Tuesday, May 17, 2022
spot_img
Homeಸ್ಥಳೀಯ ಸುದ್ದಿಮಾಳ : ಬಸ್ ಡಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಸಾವು

ಮಾಳ : ಬಸ್ ಡಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಸಾವು

ಮಾಳ : ಬಸ್ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಎ. 6 ರ ಬೆಳಗ್ಗೆ 10.45 ಕ್ಕೆ ಮಾಳ- ಶೃಂಗೇರಿ ರಾಷ್ಟ್ರೀಯ ಹೆದ್ದಾರಿಯ ಓಟೆಹಳ್ಳ ಎಂಬಲ್ಲಿ ಸಂಭವಿಸಿದೆ.
ಮೃತ ವ್ಯಕ್ತಿಯನ್ನು ನಿತೇಶ್‌ (23) ಎಂದು ಗುರುತಿಸಲಾಗಿದೆ. ಈತ ಸಹ ಸವಾರ ನಂದೇಶ್ ಎಂಬಾತನನ್ನು ಕುಳ್ಳಿರಿಸಿಕೊಂಡು ಸಾಗುತ್ತಿದ್ದಾಗ ಟಿಪ್ಪರ್‌ ಲಾರಿಯನ್ನು ಓವರ್‌ಟೇಕ್‌ ಮಾಡಲು ಮುಂದಾದಾಗ ಈ ದುರಂತ ನಡೆದಿದೆ.
ಮಾಳದಿಂದ ಶೃಂಗೇರಿ ಕಡೆಗೆ ಸಾಗುತ್ತಿದ್ದ ವಿಶಾಲ್‌ ಬಸ್ಸಿನ ಮುಂಭಾಗಕ್ಕೆ ತಗುಲಿದ ಬೈಕ್ ರಸ್ತೆ ಬದಿಯ ಸಿಮೆಂಟ್‌ ಕಂಬಕ್ಕೆ ಹೊಡೆದ ಪರಿಣಾಮ ನಿತೇಶ್‌ ಸ್ಥಳದಲ್ಲೇ ಮೃತಪಟ್ಟಿದ್ದು, ಸಹ ಸವಾರ ಗಾಯಗೊಂಡಿದ್ದಾರೆ.
ಈ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!