ಮಾಜಿ ಸಿಎಂ ಯಡಿಯೂರಪ್ಪ ಹೆಲಿಕಾಪ್ಟರ್ ಲ್ಯಾಡಿಂಗ್‌ ಸಂದರ್ಭ ಭದ್ರತಾ ಲೋಪ

ಕಲಬುರಗಿ : ಮಾಜಿ ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ಹೆಲಿಕಾಪ್ಟರ್ ಲ್ಯಾಂಡಿಂಗ್ ವೇಳೆ ಭದ್ರತಾ ಲೋಪವಾಗಿರುವ ಘಟನೆಯೊಂದು ಕಲಬುರಗಿ ಜಿಲ್ಲೆಯ ಜೇವರ್ಗಿ ಪಟ್ಟಣ ಹೊರವಲಯದಲ್ಲಿ ನಿರ್ಮಿಸಲಾಗಿರುವ ಹೆಲಿಪ್ಯಾಡ್​​ನಲ್ಲಿ ಮಾ. 6 ರಂದು ನಡೆದಿದೆ.

ವಿಜಯ ಸಂಕಲ್ಪ ರಥಯಾತ್ರೆ ಸಂಬಂಧ ಯಡಿಯೂರಪ್ಪ ಜೇವರ್ಗಿಗೆ ಆಗಮಿಸಿದ್ದರು. ಹೆಲಿಪ್ಯಾಡ್‌ನಲ್ಲಿ ಹೆಲಿಕಾಪ್ಟರ್ ಲ್ಯಾಂಡ್ ಆಗುವ ಸಂದರ್ಭ ಇದ್ದಕ್ಕಿದ್ದಂತೆ ಪ್ಲಾಸ್ಟಿಕ್ ಚೀಲಗಳು ಹಾರಿಬಂದಿದ್ದು, ಕೂಡಲೇ ಎಚ್ಚೆತ್ತ ಪೈಲೆಟ್‌ ಹೆಲಿಕಾಪ್ಟರ್​ನ್ನು ಲ್ಯಾಂಡ್​ ಮಾಡದೆ ಬೇರೆಡೆ ತೆಗೆದುಕೊಂಡು ಹೋದರು. ಇದರಿಂದಾಗಿ ಕೆಲಕಾಲ ಆತಂಕ ಸೃಷ್ಟಿಯಾಗಿತ್ತು. ನಂತರ ಪೈಲೆಟ್ ಒಂದೆರಡು ಸುತ್ತು ಹೆಲಿಕಾಪ್ಟರ್​ನ್ನು ಆಗಸದಲ್ಲಿಯೇ ಹಾರಾಟ ನಡೆಸಿದರು. ಈ ವೇಳೆ ಸ್ಥಳದಲ್ಲಿದ್ದ ಪೊಲೀಸರು ಪ್ಲಾಸ್ಟಿಕ್ ಚೀಲಗಳನ್ನು ತೆರವುಗೊಳಿಸಿದರು. ನಂತರ ಪೈಲೆಟ್ ಹೆಲಿಕಾಪ್ಟರ್’ನ್ನು ಲ್ಯಾಂಡ್​ ಮಾಡಿದರು.​​

ಜೇವರ್ಗಿ ಪಟ್ಟಣದ ಹೆಲಿಪ್ಯಾಡ್ ಸಮೀಪ ಹೊಲಗಳಿವೆ. ಹೆಲಿಕಾಪ್ಟರ್ ಕೆಳಗೆ ಬಂದಾಗ ಅದರ ಗಾಳಿಯ ತೀವ್ರತೆಗೆ ಹೊಲದಲ್ಲಿ ರೈತರು ಹಾಕಿದ್ದ ಪ್ಲಾಸ್ಟಿಕ್ ಚೀಲಗಳು ಹಾರಿ ಬಂದವು. ಅವರು ಹೆಲಿಪ್ಯಾಡ್‌ ಸುತ್ತ ಬಂದು ಹೆಲಿಕಾಪ್ಟರ್‌ ರೆಕ್ಕೆಗೆ ಸಿಲುಕುವ ಅಪಾಯವಿತ್ತು. ಆದ್ದರಿಂದ ಹೆಲಿಕಾಪ್ಟರ್ ಲ್ಯಾಂಡ್ ಮಾಡಲಿಲ್ಲ.









































































































error: Content is protected !!
Scroll to Top