ಡಿ. 21 : ಬಿಜೆಪಿ ಕಾರ್ಕಳ ಕಾರ್ಯಕರ್ತರ ಸಮಾವೇಶ

ಕಾರ್ಕಳ : ಗ್ರಾಮೀಣ ಭಾಗದ ಚುನಾವಣೆಗಳ ನಿರ್ವಹಣೆಗೆ ಸಹಕಾರ ನೀಡುವ ನಿಟ್ಟಿನಲ್ಲಿ ಪಕ್ಷದ ಕಾರ್ಯಕರ್ತರ ತಾಲೂಕು ಮಟ್ಟದ ಸಮಾವೇಶವು ಕಾರ್ಕಳ ಮಂಜುನಾಥ ಪೈ ಸಭಾಂಗಣದಲ್ಲಿ ಡಿ. 21ರ ಪೂರ್ವಾಹ್ನ 10 ಗಂಟೆಗೆ ನಡೆಯಲಿದೆ ಎಂದು ಕಾರ್ಕಳ ಬಿಜೆಪಿ ಪ್ರಕಟಣೆ ತಿಳಿಸಿದೆ.
ವಿಧಾನಸಭಾ ವ್ಯಾಪ್ತಿಯ ಅನೇಕ ಗ್ರಾಮ ಪಂಚಾಯತ್‍ಗಳಲ್ಲಿ ಸುಮಾರು 35ಕ್ಕೂ ಹೆಚ್ಚು ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗುವ ಸಂಭವವಿದ್ದು, ನಾಮಪತ್ರ ವಾಪಸಾತಿಯ ಕಡೇ ದಿನದವರೆಗೆ ಇನ್ನಷ್ಟು ಅವಿರೋಧ ಆಯ್ಕೆಗಳು ನಡೆಯಲಿದೆ. ಚುನಾವಣೆ ಅನಂತರ ಕಾರ್ಕಳ ಹೆಬ್ರಿ ಉಭಯ ತಾಲೂಕಿನ ಎಲ್ಲ ಪಂಚಾಯತ್‌ಗಳು ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಆಡಳಿತ ನಡೆಸುವಂತಾಗಲಿದೆ ಎಂದು ಕ್ಷೇತ್ರಾಧ್ಯಕ್ಷ ಮಹಾವೀರ ಹೆಗ್ಡೆ ಪ್ರಕಟಣೆಯಲ್ಲಿ ತಿಳಿಸಿದರು.

ಫೋಟೋ : ಬಿಜೆಪಿ





























































































































error: Content is protected !!
Scroll to Top