ಇಪಿಎಫ್‌ಒನಲ್ಲಿ 577 ಹುದ್ದೆಗಳಿಗೆ ನೇಮಕಾತಿ

ಹೊಸದಿಲ್ಲಿ : ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (ಯುಪಿಎಸ್‌ಸಿ) ಉದ್ಯೋಗಿ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ)ದಲ್ಲಿ ಖಾಲಿ ಇರುವ 577 ಹುದ್ದೆಗಳಿಗೆ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
577 ಎನ್‌ಪೋರ್ಸ್‌ಮೆಂಟ್‌ ಅಧಿಕಾರಿ, ಅಕೌಂಟ್ಸ್ ಅಧಿಕಾರಿ ಮತ್ತು ಸಹಾಯಕ ಭವಿಷ್ಯ ನಿಧಿ ಆಯುಕ್ತರ ಹುದ್ದೆಗಳು ಖಾಲಿ ಇವೆ. ಹುದ್ದೆಗಳಿಗೆ ನೋಂದಣಿ ಫೆ.25 ರಂದು ಪ್ರಾರಂಭವಾಗಿ ಮಾರ್ಚ್ 17ರಂದು ಮುಕ್ತಾಯಗೊಳ್ಳುದೆ. ಎನ್‌ಪೋರ್ಸ್‌ಮೆಂಟ್‌ ಅಧಿಕಾರಿ/ಖಾತೆ ಅಧಿಕಾರಿ 418 ಹುದ್ದೆಗಳಿದ್ದರೆ, ಸಹಾಯಕ ಭವಿಷ್ಯ ನಿಧಿ ಆಯುಕ್ತರ 159 ಹುದ್ದೆಗಳಿವೆ.
ಕನಿಷ್ಠ ವಯಸ್ಸಿನ ಮಿತಿ 18 ವರ್ಷ ಮತ್ತು ಗರಿಷ್ಠ ವಯಸ್ಸು 35 ವರ್ಷ . ಪರೀಕ್ಷೆಯನ್ನು ಆಫ್‌ಲೈನ್‌ನಲ್ಲಿ ನಡೆಸಲಾಗುವುದು. ಪ್ರಶ್ನೆಗಳು ಬಹು ಆಯ್ಕೆಗಳಾಗಿರುತ್ತದೆ ಮತ್ತು ಒಟ್ಟು ಅಂಕಗಳು 100 ಆಗಿರುತ್ತದೆ.
UPSC ವೆಬ್‌ಸೈಟ್‌ http://www.upsc.gov.in ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.





























































































































error: Content is protected !!
Scroll to Top