ಕಾರ್ಕಳ : ನಕಲಿ ನಂಬರ್ ಪ್ಲೇಟ್ ಅಳವಡಿಸಿ ಕಾರಿನಲ್ಲಿ ತಿರುಗಾಡುತ್ತಿದ್ದ ಗ್ರಾ.ಪಂ. ಚುನಾವಣಾ ಅಭ್ಯರ್ಥಿ ಡಿ. 16ರಂದು ಕಾರ್ಕಳ ನಗರ ಠಾಣಾ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಮಿಯ್ಯಾರು ಗ್ರಾಮದ ಬೋರ್ಕಟ್ಟೆ ಬಲಿಪರಪಾಡಿ ನಿವಾಸಿ ಪಕ್ಷೇತರ ಅಭ್ಯರ್ಥಿ ಪ್ರಶಾಂತ ಆಚಾರ್ಯ ಬಂಧಿತ ಆರೋಪಿ. 2016ರಲ್ಲಿ ಐ10 ಕಾರನ್ನು ಖರೀದಿಸಿ, ನೋಂದವಣೆ ಮಾಡದೇ ಇತ್ತೀಚೆಗೆ ಯಾವುದೋ ಐ20 ಕಾರೊಂದರ ನಂಬರ್ ಪ್ಲೇಟ್ ಅನ್ನು ತನ್ನ ಕಾರಿಗೆ ಅಳವಡಿಸಿ ತಿರುಗಾಡುತ್ತಿದ್ದ. ಡಿ. 16ರಂದು ಜೋಡುಕಟ್ಟೆಯಲ್ಲಿ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದ ಸಂದರ್ಭ ಪ್ರಶಾಂತ್ ಆಚಾರ್ಯನ ಕೃತ್ಯ ಬೆಳಕಿಗೆ ಬಂದಿದ್ದು, ಪ್ರಕರಣ ದಾಖಲಿಸಿರುತ್ತಾರೆ. ಅನಂತರ ಪ್ರಶಾಂತ್‌ನನ್ನು ಜಾಮೀನಿನ ಮೇರೆಗೆ ಬಿಡುಗಡೆ ಮಾಡಲಾಗಿದೆ. ಈತ ಈ ಹಿಂದೆ ಬಿಜೆಪಿ ಕಾರ್ಯಕರ್ತನಾಗಿದ್ದ ಎಂದು ತಿಳಿದುಬಂದಿದೆ.
ಮಿಯ್ಯಾರು ಗ್ರಾ.ಪಂ. ಚುನಾವಣೆ ಅಭ್ಯರ್ಥಿ ಪೊಲೀಸ್ ವಶಕ್ಕೆ, ನಕಲಿ ನಂಬರ್ ಪ್ಲೇಟ್ ಬಳಸಿ ತಿರುಗಾಟ





























































