ಪರಶುರಾಮ ಥೀಂ ಪಾರ್ಕ್‌ ಸ್ವಚ್ಛತಾ ಶ್ರಮದಾನದ ಪೂರ್ವಭಾವಿ ಸಭೆ

ಕಾರ್ಕಳ : ಪರಶುರಾಮ ಥೀಂ ಪಾರ್ಕ್‌ ಉದ್ಘಾಟನೆಗೆ ಮುಂಚಿತವಾಗಿ ಜ. 22 ರಂದು ಜೋಡುರಸ್ತೆಯಿಂದ ಬೈಲೂರುವರೆಗೆ ನಡೆಯುವ ಸಾಮೂಹಿಕ ಸ್ವಚ್ಚತಾ ಕಾರ್ಯ ಹಾಗೂ ಜ.27 ರಿಂದ 29 ರವರೆಗೆ ಥೀಮ್‌ ಪಾರ್ಕ್‌ನಲ್ಲಿ ಕೈಗೊಳ್ಳುವ ಸ್ವಚ್ಚತೆಯ ಸಲುವಾಗಿ ಶುಕ್ರವಾರ ಬೆಳಗ್ಗೆ 10.30ಕ್ಕೆ ಕಾರ್ಕಳ ತಾ. ಪಂ. ಸಭಾಭವನದಲ್ಲಿ ಪೂರ್ವಭಾವಿ ಸಭೆ ನಡೆಯಿತು. ಶ್ರಮದಾನ ಮೂಲಕ ಬೈಲೂರು ಪರಿಸರವನ್ನು ಸ್ವಚ್ಛಗೊಳಿಸುವ ಬಗ್ಗೆ ಚರ್ಚಿಸಲಾಯಿತು. ತಾ. ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗುರುದತ್ ಎಂ.ಎನ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಎಲ್ಲ ಸ್ವಯಂಸೇವಕ ತಂಡಗಳು ಕ್ಲಪ್ತ ಸಮಯಕ್ಕೆ ಬಂದು ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಳ್ಳಬೇಕು. ತಂಡಗಳಿಗೆ ವಿಭಾಗವಾರು ಜವಾಬ್ದಾರಿ ಹಂಚಲಾಗಿದ್ದು, ಸ್ವಯಂಸೇವಕರು ಹೊಣೆ ಅರಿತು ಸ್ವಚ್ಛತಾ ಕಾರ್ಯದಲ್ಲಿ ಕೈಜೋಡಿಸಬೇಕೆಂದು ವಿನಂತಿಸಿದರು.
ಈ ಸಭೆಯಲ್ಲಿ ಹೆಬ್ರಿ ತಾ. ಪಂ. ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ್, ಜಿಲ್ಲಾ ಪಂಚಾಯತ್ ಎಸ್‌ಬಿಎಂ ಸಂಯೋಜಕ ರಘುನಾಥ, ಸ್ವಚ್ಛತಾ ತಂಡದ ಪ್ರಬಂಧಕ ಪ್ರಕಾಶ ಬಲಿಪ, ಪುರಸಭೆ ಆರೋಗ್ಯ ನಿರೀಕ್ಷಕಿ ಲೈಲಾ ಥಾಮಸ್, ಬಿಗ್ರೇಡ್ ಸ್ವಚ್ಛತಾ ತಂಡದ ಪ್ರತಿನಿಧಿಗಳು, ಎಸ್‌ಎಲ್‌ಆರ್‌ಎಂ ಘಟಕದ ಮಾಧವಿ, ಟಿಪ್ಸ್ ಚಾರಿಟೆಬಲ್ ಟ್ರಸ್ಟ್ ಪ್ರತಿನಿಧಿಗಳು, ತಾಲೂಕಿನ ಎಲ್ಲ ಪಂಚಾಯತ್‌ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು, ಲೆಕ್ಕ ಸಹಾಯಕರು ಹಾಗೂ ವಿವಿಧ ಸ್ವಯಂ ಸೇವಾ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.

















































error: Content is protected !!
Scroll to Top