ಸೂರ್ಯನ ಶಕ್ತಿಯು ಅಪಾರ ಹೀಗಾಗಿ ಪ್ರಾಚೀನ ಕಾಲದಿಂದಲೂ ನಾವು ಸೂರ್ಯದೇವರನ್ನು ಆರಾಧಿಸುತ್ತೇವೆ. ಸೂರ್ಯ ಜೀವಸಂಕುಲಗಳ ಆಧಾರ. ಮುಂಜಾನೆ ಎದ್ದ ತಕ್ಷಣ ಸೂರ್ಯ ನಮಸ್ಕಾರ ಮಾಡುವ ಪದ್ಧತಿ ಹಿಂದಿನ ಕಾಲದಿಂದಲೂ ಬೆಳೆದುಬಂದಿದೆ. ಇದರ ಮುಖ್ಯ ಉದ್ದೇಶ ಸೂರ್ಯನಿಂದ ಬರುವಂತಹ ಶಕ್ತಿ ನಮ್ಮ ದೇಹದೊಳಗೆ ಸೇರಿಸುವುದಾಗಿದೆ. ಇವತ್ತು ಸೂರ್ಯಸ್ನಾನದ ಬಗ್ಗೆ ತಿಳಿದುಕೊಳ್ಳೋಣ.
ಚಳಿಗಾಲದಲ್ಲಿ ಸೂರ್ಯಸ್ನಾನ ಅಧಿಕ ಸಮಯ ಅಂದರೆ ನಲವತ್ತು ನಿಮಿಷ ಗಳ ಕಾಲ ಮಾಡಬಹುದು. ಬೇಸಿಗೆಯಲ್ಲಿ ಅಧಿಕ ಸಮಯ ಸೂರ್ಯನ ಕಿರಣ ನಮ್ಮ ದೇಹಕ್ಕೆ ಒಳ್ಳೆಯದಲ್ಲ ಆದರೆ, ಮಳೆಗಾಲದಲ್ಲೇ ಮೂವತ್ತರಿಂದ ನಲವತ್ತು ನಿಮಿಷಗಳ ಕಾಲ ಸೂರ್ಯಸ್ನಾನ ಮಾಡಬಹುದು. ಈ ಸಮಯದಲ್ಲಿ ನಡಿಗೆ, ವ್ಯಾಯಾಮ, ಸೂರ್ಯ ನಮಸ್ಕಾರ, ಪ್ರಾಣಾಯಾಮವನ್ನು ಮಾಡಬಹುದು. ಮೊದಲಿಗೆ ಐದರಿಂದ ಹತ್ತು ನಿಮಿಷಗಳ ಕಾಲ ಪ್ರಾರಂಭಿಸಿ ಕ್ರಮೇಣ ಮೂವತ್ತು ನಿಮಿಷದ ವರೆಗೆ ಋತುವಿಗೆ ತಕ್ಕಂತೆ ಹೆಚ್ಚಿಸಬಹುದು.
ಸೂರ್ಯಸ್ನಾನ ಮಾಡಲು ಸೂಕ್ತ ಸಮಯ ಮುಂಜಾನೆ ಸೂರ್ಯೋದಯದ ಸಮಯ. ಬೆಳಿಗ್ಗೆ 8ಗಂಟೆಯ ಒಳಗೆ ಹಾಗೂ ಸಂಜೆ 4ಗಂಟೆಯ ನಂತರ ಹಿತಕಾರಿ ತುಂಬಾ ಹಿತಕಾರಿ. ಕಫ, ಬೊಜ್ಜು, ತಲೆನೋವು, ಸೈನಸೈಟಿಸ್ ಇರುವವರು ಸೂರ್ಯ ಸ್ನಾನ ಮಾಡುವುದರಿಂದ ಇಂತಹ ಕಾಯಿಲೆಗಳಿಂದ ದೂರವಿರಬಹುದು.
ಸೂರ್ಯ ಸ್ನಾನದಿಂದ ಉಪಯೋಗಗಳು
- ಎಲುಬುಗಳನ್ನು ಸದೃಢಗೊಳಿಸುತ್ತದೆ. ತೊಂಭತ್ತು ಪ್ರತಿಶತ ವಿಟಮಿನ್ ಡಿ ಸೂರ್ಯನಿಂದ ದೊರೆಯುವುದು. ದೇಹಕ್ಕೆ ವಿಟಮಿನ್ ಡಿ ಸಿಗದಿದ್ದರೆ ಎಲುಬುಗಳು ದುರ್ಬಲಗೊಳ್ಳುವುದು. ವಿಟಮಿನ್ ಡಿ ಯು ಡಯಾಬಿಟಿಸ್ ಹಾಗೂ ಬಿಪಿಯನ್ನು ನಿಯಂತ್ರಿಸುವುದು.
- ರೋಗ ನಿರೋಧಕ ಶಕ್ತಿ ವೃದ್ಧಿಸುವುದು.
3.ಹೃದಯಕ್ಕೆ ಹಿತಕಾರಿ. - ರಕ್ತ ಚಲನೆಯನ್ನು ಸುಗಮಗೊಳಿಸುತ್ತದೆ . ಅಥೆರೋಸ್ಕ್ಲೆರೋಸಿಸ್ ಇರುವವರಿಗೆ ಪ್ರಯೋಜನಕಾರಿ .
- ಋಣಾತ್ಮಕ ಚಿಂತನೆಯಿಂದ ದೂರಮಾಡಿ ಖುಷಿಯನ್ನು ಕೊಡುವುದು.
- ತ್ವಚೆಗೆ ಒಳ್ಳೆಯದು. ಮೊಡವೆ , ಸೋರಿಯಾಸಿಸ್ ಎಕ್ಸೀಮಾ ಇರುವವರಿಗೆ ಪ್ರಯೋಜನಕಾರಿ.
- ಹಾರ್ಮೋನ್ ಗಳನ್ನು ಸಮತೋಲನದಲ್ಲಿರಿಸುತ್ತದೆ.
- ಉತ್ತಮ ನಿದ್ದೆಗೆ ಪ್ರೇರೇಪಿಸುತ್ತದೆ.
9.ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಬೆವರಿನ ಮೂಲಕ ಹೊರಹಾಕುತ್ತದೆ.
ತ್ವಚೆಯ ಮೇಲೆ ಸನ್ ಬರ್ನ್, ತುರಿಕೆ , ನೋವು ಇದ್ದರೆ ಸೂರ್ಯಸ್ನಾನ ನಿಷಿದ್ಧ . ಬೆಳಿಗ್ಗೆ 9ರಿಂದ 4ಗಂಟೆಯವರೆಗೆ ಸೂರ್ಯಕಿರಣಗಳು ಅಧಿಕ ಉಷ್ಣ ಹಾಗೂ ತೀಕ್ಷ್ಣ ಹಾಗೂ ಪ್ರಖರವಾಗಿರುವುದರಿಂದ ಆ ಸಮಯದಲ್ಲಿ ಹೊರಗೆ ಹೋಗದೇ ಇರೋದು ಒಳ್ಳೆಯದು. ಅನಿವಾರ್ಯವಿದ್ದಲ್ಲಿ ಛತ್ರಿಯನ್ನು ಉಪಯೋಗಿಸಿರಿ.































































