ಮುಂಬೈಯಲ್ಲಿ ಡಿ.31ರ ತನಕ ಶಾಲೆ ಆರಂಭವಿಲ್ಲ

ಮುಂಬೈ, ನ.20 :ಮುಂಬೈಯಲ್ಲಿ ಕೊರೊನದ ಎರಡನೇ ಅಲೆಯ ಹಾವಳಿ ಪ್ರಾರಂಭವಾಗಿರುವ ಹಿನ್ನೆಲೆಯಲ್ಲಿ ಬೃಹನುಂಬಯಿ ಮಹಾ ನಗರಪಾಲಿಕೆ ಶಾಲೆ ಮತ್ತು ಕಾಲೇಜುಗಳ ಪ್ರಾರಂಭವನ್ನು ಡಿ.31ಕ್ಕೆ ಮುಂದೂಡಿದೆ.
ನ.23ರಂದು ರಾಜ್ಯದಲ್ಲಿ ಶಾಲೆ-ಕಾಲೇಜುಗಳನ್ನು ಪ್ರಾರಂಭಿಸಲಾಗುವುದೆಂದು ಶಿಕ್ಷಣ ಇಲಾಖೆ ಈ ಹಿಂದೆ ಹೇಳಿತ್ತು. ಆದರೆ ಕೊರೊನ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬಿಎಂಸಿ ಡಿ.31ರ ತನಕ ಶಾಲೆ-ಕಾಲೇಜುಗಳನ್ನು ಪುನರಾರಂಭಿಸದಿರಲು ನಿರ್ಧರಿಸಿದೆ.ಮೇಯರ್‌ ಕಿಶೋರಿ ಪೆಡ್ನೆಕರ್‌ ಅವರು ಶಾಲಾ -ಕಾಲೇಜು ಪ್ರಾರಂಭವನ್ನು ಮುಂದೂಡುವ ನಿರ್ಧಾರವನ್ನು ಪ್ರಕಟಿಸಿದ್ದಾರೆ.





























































































































error: Content is protected !!
Scroll to Top