ಕಾರ್ಕಳ : ಮಾಜಿ ಸೈನಿಕರ ವೇದಿಕೆ ಕಾರ್ಕಳ – ಮೂಡಬಿದ್ರೆ ಇದರ ವತಿಯಿಂದ ಆನೆಕೆರೆ ಅಮರ್ ಜವಾನ್ ಯುದ್ಧ ಸ್ಮಾರಕದ ಆವರಣದಲ್ಲಿ ಗಣರಾಜ್ಯೋತ್ಸವ ಆಚರಿಸಲಾಯಿತು.
ನವನಂದ, ಶ್ರೀ ರವಿಶಂಕರ್ ಗುರೂಜಿ ಶಾಲೆಯ ವಿದ್ಯಾರ್ಥಿನಿ ಪ್ರಾಚಿ ಗಣರಾಜ್ಯೋತ್ಸವ ಕುರಿತು ಮಾತನಾಡಿದರು. ಮಾಜಿ ಸೈನಿಕರ ವೇದಿಕೆ ಅಧ್ಯಕ್ಷ ದೊಂಬಯ್ಯ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸೈನಿಕರ ವೇದಿಕೆ ಉಪಾಧ್ಯಕ್ಷ ಹಿರಿಯಣ್ಣ, ಕಾರ್ಯದರ್ಶಿ ರಾಜೇಶ್ ಕೆ., ಮಾಜಿ ಸೈನಿಕ ವಿಜಯಾನಂದ್ ಕೆ. ಪುರಸಭಾ ಮಾಜಿ ಸದಸ್ಯ ಪ್ರಕಾಶ್ ರಾವ್, ಶ್ರೀ ರವಿಶಂಕರ್ ಗುರೂಜಿ ಹಾಗೂ ರಾಮಪ್ಪ ಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು, ಸ್ವಚ್ಛ ಕಾರ್ಕಳ ಬ್ರಿಗೇಡ್, ವಿನಾಯಕ ಫ್ರೆಂಡ್ಸ್ ಕಾರ್ಕಳ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನ ಪ್ರಮುಖರು ಹಾಗೂ ಸದಸ್ಯರು ಈ ಸಂದರ್ಭ ಉಪಸ್ಥಿತರಿದ್ದರು. ಗಿಲ್ಬರ್ಟ್ ಬ್ರಗಂಝ ವಂದಿಸಿದರು.
