ಕಾರ್ಕಳ : ಕಾರ್ಕಳದ ಮಾರ್ಕೆಟ್ ರಸ್ತೆಯ ರಾಧಿಕಾ ಟಾಕೀಸ್ ಬಳಿಯ ಕಾರ್ತಿಕ್ ಕಾಂಪ್ಲೆಕ್ಸ್‌ನಲ್ಲಿ ಸಿಎಸ್‌ಸಿ ಡಿಜಿಟಲ್ ಸೇವಾ ಕೇಂದ್ರ ಮತ್ತು ಬ್ಯಾಂಕ್ ಆಫ್ ಬರೋಡಾ ದ ಕಸ್ಟಮರ್ ಸರ್ವಿಸ್ ಕೇಂದ್ರ ಮಾ. 15ರಂದು ಶುಭಾರಂಭಗೊಂಡಿತು. ಬ್ಯಾಂಕ್ ಆಫ್ ಬರೋಡಾ ಕಾರ್ಕಳ ಶಾಖೆಯ ಮುಖ್ಯ ಪ್ರಬಂಧಕ ಮೇಲ್ವಿನ್ ನೂತನ ಸಂಸ್ಥೆಯನ್ನು ಉದ್ಘಾಟಿಸಿ, ಸರಕಾರಿ ಡಿಜಿಟಲ್ ಸೇವೆಗಳು ಒಂದೇ ಕಡೆ ದೊರಕುವುದರಿಂದ ಸಾರ್ವಜನಿಕರಿಗೆ ಬಹಳ ಉಪಯೋಗವಾಗಲಿದೆ ಎಂದರು. ಪುರಸಭಾ ಸದಸ್ಯರಾದ ಶುಭದ ರಾವ್, ಪ್ರಶಾಂತ್ ಕೋಟ್ಯಾನ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಸಂಸ್ಥೆಯ ಮಾಲಕ ಪ್ರಕಾಶ್ ದೇವಾಡಿಗ ಸ್ವಾಗತಿಸಿ, ಸುರೇಶ್ ಮೊಯ್ಲಿ ಕಾರ್ಯಕ್ರಮ ನಿರೂಪಿಸಿದರು. ಹರೀಶ್ ಮೊಯ್ಲಿ ವಂದಿಸಿದರು.
ಕಾರ್ತಿಕ್ ಕಾಂಪ್ಲೆಕ್ಸ್‌ನಲ್ಲಿ ಸಿಎಸ್‌ಸಿ ಡಿಜಿಟಲ್ ಸೇವಾ ಕೇಂದ್ರ-ಬ್ಯಾಂಕ್ ಆಫ್ ಬರೋಡಾದ ಕಸ್ಟಮರ್ ಸರ್ವಿಸ್ ಶುಭಾರಂಭ






























































