯ ಪ್ರಾಯೋಜಕತ್ವದಲ್ಲಿ ಕಾಂತರಗೋಳಿಯ ಶ್ರೀ ಪೃಥ್ವಿ ಸಂತೋಷಿಮಾ ಭಜನಾ ಮಂಡಳಿಯವರಿಂದ ಕುಣಿತ ಭಜನೆ, 7.30ಕ್ಕೆ ರಂಗಪೂಜೆ, ಪ್ರಸಾದ ವಿತರಣೆ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.









































































































error: Content is protected !!
Scroll to Top