ನಿಟ್ಟೆ ಡೆಂಟಲ್ ಕ್ಲಿನಿಕ್ ವತಿಯಿಂದ ‘ ದಂತ ಸುರಕ್ಷಾ’ ಕಾರ್ಯಕ್ರಮ

ಕಾರ್ಕಳ, ನ. 21 : ನಿಟ್ಟೆ ಜಸ್ಟಿಸ್‌ ಕೆ.ಎಸ್.ಹೆಗ್ಡೆ ದಂತ ಚಿಕಿತ್ಸಾ ಕೇಂದ್ರ ಹಾಗೂ ಎ.ಬಿ. ಶೆಟ್ಟಿ ಸ್ಮಾರಕ ದಂತವೈದ್ಯಕೀಯ ಕಾಲೇಜು ಹಾಗೂ ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಸಹಭಾಗಿತ್ವದಲ್ಲಿ ನ.20 ರಂದು ನಿಟ್ಟೆ ತಾಂತ್ರಿಕ ಕಾಲೇಜಿನ ಸ್ವಚ್ಛತಾ ಸಿಬ್ಬಂದಿ ವರ್ಗದವರಿಗೆ ಉಚಿತ ದಂತ ಸುರಕ್ಷಾ ಮಾಹಿತಿ ಕಾರ್ಯಕ್ರಮವು ಜರುಗಿತು.
ನಿಟ್ಟೆಯ ಜಸ್ಟಿಸ್ ಕೆ.ಎಸ್. ಹೆಗ್ಡೆ ದಂತ ಚಿಕಿತ್ಸಾ ಕೇಂದ್ರದ ವೈದ್ಯರಾದ ಡಾ.ಚೇತನಾ ಶಶಿಕಾಂತ್ ಹಾಗೂ ಡಾ.ನಿವೇದಿತಾ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು. ಸಂಸ್ಥೆಯ ಪ್ರಾಂಶುಪಾಲ ಡಾ.ನಿರಂಜನ್ ಎನ್. ಚಿಪ್ಳೂಣ್ಕರ್, ರಿಜಿಸ್ಟ್ರಾರ್ ಯೋಗೀಶ್ ಹೆಗ್ಡೆ ಉಪಸ್ಥಿತರಿದ್ದರು. ನಿಟ್ಟೆ ತಾಂತ್ರಿಕ ಕಾಲೇಜಿನ ಸಾರ್ವಜನಿಕ ಸಂಪರ್ಕ ಅಧಿಕಾರಿ ಕೃಷ್ಣರಾಜ ಜೋಯಿಸ ಕಾರ್ಯಕ್ರಮವನ್ನು ಸಂಯೋಜಿಸಿದರು.





























































































































error: Content is protected !!
Scroll to Top