ಕಂದಾಯ ಇಲಾಖೆಯಲ್ಲಿ 2 ಸಾವಿರ ಹುದ್ದೆಗಳಿಗೆ ನೇಮಕಾತಿ

ಫೆ. 20-ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ

ಬೆಂಗಳೂರು : ರಾಜ್ಯ ಕಂದಾಯ ಇಲಾಖೆಯಲ್ಲಿ ಖಾಲಿ ಇರುವ 2000 ಸರ್ವೇ ಸೆಟಲ್​ಮೆಂಟ್​ ಹಾಗೂ ಲ್ಯಾಂಡ್​ ರೆಕಾರ್ಡ್ಸ್ (SSLR)​ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಫೆ. 20ರೊಳಗೆ ಅರ್ಜಿ ಸಲ್ಲಿಸಬೇಕು.
ಪ್ರತಿ ಜಿಲ್ಲೆಯಲ್ಲಿ ಹುದ್ದೆಗಳು ಖಾಲಿ ಇವೆ. ಆಯಾ ಜಿಲ್ಲೆಯ ಅರ್ಹ ಅಭ್ಯರ್ಥಿಗಳೇ ಅರ್ಜಿ ಸಲ್ಲಿಸಿ, ಸರ್ಕಾರಿ ಉದ್ಯೋಗ ಪಡೆಯಬಹುದು. ಆನ್​ಲೈನ್​ (https://landrecords.karnataka.gov.in/service201/)​ ಮೂಲಕ ಅರ್ಜಿ ಸಲ್ಲಿಸಬೇಕು.
ಲೈಸೆನ್ಸ್​ಡ್​​ ಲ್ಯಾಂಡ್​ಲಾರ್ಡ್ಸ್ ಹುದ್ದೆಗೆ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಲ್ಲಿ ಪಿಯುಸಿ, ಡಿಪ್ಲೋಮಾ, ಬಿಇ/ಬಿ.ಟೆಕ್, ಐಟಿಐ ಕಡ್ಡಾಯವಾಗಿ ಉತ್ತೀರ್ಣರಾಗಿರಬೇಕು
ಅಭ್ಯರ್ಥಿಗಳು 2023 ಫೆಬ್ರವರಿ 20ಕ್ಕೆ ಕನಿಷ್ಠ 18 ವರ್ಷ ಆಗಿರಬೇಕು. ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ಇದೆ. ಅರ್ಜಿ ಶುಲ್ಕ ಆನ್‌ಲೈನ್‌ನಲ್ಲಿ ಪಾವತಿಸಬೇಕು. ಇನ್ನೂ ಇತರ ಶುಲ್ಕ ಇದೆ. ಟ್ರೈನಿಂಗ್ ಶುಲ್ಕ 5000 ರೂ. ಡಿಮ್ಯಾಂಡ್ ಡ್ರಾಫ್ಟ್​ ಮೂಲಕ ಹಾಗೂ ಲೈಸೆನ್ಸ್​ ಶುಲ್ಕ 3000 ರೂಪಾಯಿ ಪಾವತಿಸಬೇಕು. ಅಭ್ಯರ್ಥಿಗಳು ಕರ್ನಾಟಕ ಸರ್ಕಾರದ ಲ್ಯಾಂಡ್ ಸರ್ವೇ ರೆವೆನ್ಯೂ ಸಿಸ್ಟಮ್​ನಲ್ಲಿ ಕನಿಷ್ಠ 10 ವರ್ಷಗಳ ಕಾಲ ಕೆಲಸ ಮಾಡಿದ ಅನುಭವ ಹೊಂದಿರಬೇಕು ಎಂದು ಇಲಾಖೆ ಹೇಳಿದೆ. ಅರ್ಜಿ ಸಲ್ಲಿಸಿದ ಬಳಿಕ ಆಯ್ಕೆ ಮಾಡಲಾಗುವ ಅಭ್ಯರ್ಥಿಗಳಿಗೆ ಆನ್​ಲೈನ್ ಮೂಲಕವೇ ಟೆಸ್ಟ್​ ಇರಲಿದ್ದು, ನಂತರ ಲಿಖಿತ ಮೂಲಕವು ಪರೀಕ್ಷೆ ಒಂದನ್ನು ಎದುರಿಸಬೇಕು. ಹೆಚ್ಚಿನ ಮಾಹಿತಿಗೆ 080-22221038ಕ್ಕೆ ಕರೆ ಮಾಡಬಹುದು.





























































































































error: Content is protected !!
Scroll to Top