ಮಂಗಳೂರಿನಲ್ಲಿ ಆತಂಕ ಸೃಷ್ಟಿಸಿದ ಲಷ್ಕರ್‌ ಜಿಂದಾಬಾದ್‌ ಗೋಡೆ ಬರಹ

ಮಂಗಳೂರು, ನ. 27: ಮಂಗಳೂರಿನಲ್ಲಿ ಮತಾಂಧರು ಮತ್ತೆ ಶಾಂತಿ ಕದಡುವ ಪ್ರಯತ್ನ ಮಾಡಿದ್ದಾರೆ. ಅಪಾರ್ಟ್‌ ಮೆಂಟ್‌ ಕಟ್ಟಡವೊಂದರ ಕಂಪೌಂಡ್‌ ಗೋಡೆ ಮೇಲೆ ಉಗ್ರ ಸಂಘಟನೆಯನ್ನು ಬೆಂಬಲಿಸುವ ಬರಹಗಳು ಇಂದು ಬೆಳಗ್ಗೆ ಕಾಣಿಸಿಕೊಂಡು ಆತಂಕಕ್ಕೆ ಕಾರಣವಾಗಿದೆ.
ಮಂಗಳೂರಿನ ಸರ್ಕ್ಯೂಟ್‌ ಹೌಸ್‌ ಬಳಿ ಇರುವ ಅಪಾರ್ಟ್‌ ಮೆಂಟ್‌ ಗೋಡೆ ಮೇಲೆ ಲಷ್ಕರ್‌ ಜಿಂದಾಬಾದ್‌ do not force us to invite lashkar e toiba ಎಂಬ ಪ್ರಚೋದನಕಾರಿ ಬರಹ ಇಂದು ಬೆಳಗ್ಗೆ ಕಾಣಿಸಿಕೊಂಡಿದೆ. ಕೋಮು ಭಾವನೆ ಕೆರಳಿಸುವ ಸಲುವಾಗಿ ಉದ್ದೇಶಪೂರ್ವಕವಾಗಿ ಈ ಬರಹವನ್ನು ಬರೆಯಲಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಇದು ಜನನಿಬಿಢ ಸ್ಥಳ ಮಾತ್ರವಲ್ಲದೆ ಸಮೀಪದಲ್ಲೇ ಕದ್ರಿ ಪೊಲೀಸ್‌ ಠಾಣೆಯೂ ಇದೆ. ಹೀಗಿದ್ದರೂ ದುಷ್ಕರ್ಮಿಗಳು ಪ್ರಚೋದನಕಾರಿ ಬರಹ ಬರೆಯುವ ಭಂಡತನ ತೋರಿಸಿದ್ದಾರೆ. ಕಳೆದ ಕೆಲವು ವರ್ಷಗಳಿಂದೀಚೆಗೆ ಮಂಗಳೂರಿನಲ್ಲಿ ಉಗ್ರರ ಹೆಜ್ಜೆ ಗುರುತು ಕಂಡುಬಂದಿರುವ ಹಿನ್ನೆಲೆಯಲ್ಲಿ ಈ ಬರಹವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದಾರೆ.







































error: Content is protected !!
Scroll to Top