ಹೆಬ್ರಿಯ ಅಮೃತ ಭಾರತಿ ಶಿಕ್ಷಣ ಸಂಸ್ಥೆಯಲ್ಲಿ ಮಾತೃ ವಂದನಾ ಕಾರ್ಯಕ್ರಮ

ಹೆತ್ತವರ ಸೇವೆಯಿಂದ ಬದುಕು ಸಾರ್ಥಕ – ದಾಮೋದರ ಶರ್ಮಾ

ಹೆಬ್ರಿ : ಹೆತ್ತವರ ಪ್ರಾಮಾಣಿಕ ಪ್ರಯತ್ನಕ್ಕೆ ಬೆಂಬಲವಾಗಿ ನಿಂತು ಅವರ ಘನತೆ, ಗೌರವಕ್ಕೆ ಚ್ಯುತಿ ಬಾರದಂತೆ ಬದುಕಿ, ಸಾಧನೆಯ ಎಸಲುಗಳಿಂದ ತಂದೆ ತಾಯಿಯನ್ನು ಪೂಜಿಸಿದಾಗ ಜೀವನ ಸಾರ್ಥಕವಾಗುವುದು. ವಿದ್ಯಾರ್ಥಿಗಳಲ್ಲಿ ಸಂಸ್ಕಾರಯುತ ವ್ಯಕ್ತಿತ್ವ ಮೈಗೂಡಿಸುವ, ದೇಶದ ಸಂಸ್ಕೃತಿಯನ್ನು ಬಿತ್ತರಿಸುವಂತಹ ಕಾರ್ಯಕ್ರಮದ ಮೂಲಕ ಭವ್ಯ ಭಾರತಕ್ಕೆ ಅಮೃತ ಭಾರತಿ ವಿದ್ಯಾಸಂಸ್ಥೆ ಮಹತ್ತರವಾದ ಕೊಡುಗೆ ನೀಡುತ್ತಿದೆ ಎಂದು ಚಿಂತಕ ದಾಮೋದರ ಶರ್ಮಾ ಬಾರ್ಕೂರು ಹೇಳಿದರು.
ಅವರು ಪಾಂಡುರಂಗ ರಮಣ ನಾಯಕ್‌ ಅಮೃತ ಭಾರತಿ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಜ. 20 ರಂದು ನಡೆದ ಮಾತೃವಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಆತ್ಮಾವಲೋಕನ ಸರಿದಾರಿಗೆ ತರುವುದು
ಮಾತು ಮತ್ತು ಅದರ ಅರ್ಥ ಒಂದಕ್ಕೊಂದು ಹೇಗೆ ಬೆಸೆದುಕೊಂಡಿರುತ್ತದೆಯೋ ಹಾಗೆಯೇ ತಂದೆ ತಾಯಿಯೂ ಮಕ್ಕಳ ಭವಿಷ್ಯಕ್ಕಾಗಿ ಒಬ್ಬರಿಗೊಬ್ಬರು ತಮ್ಮ ಇಡೀ ಜೀವನವನ್ನೇ ತ್ಯಾಗ ಮಾಡುತ್ತಾರೆ. ವಿದ್ಯಾವಂತರು ಎನ್ನುವ ಭಾವೋದ್ರೇಕದಿಂದ ಅಥವಾ ತಾತ್ಕಾಲಿಕ ಆಕರ್ಷಣೆಗೆ ಒಳಗಾಗಿ ಹೆತ್ತವರ ತ್ಯಾಗವನ್ನು ದಿಕ್ಕರಿಸದಿರಿ. ಹೆತ್ತವರ ತ್ಯಾಗ ಮತ್ತು ನಾವು ಏಕೆ ದಾರಿ ತಪ್ಪುತ್ತಿದ್ದೇವೆ ಎನ್ನುವ ಆತ್ಮಾವಲೋಕನವೇ ನಮ್ಮನ್ನು ಸರಿದಾರಿಗೆ ತರುವುದು ಎಂದು ದಾಮೋದರ ಶರ್ಮಾ ಅಭಿಪ್ರಾಯಪಟ್ಟರು.

ಅಪಪ್ರಚಾರ ತಪ್ಪಿದಲ್ಲ
ಒಳ್ಳೆಯ ಕೆಲಸಗಳಿಗೆ ಅಪಪ್ರಚಾರ ಮಾಡುವವರು ಸಾವಿರಾರು ಮಂದಿ ಇರುತ್ತಾರೆ. ಅವೆಲ್ಲವನ್ನೂ ಮೆಟ್ಟಿನಿಂತು ಮುಂದುವರಿಯಬೇಕು. ಆದರ್ಶ ವ್ಯಕ್ತಿತ್ವವನ್ನು ಮಾದರಿಯನ್ನಾಗಿರಿಸಿಕೊಂಡು ಮುನ್ನಡೆದಾಗ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬಹುದು. ಜನ ಸೇವೆಯೇ ಪ್ರಧಾನವೆಂದು ಭಾವಿಸಿರುವ ವೈದ್ಯ ವೆಂಕಟ ಗಿರಿರಾಯ, ನಡೆದಾಡುವ ದೇವರೆಂದೇ ಪ್ರಸಿದ್ಧರಾಗಿರುವ ಡಾ. ವಿರೇಂದ್ರ ಹೆಗ್ಗಡೆ, ರಾಜಕೀಯ ಕ್ಷೇತ್ರದಲ್ಲಿ ಅರಳಿದ ನರೇಂದ್ರ ಮೋದಿ, ವಿ. ಸುನೀಲ್‌ ಕುಮಾರ್‌ ಅವರಂತಹ ವ್ಯಕ್ತಿತ್ವ ಎಂದೆಂದಿಗೂ ಸ್ಫೂರ್ತಿದಾಯಕ ಎಂದು ದಾಮೋದರ್‌ ಶರ್ಮಾ ಹೇಳಿದರು.

ವಿದ್ಯಾರ್ಥಿಗಳಿಂದ ತಂದೆ ತಾಯಿಯ ಪಾದಪೂಜೆ

ಉದ್ಯಮಿ ಯದುನಾರಾಯಣ ಶೆಟ್ಟಿ ಮುಲ್ಕಿ, ಏರ್‌ಮಾರ್ಷಲ್‌ ರಮೇಶ್‌ ಕಾರ್ಣಿಕ್‌, ಆರ್‌ಎಸ್‌ಎಸ್‌ ಜಿಲ್ಲಾ ಸಂಘ ಚಾಲಕ ನಾರಾಯಣ ಶೆಣೈ, ಅಮೃತಭಾರತಿ ಟ್ರಸ್ಟ್‌ ಅಧ್ಯಕ್ಷ ಸಿ.ಎ. ರವಿ ರಾವ್‌, ಟ್ರಸ್ಟಿಗಳಾದ ಗುರುದಾಸ್‌ ಶೆಣೈ, ಸತೀಶ್‌ ಪೈ, ರಾಜೇಶ್‌ ನಾಯಕ್‌, ದಿನೇಶ್‌ ಪೈ, ಗಣೇಶ್‌ ಕಿಣಿ, ಸುಧೀರ್‌ ನಾಯಕ್‌, ವಿಷ್ಣುಮೂರ್ತಿ ನಾಯಕ್‌, ಬಾಲಕೃಷ್ಣ ಮಲ್ಯ, ಉದ್ಯಮಿ ರಾಮಕೃಷ್ಣ ಆಚಾರ್ಯ, ವಾದಿರಾಜ್‌ ಶೆಟ್ಟಿ, ಹರ್ಷ ಶೆಟ್ಟಿ, ಪ್ರಾಂಶುಪಾಲರಾದ ಅಮರೇಶ್‌ ಹೆಗ್ಡೆ, ಅರುಣ್‌, ಶಕುಂತಳಾ, ಅಪರ್ಣ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಉಪನ್ಯಾಸಕ ಸುಹಾಸ್‌ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

















































error: Content is protected !!
Scroll to Top