Wednesday, October 27, 2021
spot_img
Homeಅಂಕಣರಾಜಕೀಯ ಪಡಸಾಲೆ- ಪ್ರಜಾಪ್ರಭುತ್ವದ "ಫೋರ್ತ್ ಎಸ್ಟೇಟ್" ಅಪಾಯದಲ್ಲಿದೆಯೇ?

ರಾಜಕೀಯ ಪಡಸಾಲೆ- ಪ್ರಜಾಪ್ರಭುತ್ವದ “ಫೋರ್ತ್ ಎಸ್ಟೇಟ್” ಅಪಾಯದಲ್ಲಿದೆಯೇ?

ಪ್ರಜಾಪ್ರಭುತ್ವ ಮಾದರಿ ಸರಕಾರದ ಪ್ರಮುಖ ಅಂಗಳೆಂದರೆ ಶಾಸಕಾಂಗ,ಕಾರ್ಯಾಂಗ, ನ್ಯಾಯಾಂಗ.ಈ ಮೂರು ಅಂಗಗಳು ವ್ಯವಸ್ಥಿತವಾಗಿ ಜವಾಬ್ದಾರಿಯಿಂದ ಉತ್ತರದಾಯಿತ್ವವಾಗಿ ಕೆಲಸ ನಿವ೯ಹಿಸಬೇಕಾದರೆ ಆ ದೇಶದಲ್ಲಿ ಪತ್ರಿಕಾ ಮತ್ತು ಇಲೆಕ್ಟ್ರಾನಿಕ್ ಮಾಧ್ಯಮಗಳನ್ನೊಳಗೊಂಡ ಸುದ್ದಿ ಮಾಧ್ಯಮಗಳು ಎಷ್ಟರ ಮಟ್ಟಿಗೆ ಸ್ವಾಯತ್ತತೆಯಿಂದ ನಿಷ್ಪಕ್ಷಪಾತದಿಂದ ತಮ್ಮ ಹೊಣೆಗಾರಿಕೆ ನಿವ೯ಹಿಸುತ್ತವೆ ಅನ್ನುವುದರ ಮೇಲೆ ಅಲ್ಲಿನ ಸರಕಾರ ಸಂವಿಧಾನದ ಚೌಕಟ್ಟಿನಲ್ಲಿ ಹಾಗೂ ಜನರ ಆಶೋತ್ತರಗಳಿಗೆ ಪೂರಕವಾಗಿ ಕೆಲಸ ನಿವ೯ಹಿಸಲು ಸಾಧ್ಯ ಅನ್ನುವ ಕಾರಣಕ್ಕಾಗಿಯೇ ಸುದ್ದಿ ಮಾಧ್ಯಮವನ್ನು ಸರಕಾರದ “ಫೋರ್ತ್‌ ಎಸ್ಟೇಟ್” ಅಥಾ೯ತ್ ನಾಲ್ಕನೇ ಅಂಗವೆಂದೇ ಕರೆಯಲಾಗುತ್ತದೆ.
ಇಂದಿನ ಭಾರತದ ಪ್ರಜಾಪ್ರಭುತ್ವದಲ್ಲಿ, ನಮ್ಮ ನಿತ್ಯದ ಬದುಕಿನಲ್ಲಿ ನಮ್ಮ ಸುದ್ದಿ ಮಾಧ್ಯಮಗಳು ಯಾವ ರೀತಿಯ ಪಾತ್ರ ನಿವ೯ಹಿಸುತ್ತಿವೆ ಅನ್ನುವುದನ್ನು ಮತ್ತು ಅವುಗಳ ಸ್ಥಿತಿಗತಿಯ ಕುರಿತು ಆಲೋಚಿಸಬೇಕಾದ ಕಾಲಘಟ್ಟದಲ್ಲಿ ನಾವಿದ್ದೇವೆ ಅನ್ನುವುದನ್ನು ಎಲ್ಲರೂ ಒಪ್ಪಿಕೊಳ್ಳಲೇ ಬೇಕು. ಅಂದಿನ
ಪತ್ರಿಕಾ ರಂಗ ಇಂದು ಪತ್ರಿಕೋದ್ಯಮವಾಗಿ ಬೆಳೆಯುತ್ತಿರುವ ಸಂದರ್ಭದಲ್ಲಿ ಸಾಹಿತ್ಯ , ಸಂಸ್ಕೃತಿ, ಸೇವೆ, ಜನನಾಡಿ, ನೇರ, ದಿಟ್ಟ …ಅನ್ನುವ ಪದಗಳು ತಮ್ಮ ಅಥ೯ಕಳೆದುಕೊಂಡು ಶ್ರೀಮಂತರ,ಧನಿಕರ ,ಅಧಿಕಾರಸ್ಥರ ಧ್ವನಿ ಅನ್ನುವ ರೀತಿಯಲ್ಲಿ ಸುದ್ದಿ ಮಾಧ್ಯಮಗಳನ್ನು ಬೆಳೆಸ ಬೇಕಾದ ಪರಿಸ್ಥಿತಿ ನಮ್ಮ ಮುಂದಿದೆ.
ಇಂದಿನ ಪತ್ರಿಕೆ ಹಾಗೂ ಟಿ.ವಿ.ಮಾಧ್ಯಮಗಳ ಹುಟ್ಟು ಬೆಳವಣಿಗೆಯ ಹಿಂದೆ ಉದ್ಯಮಿಗಳ, ರಾಜಕಾರಣಿ ಮತ್ತು ರಾಜಕೀಯ ಪಕ್ಷಗಳ ಹಿತಾಸಕ್ತಿ ಅಡಗಿರುವುದು ಅಷ್ಟೇ ಸತ್ಯ.ಪತ್ರಿಕೆ ಹಾಗೂ ಟಿ. ವಿ.ವಾಹಿನಿಗಳ ಉಸಿರು ನಿಂತಿರುವುದು ಕೂಡಾ ಜಾಹೀರಾತುಗಳ ಮೇಲೆ. ಹಾಗಾಗಿ ಪತ್ರಿಕೆ ಹಾಗೂ ಟಿ.ವಿ.ಮಾಧ್ಯಮಗಳ ಪ್ರಸರಣ ಹಾಗೂ ವೀಕ್ಷಕರ ಸಂಖ್ಯೆ (ಟಿ.ಆರ್.ಪಿ) ಜಾಸ್ತಿ ಯಾದಾಗಲೇ ಜಾಹೀರಾತುಗಳಿಗೆ ಹೆಚ್ಚಿನ ಬೇಡಿಕೆ. ಇಂತಹ ಒಂದು ಸಂಕೀರ್ಣತೆಯ ಸುತ್ತ ಈ “ಫೋರ್ತ್‌ ಎಸ್ಟೇಟ್” ಪ್ರಜಾಪ್ರಭುತ್ವದ ಸಂರಕ್ಷಣಾ ಜವಾಬ್ದಾರಿ ನಿವ೯ಹಿಸ ಬೇಕಾಗಿರುವುದು ಸುಲಭದ ಮಾತಲ್ಲ.
ಈ ಸ್ಫಧಾ೯ತ್ಮಕ ವ್ಯಾವಹಾರಿಕ ಜಗತ್ತಿನಲ್ಲಿ ಈ ಸುದ್ದಿ ಮಾಧ್ಯಮಗಳ ನಡುವೆಯೇ ಒಬ್ಬರು ಇನ್ನೊಬ್ಬರನ್ನು ಮುಳುಗಿಸುವ; ಅಸೂಯೆಪಡುವ ;ಕಾಲೆಳೆಯುವ ಕೆಲಸದಲ್ಲಿ ತೊಡಗಿರುವ ಮನಃಸ್ಥಿತಿಯನ್ನು ಅರಿತ ರಾಜಕೀಯ ಪಕ್ಷಗಳು ಹಾಗೂ ರಾಜಕಾರಣಿಗಳು ಒಡೆದು ಆಳುವ ನೀತಿಯನ್ನು ಬಲವಾಗಿ ಪ್ರಯೋಗಿಸಿಕೊಂಡು ತಮ್ಮ ಬೆಳೆ ಬೇಯಿಸಿಕೊಳ್ಳುವ ಆಟವಾಡುತ್ತಿವೆ.
ಇತ್ತೀಚೆಗೆ ರಾಷ್ಟ್ರದ ಪ್ರಮುಖ ವಾಹಿನಿ ರಿಪಬ್ಲಿಕ್ ಟಿ.ವಿ.ಸಂಪಾದಕರನ್ನೆ ಬಂಧಿಸಿ ಜೈಲಿಗೆ ಹಾಕಿದಾಗ ಕೂಡ ಇನ್ನಿತರ ಟಿ. ವಿ.ವಾಹಿನಿಗಳು ತಮಗೂ ಅದಕ್ಕೂ ಯಾವುದೇ ಸಂಬಂಧವಿಲ್ಲ ಅನ್ನುವ ರೀತಿಯಲ್ಲಿ ನಿಲಿ೯ಪ್ತತೆಯನ್ನು ಜಾಹೀರುಗೊಳಿಸಿವೆ. ನಮಗೂ ನಾಳೆ ಇದೇ ಪರಿಸ್ಥಿತಿ ಬರಬಹುದು ಅನ್ನುವ ಸಾಮಾನ್ಯ ಅರಿವು ತೋರದಿರುವುದು ಶೋಚನೀಯ.ನಮ್ಮ ರಾಜ್ಯದಲ್ಲಿ ಪವರ್ ಟಿ.ವಿ.ಗೂ ಇದೇ ಪರಿಸ್ಥಿತಿ ಬಂದಾಗ ಕೂಡ ರಾಜ್ಯ- ರಾಷ್ಟ್ರ ಮಟ್ಟದ ವಾಹಿನಿಗಳು, ಪತ್ರಿಕೆಗಳು ಇದೇ ನಿಲುವು ಪ್ರದಶ೯ನ ಮಾಡಿರುವ ಉದಾಹರಣೆ ಇನ್ನೂ ಜೀವಂತವಾಗಿ ನಮ್ಮ ಮುಂದಿದೆ.
ಒಟ್ಟಾರೆ ಈ ಪತ್ರಿಕಾ ಮತ್ತು ಇಲೆಕ್ಟ್ರಾನಿಕ್ ಮಾಧ್ಯಮಗಳ ಜಗಳದಲ್ಲಿ ಕೊನೆಗೂ ಸೋಲುವುದು ತತ್ವ ಸಿದ್ಧಾಂತ. ಬದುಕು ಎಂಬ ಸುಂದರ ಕನಸುಗಳನ್ನು ಹೊತ್ತ ಪತ್ರಕರ್ತರು, ಮಾಧ್ಯಮಗಳಲ್ಲಿ ದುಡಿಯುವ ಸಿಬ್ಬಂದಿಗಳು ಅನ್ನುವುದು ಕೂಡಾ ಅಷ್ಟೇ ಸತ್ಯ.
ಹಾಗಾದರೆ ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭ ಅನ್ನಿಸಿ ಕೊಂಡ ಸುದ್ದಿ ಮಾಧ್ಯಮವನ್ನು ಇಂತಹ ಧನಿಕರ ಹಸ್ತದಿಂದ ದೂರವಿಟ್ಟು ಜನ ಸಾಮಾನ್ಯರ ಬದುಕಿನ ಜೊತೆ ಬೆಳೆಸುವ ಹೊಣೆಗಾರಿಕೆ ನಮ್ಮಂತಹ ಜನ ಸಾಮಾನ್ಯರು ಅನ್ನುವುದನ್ನು ನಾವು ಮರೆಯಬಾರದು .ಜಾತಿ, ಧಮ೯,ಭಾಷೆ,ಪಕ್ಷ , ಪ್ರಾದೇಶಿಕತೆ ಮೀರಿ ನಮ್ಮಮಾಧ್ಯಮ ರಂಗವನ್ನು ನಿಜವಾದ ಅಥ೯ದಲ್ಲಿ ಪ್ರಜಾಪ್ರಭುತ್ವದ ನಾಲ್ಕನೇ ಶಕ್ತಿಯಾಗಿ (Fourth Estate) ಬೆಳೆಸುವ ಕತ೯ವ್ಯ ನಮ್ಮದಾಗಲಿ ಅನ್ನುವುದು ಈ ವಾರದ ನ್ಯೂಸ್ ಕಾಕ೯ಳದ ರಾಜಕೀಯ ಪಡಸಾಲೆಯ ಆಶಯವೂ ಹೌದು.
ಪ್ರೊ.ಕೊಕ್ಕಣೆ೯ ಸುರೇಂದ್ರನಾಥ ಶೆಟ್ಟಿ, ಉಡುಪಿ

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!