ಪಲ್ಲವಿ ತಂಡದ ದಿಬ್ಬಣ ನಾಟಕ ಮುಹೂರ್ತ

ಕಾರ್ಕಳ : 14ನೇ ವರ್ಷದ ಸಂಭ್ರಮದಲ್ಲಿರುವ ದಿನೇಶ್ ಪ್ರಭು ಕಲ್ಲೊಟ್ಟೆ ನೇತೃತ್ವದ ಪಲ್ಲವಿ ಕಲಾವಿದೆರ್ ಕಾರ್ಕಳ ತಂಡದ ವಿಭಿನ್ನ ಶೈಲಿಯ ತುಳು ಹಾಸ್ಯಮಯ ನಾಟಕ ದಿಬ್ಬಣದ ಮುಹೂರ್ತವು ನ. 19ರಂದು ಕಾಬೆಟ್ಟು ಶ್ರೀ ವೇಣುಗೋಪಾಲಕೃಷ್ಣ ದೇವಸ್ಥಾನದಲ್ಲಿ ಜರಗಿತು. ಪ್ರಶಾಂತ್ ಶೆಟ್ಟಿ ಪರಪ್ಪಾಡಿ ರಚಿಸಿ, ಜಗನಾಥ್ ಶೆಟ್ಟಿ ಕುಡ್ಲ ನಿರ್ದೇಶನ ದಿಬ್ಬಣ ನಾಟಕ ಮುಹೂರ್ತ ಕಾರ್ಯಕ್ರಮವನ್ನು ದೇಗುಲದ ಆಡಳಿತ ಮೋಕ್ತೇಸರ ಸಂತೋಷ್ ಉಪಾಧ್ಯಾಯ ಉದ್ಘಾಟಿಸಿ, ಶುಭಹಾರೈಸಿದರು. ಉದ್ಯಮಿ ವಿಜಯ್ ಶೆಟ್ಟಿ, ಕೆಎಂಇಎಸ್‌ ಕಾಲೇಜಿನ ಪ್ರಾಂಶುಪಾಲ ರಾಮಚಂದ್ರ ನೆಲ್ಲಿಕಾರ್, ಸುನೀಲ್ ಸೋನ್ಸ್ ಕುಂಟಲ್ಪಾಡಿ, ಪುರಸಭಾ ಸದಸ್ಯೆ ಶಶಿಕಲಾ ಪಿ. ಶೆಟ್ಟಿ, ಪತ್ರಕರ್ತ ವಿಲಾಸ್ ಕುಮಾರ್ ನಿಟ್ಟೆ, ಗುರುಪ್ರಸಾದ್ ಶೆಟ್ಟಿ ನಾರಾವಿ, ಸುನೀಲ್ ನೆಲ್ಲಿಗುಡ್ಡೆ, ಲೀಲಾವತಿ ಪೊಸಲಾಯಿ, ರಮಾನಂದ ನಾಯಕ್ ಜೋಡುರಸ್ತೆ, ವಸಂತ್ ಮುನಿಯಾಲ್, ಸುಮ ಟೀಚರ್, ಕೇಸರಿ ಹೆಗ್ಡೆ, ಸಂತೋಷ್ ದುರ್ಗ, ಕೆ.ಎಸ್. ರಘನಾಥ್, ಆರ್.ಕೆ. ಬೆಳುವಾಯಿ, ಮರ್ವಿನ್ ಶಿರ್ವ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.





























































































































error: Content is protected !!
Scroll to Top