ಫೆಬ್ರವರಿಯಲ್ಲಿ ಅಂಗನವಾಡಿಗಳಲ್ಲಿ ಎನ್‌ಇಪಿ ಜಾರಿ

20 ಸಾವಿರ ಅಂಗನವಾಡಿಗಳಿಗೆ ಎನ್‌ಇಪಿ ಪಠ್ಯಕ್ರಮ

ಬೆಂಗಳೂರು: ರಾಜ್ಯಾದ್ಯಂತ ಸುಮಾರು 400 ರಿಂದ 500 ಆಯ್ದ ಶಾಲೆಗಳಲ್ಲಿ ಮುಂದಿನ ತಿಂಗಳು ರಾಷ್ಟ್ರೀಯ ಶಿಕ್ಷಣ ನೀತಿ-2020 ಜಾರಿಗೆ ತರಲಾಗುವುದು ಎಂದು ಕರ್ನಾಟಕ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಬಿ.ಸಿ.ನಾಗೇಶ್ ಹೇಳಿದ್ದಾರೆ.
ಆರಂಭಿಕ ಹಂತದಲ್ಲಿ ಅನುಷ್ಠಾನ ದೊಡ್ಡ ರೀತಿಯಲ್ಲಿ ಆಗುವುದಿಲ್ಲ. ಅಂಗನವಾಡಿಗಳು ಮತ್ತು ನರ್ಸರಿಗಳಿಗೆ ಮಾತ್ರ ಸೀಮಿತವಾಗಿರುತ್ತದೆ, ಶಿಕ್ಷಕರು ಎನ್‌ಇಪಿಯ ಪಠ್ಯದಂತೆ ಹೆಚ್ಚು ಚಟುವಟಿಕೆ ಆಧಾರಿತ ಕಲಿಕೆ ಮತ್ತು ಆಟದ ಕಲಿಕೆಯ ಕ್ರಮಕ್ಕೆ ಕಲಿಕಾ ಕ್ರಮವನ್ನು ಬದಲಾಯಿಸುತ್ತಾರೆ. ಪ್ರಸ್ತುತ ಪಠ್ಯಕ್ರಮದಲ್ಲಿ ಅಗತ್ಯ ಬದಲಾವಣೆಗಳನ್ನು ಇಲಾಖೆ ಅಂತಿಮಗೊಳಿಸುತ್ತಿದೆ ಎಂದು ನಾಗೇಶ್ ತಿಳಿಸಿದ್ದಾರೆ.
ಸುಮಾರು 20 ಸಾವಿರ ಅಂಗನವಾಡಿಗಳು ಎನ್‌ಇಪಿ ಪಠ್ಯಕ್ರಮ ಅನುಸರಿಸಲಿವೆ, ಎನ್‌ಇಪಿ ಅನುಷ್ಠಾನ ಆಯ್ದ ಶಾಲೆಗಳಿಗೆ ಸೀಮಿತವಾಗಿರುತ್ತದೆ. ಅಂಗನವಾಡಿಗಳಲ್ಲಿ ಶಿಕ್ಷಕರಿಗೆ ಮತ್ತು ಪಾಲಕರಿಗೆ ತರಬೇತಿ ನೀಡುವ ಪ್ರಕ್ರಿಯೆಯೂ ನಡೆಯುತ್ತಿದೆ ಎಂದು ಹೇಳಿದರು.

















































error: Content is protected !!
Scroll to Top