ಪಿ.ವಿ. ಆನಂದ್‌ ಅವರಿಗೆ ಪ್ರೋ.ಎಂ.ಆರ್.‌ ಸಂಸ್ಮರಣ ಪ್ರಶಸ್ತಿ

ಹೆಬ್ರಿ : ಕಾರ್ಕಳ ಸಾಹಿತ್ಯ ಸಂಘದಿಂದ ಕೊಡಮಾಡುವ ಪ್ರೋ.ಎಂ. ರಾಮಚಂದ್ರ ಸಂಸ್ಮರಣ ಪ್ರಶಸ್ತಿಗೆ ಮುದ್ರಾಡಿ ಎಂಎನ್‌ಡಿಎಸ್‌ಎಂ ಅನುದಾನಿತ ಪ್ರೌಢಶಾಲೆಯ ಕನ್ನಡ ಭಾಷಾ ಶಿಕ್ಷಕ ಪಿ.ವಿ. ಆನಂದ್‌ ಸಾಲಿಗ್ರಾಮ ಅವರು ಆಯ್ಕೆಯಾಗಿದ್ದಾರೆ. ಹೆಬ್ರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷರಾಗಿರುವ ಆನಂದ್‌ ಪಠ್ಯಕಲಿಕೆಯಲ್ಲಿ ಯಕ್ಷಗಾನ ಅಳವಡಿಸಿರುತ್ತಾರೆ. ಪಾಠ-ನಾಟಕಗಳ ವಿಶಿಷ್ಠ ಪ್ರಯೋಗದ ಮೂಲಕ ಮಕ್ಕಳಿಂದಲೇ ಪುಸ್ತಕಗಳನ್ನು ಪ್ರಕಟಿಸಿ ಹೆಗ್ಗಳಿಕೆ ಇವರದ್ದು. ೨೮ ಯಕ್ಷಗಾನ ಪ್ರಸಂಗ, ೫ ಪುಸ್ತಕ ಪ್ರಕಟಣೆ ಮಾಡಿರುವ ಆನಂದ ಅವರಿಗೆ ಡಿ. ೧೯ರಂದು ಕಾರ್ಕಳ ಹೊಟೇಲ್‌ ಪ್ರಕಾಶ್‌ನಲ್ಲಿ ನಡೆಯುವ ಸಾಹಿತ್ಯ ಸಂಘದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನವಾಗಲಿದೆ.





























































































































error: Content is protected !!
Scroll to Top