ಹಾಸನ, ನ.21 : ಇಲ್ಲಿನ ದೊಡ್ಡಗಡ್ಡವಳ್ಳಿ ಚತುಷ್ಕೂಟ ದೇವಸ್ಥಾನದಲ್ಲಿರುವ ದಕ್ಷಿಣಾ ಕಾಳಿ (ಭದ್ರಕಾಳಿ) ವಿಗ್ರಹವನ್ನು ಅಜ್ಞಾತ ದುಷ್ಕರ್ಮಿಗಳು ಮುರಿದು ಹಾಕಿರುವ ಘಟನೆ ವಿವಾದಕ್ಕೆಡೆ ಮಾಡಿಕೊಟ್ಟಿದ್ದು, ಇದರ ಹಿಂದೆ ಷಡ್ಯಂತ್ರ ಇದೆ ಎಂಬ ಆರೋಪ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ.
1113 ಶತಮಾನಕ್ಕೆ ಸೇರಿದ ವಿಗ್ರಹ ಶುಕ್ರವಾರ ಬೆಳಗ್ಗೆ ಎರಡು ತುಂಡಾಗಿ ಮುರಿದು ಬಿದ್ದಿತ್ತು. ಗುರುವಾರ ರಾತ್ರಿ ಅರ್ಚಕರು ಪೂಜೆ ಸಲ್ಲಿಸುವ ಹೋಗುವ ತನಕ ಸುಸ್ಥಿಯಲ್ಲಿದ್ದ ವಿಗ್ರಹ ಶುಕ್ರವಾರ ಬೆಳಗ್ಗೆ ನೋಡುವಾಗ ಭಗ್ನಗೊಂಡಿತ್ತು. ಯಾರೋ ಉದ್ದೇಶಪೂರ್ವಕವಾಗಿ ವಿಗ್ರಹವನ್ನು ಮುರಿದು ಹಾಕಿದ್ದಾರೆ ಎಂದು ಸ್ಥಳೀಯರು ಹೇಳಿದ್ದಾರೆ.
ದೇವಸ್ಥಾನದ ಎದುರೇ ಶಾಸ್ತ್ರೀಯ ಗಾಯಕ ಬಾಲಕೃಷ್ಣ ಎಂಬವರು ವಾಸವಾಗಿದ್ದಾರೆ. ಅವರ ಸಹೋದರ ವೆಂಕಟೇಶ ಅವರೇ ಈ ಕ್ಷೇತ್ರದ ಅರ್ಚಕ. ಬೆಳಗ್ಗಿನ ಪೂಜೆಗೆ ಬಂದ ವೆಂಕಟೇಶ ಮುರಿದ ಅರ್ಧ ಭಾಗವನ್ನು ಮರಳಿ ಜೋಡಿಸಿದ್ದಾರೆ. ಇದು ಸುಮಾರು ಸಾವಿರ ವರ್ಷಗಳ ಹೀಮದಿನ ಅಪರೂಪದ ಕೃಷ್ಣ ಶಿಲೆಯಿಂದ ಮಾಡಿದ ಕಾಳಿಯ ವಿಗ್ರಹ.
ಈ ದೇವಸ್ಥಾನಕ್ಕೆ ತನ್ನದೇ ಆದ ಐತಿಹಾಸಿಕ ಮಹತ್ವವಿದೆ. ನಾಲ್ಕು ಗರ್ಭಗುಡಿಗಳಿರುವ ರಾಜ್ಯದ ಏಕೈಕ ದೇವಸ್ಥಾವಿದು. ಹೊಯ್ಸಳರ ಕಾಲದ ದೇವಸ್ಥಾನ ಎಂದು ಪುರಾತತ್ವ ಇಲಾಖೆಯವರು ಹೇಳಿದ್ದಾರೆ. ಪುರಾತತ್ವ ಇಲಾಖೆಯ ಅಧೀನದಲ್ಲಿದ್ದರೂ ದೇವಸ್ಥಾನಕ್ಕೆ ಸೂಕ್ತ ರಕ್ಷಣೆ ನೀಡಿರಲಿಲ್ಲ ಎನ್ನುವುದು ಸ್ಥಳೀಯರ ಆರೋಪ.
ಸಾವಿರ ವರ್ಷ ಹಿಂದಿನ ಭದ್ರಕಾಳಿ ವಿಗ್ರಹವನ್ನು ಮುರಿದು ಹಾಕಿದ ದುಷ್ಕರ್ಮಿಗಳು






























































