ಕಾರ್ಕಳ : ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮೂವರು ಸಾಧಕರಾದ ಕಮಲಾ ಪೂಜಾರ್ತಿ (ನಾಟಿ ವೈದ್ಯೆ), ವಿಜಯಮ್ಮ (ಪಾಕ ಶಾಸ್ತ್ರ), ದೇವಣ್ಣ ಎಸ್. (ಮೆಸ್ಕಾಂ ಸಿಬ್ಬಂದಿ) ಅವರನ್ನು ರೋಟರಿ ಕ್ಲಬ್ ರಾಕ್ ಸಿಟಿ ಇದರ ವತಿಯಿಂದ ಸನ್ಮಾನಿಸಲಾಯಿತು. ರೋಟರಿ ರಾಕ್ ಸಿಟಿ ಅಧ್ಯಕ್ಷ ಪ್ರಶಾಂತ್ ಬೆಳಿರಾಯ, ವಲಯ ಸಂಯೋಜಕರಾದ ಸುವರ್ಣ ನಾಯಕ್, ಕ್ಲಬ್ಬಿನ ಸದಸ್ಯ ಶ್ರೀವರ್ಮ ಅಜ್ರಿ, ರಾಮಚಂದ್ರ ಹೆಬ್ಬಾರ್, ಗಣೇಶ್ ಬರ್ಲಾಯ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ರೋಟರಿ ರಾಕ್ ಸಿಟಿ ವತಿಯಿಂದ ಸನ್ಮಾನ






























































