Friday, September 24, 2021
spot_img
Homeರಾಜ್ಯರಾಜ್ಯದಲ್ಲಿ ಆನ್ ಲೈನ್ ಗೇಮ್ ನಿಷೇಧಿಸಲು ಚಿಂತನೆ

ರಾಜ್ಯದಲ್ಲಿ ಆನ್ ಲೈನ್ ಗೇಮ್ ನಿಷೇಧಿಸಲು ಚಿಂತನೆ

ಬೆಂಗಳೂರು, ನ. 21 : ‘ಆನ್‌ಲೈನ್‌ ಗೇಮ್‌ಗಳಂತಹ ದುಶ್ಚಟಗಳಿಗೆ ಯುವಜನರು ತುತ್ತಾಗುತ್ತಿರುವ ಪರಿಣಾಮವಾಗಿ ಅವರ ಕುಟುಂಬಗಳು ಬೀದಿಗೆ ಬೀಳುತ್ತಿವೆ. ಈ ಪರಿಸ್ಥಿತಿ ತಪ್ಪಿಸಲು ಆನ್‌ಲೈನ್‌ ಗೇಮ್‌ಗಳನ್ನು ನಿಷೇಧಿಸುವ ಚಿಂತನೆ ನಡೆದಿದೆ’ ಎಂದು ಎಂದು ಗೃಹಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಕೆಲವು ರಾಜ್ಯಗಳು ಈಗಾಗಲೇ ಆನ್‌ ಲೈನ್‌ ಗೇಮ್‌ಗಳನ್ನು ನಿಷೇಧಿಸಿವೆ. ಅಲ್ಲಿ ಈ ಸಂಬಂಧ ರೂಪಿಸಿರುವ ಕಾನೂನುಗಳು ಮತ್ತು ಹೊರಡಿಸಿರುವ ಆದೇಶಗಳನ್ನು ಅಧ್ಯಯನ ಮಾಡಲಾಗುತ್ತಿದೆ. ಅಧಿಕಾರಿಗಳ ಜತೆ ಸಭೆ ನಡೆಸಿದ್ದು, ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರೊಂದಿಗೂ ಚರ್ಚಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!