ಸಮುದ್ರದಲ್ಲಿ ಸ್ನಾನಕ್ಕಿಳಿದ ಯುವಕ‌ ಮುಳುಗಿ ಮೃತ್ಯು

ಉಡುಪಿ, ನ.23 : ಸಮುದ್ರದಲ್ಲಿ ಸ್ನಾನಕ್ಕಿಳಿದ ಯುವಕನೊಬ್ಬ ಮುಳುಗಿ ಮೃತಪಟ್ಟಿರುವ ಘಟನೆ ಕುಂದಾಪುರದಲ್ಲಿ ಸಂಭವಿಸಿದೆ. ಕುಂದಾಪುರದ ಕೋಡಿ ಸಮೀಪದ ಎಮ್ ಕೋಡಿ ಎಂಬಲ್ಲಿ ಬೆಳಗಾವಿ ಮೂಲದವ ಎನ್ನಲಾದ ಮಂಜು ಎಂಬಾತ ಸ್ನಾನ ಮಾಡಲು ಸಮುದ್ರಕ್ಕಿಳಿದು ಅಲೆಗಳ ಸೆಳೆತಕ್ಕೆ ಸಿಲುಕಿದ್ದಾನೆ.
ಅಲೆಗಳ ಅಬ್ಬರಕ್ಕೆ ಸಿಲುಕಿ ಸಮುದ್ರಪಾಲಾದ ಯುವಕನನ್ನು ಉಳಿಸಲು ಹೋದ ಇನ್ನೊಬ್ಬ ಕಾರ್ಮಿಕನನ್ನು ಸ್ಥಳೀಯ ಯುವಕರು ಮತ್ತು ಮೀನುಗಾರರು ರಕ್ಷಿಸಿದ್ದಾರೆ.ಮಂಜುವನ್ನು ರಕ್ಷಿಸುವ ಪ್ರಯತ್ನ ಫಲಕೊಡಲಿಲ್ಲ. ಮೃತದೇಹವನ್ನು ಕುಂದಾಪುರ ಶವಾಗಾರದಲ್ಲಿಡಲಾಗಿದೆ.

















































































error: Content is protected !!
Scroll to Top