ಬಿಜೆಪಿ ಸರಕಾರ ಅನ್ನಭಾಗ್ಯ-ಇಂದಿರಾ ಕ್ಯಾಂಟೀನ್‌ ಯೋಜನೆ ನಿಲ್ಲಿಸಲು ಚಿಂತನೆ ನಡೆಸುತ್ತಿದೆ- ಬಿಪಿನ್‌ಚಂದ್ರಪಾಲ್‌ ನಕ್ರೆ ಆರೋಪ

ಕಾರ್ಕಳ : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆಯಡಿ ಜಾರಿಗೆ ತಂದ ಅನ್ನ ಭಾಗ್ಯ, ಇಂದಿರಾ ಕ್ಯಾಂಟಿನ್ ಯೋಜನೆಗಳನ್ನು ಇಂದಿನ ಬಿಜೆಪಿ ಸರಕಾರ ಕೊರೋನಾ ಅರ್ಥಿಕ ಸಂಕಷ್ಟದ ನೆಪವೊಡ್ಡಿ ಹಂತಹಂತವಾಗಿ ‌ಕೈ ಬಿಡುವ ವ್ಯವಸ್ಥಿತ ಪಿತೂರಿ ನಡೆಸುತ್ತಿದೆ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನಚಂದ್ರ ಪಾಲ್ ನಕ್ರೆ ಆರೋಪಿಸಿದರು.
ಅವರು ಎ. 19ರಂದು ಸಂಜೆ ಕೆದಿಂಜೆಯಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಮತ್ತು ಬೋಳ ನಂದಳಿಕೆ ಗ್ರಾಮೀಣ ಕಾಂಗ್ರೆಸ್ ಸಮಿತಿ ಆಯೋಜಿಸಿದ್ದ ರಾಜ್ಯ ಹಾಗೂ ಕೇಂದ್ರ ಸರಕಾರದ ಆಡಳಿತ ವೈಫಲ್ಯದ ವಿರುದ್ದ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು.
ಕೇಂದ್ರ ಸರಕಾರದ ಮಾರ್ಗಸೂಚಿ ನಿಯಮದಂತೆ ಸಾರ್ವತ್ರಿಕ ಮೀಟರೀಕರಣದ ಚಿಂತನೆಯನ್ನು ನಡೆಸುತ್ತಿದ್ದು, ಇದು ಜಾರಿಗೆ ಬಂದಲ್ಲಿ ಕೃಷಿ, ಭಾಗ್ಯ ಜ್ಯೋತಿ, ಕುಟೀರ ಯೋಜನೆಗಳಿಗೂ ವಿದ್ಯುತ್ ಬಿಲ್ ಕಡ್ಡಾಯವಾಗಲಿದೆ. ಕಾಂಗ್ರೆಸ್ ಇದರ ವಿರುದ್ಧ ಹೋರಾಡಲಿದೆ ಎಂದರು.

ಬೀಡಿ ಕಟ್ಟುವವರ ಬದುಕು ಬೀದಿಪಾಲು
ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ದೀಪಕ್ ಕೋಟ್ಯನ್ ಮಾತನಾಡಿ, ಮೋದಿ ಸರಕಾರ ಕಾರ್ಮಿಕ ಕಾಯಿದೆಗೆ ತಿದ್ದುಪಡಿ ತಂಡು ಬೀಡಿ ಕಾರ್ಮಿಕರ ಬದುಕು ಬೀದಿಗೆ ಬೀಳುವಂತಾಗಿದೆ. ಮುಂದಿನ ದಿನಗಳಲ್ಲಿ ಇದರ ವಿರುದ್ದ ಹೋರಾಟ ನಡೆಸಲಿದ್ದೇವೆ ಎಂದರು. ಸೇವಾದಳದ ಅಧ್ಯಕ್ಷ ಸುಶಂತ್ ಸುಧಾಕರ್ ಮೋದಿ ಸರಕಾರದ ಸರ್ವಾಧಿಕಾರಿ ದೋರಣೆಯನ್ನು ಖಂಡಿಸಿದರು.
ತಾ.ಪಂ. ಸದಸ್ಯ ಸುಧಾಕರ ಶೆಟ್ಟಿ, ಕಾಂಗ್ರೆಸ್‌ ಧುರೀಣರಾದ ಕುಟ್ಟಿ ಪೂಜಾರಿ, ಅನಿತಾ ಡಿ’ಸೋಜಾ, ಯೋಗೀಶ್ ಕುಲಾಲ್, ವೀಣಾ ಪ್ರಾನ್ಸಿಸ್ ಡಿ’ ಸೋಜಾ, ಸುಗುಣ ನಲ್ಕೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾಂಗ್ರೆಸ್ ಯುವ ನಾಯಕ ಸುಪ್ರೀತ್ ಶೆಟ್ಟಿ ಸ್ವಾಗತಿಸಿ, ಕಾಂಗ್ರೆಸ್‌ ಹಿಂದುಳಿದ ವರ್ಗದ ಅಧ್ಯಕ್ಷ ಕುಶ ಮೂಲ್ಯ‌ ನಿರೂಪಿಸಿ, ವಂದಿಸಿದರು.









































































































error: Content is protected !!
Scroll to Top