ಕಾರ್ಕಳ, ನ. 27 : ದಿನಾಂಕ 25 11 2020 ರಂದು ಬೈಲೂರಿನ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮಂಗಳೂರಿನ ಎಂ.ಆರ್.ಪಿ.ಎಲ್. ಕಂಪನಿಯ ಸಿ.ಎಸ್. ಆರ್ ನಿಧಿಯ ಅನುದಾನದಿಂದ ನಿರ್ಮಾಣಗೊಂಡ ನೂತನ ವಾಚನಾಲಯವನ್ನು ಶಾಸಕ ವಿ. ಸುನಿಲ್ ಕುಮಾರ್ ಅವರು ನ.25ರಂದು ಲೋಕಾರ್ಪಣೆ ಮಾಡಿದರು. ಸಂಸ್ಥೆಯ ಹಿತೈಷಿ ದಿನೇಶ್ಚಂದ್ರ ಹೆಗ್ಗಡೆಯವರು ಜ್ಯೋತಿ ಬೆಳಗಿಸಿ ಶುಭಹಾರೈಸಿದರು.
ಎಂ.ಆರ್.ಪಿ.ಎಲ್ ಕಂಪನಿ ಯ ಸಿ.ಎಸ್.ಆರ್. ವಿಭಾಗ ಮುಖ್ಯಪ್ರಬಂಧಕ ನಾಗರಾಜ ರಾವ್ ಹೊಸ ಕಟ್ಟಡದ ನಾಮಫಲಕವನ್ನು ಅನಾವರಣಗೊಳಿಸಿದರು. ಕಾಲೇಜು ಹಾಗೂ ಶಾಲಾ ಅಭಿವೃದ್ಧಿ ಮಂಡಳಿಗಳ ಅಧ್ಯಕ್ಷರು, ಸರ್ವ ಸದಸ್ಯರು, ಸ್ಥಳೀಯ ಜನಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಪ್ರಾಂಶುಪಾಲೆ ಲೀಲಾಬಾಯಿ ಭಟ್ ಸ್ವಾಗತಿಸಿ ಉಪನ್ಯಾಸಕ ಶಾಂತಿನಾಥ ಜೋಗಿಯವರು ಕಾರ್ಯಕ್ರಮ ನಿರೂಪಿಸಿದರು. ಉಪ ಪ್ರಾಂಶುಪಾಲ ನಾಗರಾಜ್ ವಂದಿಸಿದರು.
ವರದಿ : ಶಬರೀಶ
ಬೈಲೂರು ಕಾಲೇಜಿನಲ್ಲಿ ಎಂ ಆರ್ ಪಿ ಎಲ್ ವಾಚನಾಲಯ ಉದ್ಘಾಟನೆ



















