ರಾಜಕೀಯ ಪಡಸಾಲೆ- ಬಂದ್ ರಾಜಕೀಯ ಅಸ್ತ್ರವಾಗಬಾರದು

ಈ ಬಂದ್ ಅನ್ನುವ ಪದ ಎಂದು ಬಂದಾಗುತ್ತದೊ ಅನ್ನುವಷ್ಟರ ಮಟ್ಟಿಗೆ ಈ ಪದ ಜನಸಾಮಾನ್ಯರಲ್ಲಿ ಅಲಜಿ೯ ತಂದು ಬಿಟ್ಟಿದೆ.
ಮುಷ್ಕರ, ಬಂದ್, ಹರತಾಳ ಸತ್ಯಾಗ್ರಹ ಮುಂತಾದ ಅಸ್ತ್ರಗಳು ಸ್ವಾತಂತ್ರ್ಯ ಪೂವ೯ದಲ್ಲಿ ಬ್ರಿಟಿಷರ ಆಡಳಿತದ ವಿರುದ್ಧ ಭಾರತದ ಸ್ವಾತಂತ್ರ್ಯ ಹೇೂರಾಟಗಾರರು ಬಳಸಿದ ಪ್ರಮುಖ ಆಯುಧಗಳಾಗಿದ್ದವು.ಅಂದು ಈ ಆಯುಧಗಳನ್ನು ಬಳಸುವಾಗ ಅತ್ಯಂತ ಜಾಗೃತಿಯಿಂದ ಬಳಸ ಬೇಕಾಗಿತ್ತು ಮಾತ್ರವಲ್ಲ ಸತ್ಯಕ್ಕಾಗಿ ಆಗ್ರಹಿಸುವುದೇ ಪ್ರಮುಖ ಉದ್ದೇಶವಾಗ ಬೇಕು ಅನ್ನುವುದು ಗಾಂಧೀಜಿಯವರ ಉದ್ದೇಶವೂ ಆಗಿತ್ತು. ಇದರಿಂದ ಜನರ ಮನಸ್ಸಿಗಾಗಲಿ ಬದುಕಿಗಾಗಲಿ ಕಿಂಚಿತ್ತೂ ನೇೂವಾಗಲಿ, ವೇದನೆಯಾಗಲಿ ಆಗ ಬಾರದು ಅನ್ನುವುದು ಗಾಂಧೀಜಿ ಹಾಕಿ ಕೊಟ್ಟ ಸತ್ಯಾಗ್ರಹದ ತಂತ್ರಗಳಾಗಿದ್ದವು. ಆದರೆ ಗಾಂಧೀಜಿಯವರ ಹೇೂರಾಟದ ಫಲದಿಂದಾಗಿ ಸ್ವಾತಂತ್ರ್ಯ ಪಡೆದ ಈ ನೆಲದಲ್ಲಿ ಇಂದು ನಾವು ನಡೆಸುತ್ತಿರುವ ಮುಷ್ಕರ ಬಂದ್ ಗಳು ಯಾವ ಅಥ೯ದಲ್ಲಿ ಬಳಕೆ ಯಾಗುತ್ತಿವೆ? ಇಂದಿನ ಬಂದ್ ಗಳಿಗೆ ಸ್ವಲ್ಪವಾದರೂ ಗೌರವವಿದೆಯಾ? ಇದು ಜನಸಾಮಾನ್ಯರು ಮನಸಾರೆ ಒಪ್ಪಿ ನಡೆಸುವ ಬಂದ್ ಗಳಾಗುತ್ತಿವೆಯೇ? ಇಂತಹ ಬಂದ್ ಗಳಿಂದ ಜನರಿಗೆ ಎಷ್ಟು ಲಾಭ, ಎಷ್ಟು ನಷ್ಟ? ಅನ್ನುವುದರ ಕುರಿತು ಈ ಬಂದ್ ನಡೆಸುವವರು ಕಿಂಚಿತ್ತೂ ಆಲೇೂಚಿಸುವ ಮನಸ್ಥಿತಿ ಹೊಂದಿದ್ದಾರೆಯೇ ? ನಾಳೆ ಬೆಳಿಗ್ಗೆ “ಬಂದ್” ಯಶಸ್ಸು ಎಂದು ಹೇಳಿಕೆಯನ್ನು ನೀಡುವ ಪಕ್ಷದ ಮುಖಂಡರಾಗಲಿ, ಸಂಘಟನೆಯ ನಾಯಕರುಗಳಾಗಲಿ ನೀಡುವ ಕಾರಣಗಳೇನು? ಇವರು ವಿರೋಧಿಸಿದ ಕಾನೂನು ಯಥಾವತ್ತಾಗಿ ಮುಂದುವರಿಯುವುದಾರೆ ಇವರ ಬಂದ್ ಯಶಸ್ಸು ಅನ್ನಿಸಿ ಕೊಳ್ಳುವುದಾದರೂ ಹೇಗೆ ?
ಒಂದಂತೂ ಸತ್ಯ ಇವರ ಬಂದ್ ಹೇೂರಾಟಗಳೆಲ್ಲವೂ ರಾಜಕೀಯ ಲಾಭ ನಷ್ಟದ ಲೆಕ್ಕಾಚಾರವೇ ಹೊರತು ಜನರಿಗಾಗುವ ಲಾಭ-ನಷ್ಟ ಗಳ ಲೆಕ್ಕಾಚಾರ ಅಂತು ಅಲ್ಲವೇ ಅಲ್ಲ ಅನ್ನುವ ಕಟ್ಟು ಸತ್ಯ ಜನರಿಗೆ ಅಥ೯ವಾಗಿ ಬಿಟ್ಟಿದೆ.
ಜನರು ಮನೆಯಿಂದ ಹೊರಗೆ ಬರಲಿಲ್ಲವೆಂದರೆ ಅವರು ಬಂದ್ ನಡೆಸುವವರ ಪರವಾಗಿದ್ದಾರೆ ಅನ್ನುವ ಅಥ೯ವಲ್ಲ. ಯಾಕೆ ಸುಮ್ಮನೆ ತೊಂದರೆ ತೆಗೆದು ಕೊಳ್ಳಬೇಕು ಅನ್ನುವ ಕಾರಣವೂ ಇದರ ಹಿಂದೆ ಅಡಗಿರುತ್ತದೆ ಅನ್ನುವುದನ್ನು ಬಂದ್ ಯಶಸ್ವಿ ಎಂದು ವಾದಿಸುವವರು ಗಮನಿಸಬೇಕು.
ಯಾರು ನಿಜವಾಗಿ ಫಲಾನುಭವಿಗಳಿರುತ್ತಾರೊ ಅವರು ಯಾರು ಬಂದ್ ನ ಮುಂಚೂಣಿಯಲ್ಲಿರುವುದಿಲ್ಲ.ಬದಲಾಗಿ ಬಂದ್ ಬಿಸಿಯಲ್ಲಿ ಬೆಳೆ ಬೇಯಿಸಿ ಕೊಳ್ಳುವ ಮುಖಂಡರು ಮುಂಚೂಣಿಯಲ್ಲಿರುವುದು ವಸ್ತು ಸ್ಥಿತಿ. ರೈತ ಹೊಲದಲ್ಲಿಯೇ ಇದ್ದು ಸುಖ ಕಷ್ಟಗಳನ್ನು ನುಂಗಿ ಕೊಂಡು ಬದುಕು ಸಾಗಿಸಿ ಕೊಂಡಿರುತ್ತಾನೆ.
ಇಂದು ಬಹು ಚಚಿ೯ವಾದ ಕೃಷಿ ಕಾಯಿದೆ ಇರಬಹುದು ಭಾಷಾ/ಸಮುದಾಯದ ನಿಗಮಗಳಿರಬಹುದು ಅವುಗಳ ಸಾಧಕ ಬಾಧಕ ಗಳಿರಬಹುದು ಅವುಗಳನ್ನು ಸಾವ೯ಜನಿಕ ವೇದಿಕೆಗಳಲ್ಲಿ ತಜ್ಞರಿಂದ ಮಾಹಿತಿ ನೀಡಿ ಸರಕಾರವನ್ನು ಎಚ್ಚರಿಸುವ ಕೆಲಸ ನಡೆಸಬೇಕು.ನಮ್ಮದು ಡೆಮೇೂಕ್ರಸಿ (democracy ) ಹೊರತು ಮೊಬೊಕ್ರಸಿ (mobocracy ) ವ್ಯವಸ್ಥೆ ಆಗಬಾರದು.
ಇದಾಗಲೇ ಕೊರೊನಾ ಪಿಡುಗಿನಿಂದ ನಶಿಸಿ ಹೇೂಗಿರುವ ಜನರ ಬದುಕು ಇಂದಿನ ರಾಜಕೀಯ ಪ್ರೇರಿತ ಬಂದ್ ಗಳಿಂದ ಇನ್ನಷ್ಟು ದುಸ್ತರವಾಗುತ್ತದೆ ಅನ್ನುವುದನ್ನು ಮೊದಲು ಅಥ೯ಮಾಡಿಕೊಳ್ಳ ಬೇಕು.ಜನಸಾಮಾನ್ಯರ ಬೆಂಬಲ ಕಳೆದುಕೊಳ್ಳುವ ಬಂದ್ ಗಳು ರಾಜಕೀಯ ಪಕ್ಷ ಗಳಿಗೆ ಮಾರಕಾಸ್ತ್ರವಾಗಿ ತಿರುಗಿದರೂ ಆಶ್ಚರ್ಯವಿಲ್ಲ. ಸರಕಾರ ಕೂಡಾ ಅಷ್ಟೇ ಇಂತಹ ಕಾಯಿದೆಯ ಲಾಭ/ನಷ್ಟಗಳ ಸಂಪೂರ್ಣ ಅರಿವು ಜನಸಾಮಾನ್ಯರಲ್ಲಿ ಮೂಡಿಸಬೇಕಾದ ಅಗತ್ಯವೂ ಇದೆ. ಇದು ಉತ್ತರದಾಯಿತ್ವ ಇರುವ ಸರಕಾರಗಳ ಜವಾಬ್ದಾರಿಯುಾ ಹೌದು.

ಪ್ರೊ.ಕೊಕ್ಕಣೆ೯ ಸುರೇಂದ್ರನಾಥ ಶೆಟ್ಟಿ ,ಉಡುಪಿ

ಪ್ರೊ.ಕೊಕ್ಕಣೆ೯ ಸುರೇಂದ್ರನಾಥ ಶೆಟ್ಟಿ ,ಉಡುಪಿ









































































































error: Content is protected !!
Scroll to Top