ಬಿಹಾರ ಅಧಿಕೃತ ಫಲಿತಾಂಶ ಪ್ರಕಟ : ಬಿಜೆಪಿ, ಜೆಡಿಯು, ಆರ್‌ಜೆಡಿಗೆ ತಲಾ 2 ಸ್ಥಾನ

ಪಾಟ್ನ, ನ.10: ಬಿಹಾರದ ಚುನಾವಣಾ ಫಲಿತಾಂಶ ಎಲ್ಲ ಸಮೀಕ್ಷೆಗಳನ್ನು ಹುಸಿಗೊಳಿಸುವ ಸಾಧ್ಯತೆ ಕಾಣಿಸುತ್ತಿದೆ. ಮೊದಲ ಕೆಲವು ಸುತ್ತಿನ ಮತ ಎಣಿಕೆ ತನಕ ಸಮೀಕ್ಷೆಗಳ ಲೆಕ್ಕಾಚಾರಕ್ಕೆ ಅನುಗುಣವಾಗಿಯೇ ಮುನ್ನಡೆಗಳಿದ್ದವು. ಆದರೆ ಮತ ಎಣಿಕೆ ಮುಂದುವರಿದಂತೆ ಮುನ್ನಡೆ ಬದಲಾಗುತ್ತಿದೆ. ಸದ್ಯ ಬಿಜೆಪಿ ನೇತೃತ್ವದ ಎನ್‌ಡಿಎ ಮುನ್ನಡೆಯಲ್ಲಿದ್ದು, ಆರ್‌ ಜೆಡಿ ನೇತೃತ್ವದ ಮಹಾಘಟಬಂಧನ್‌ ತೀವ್ರ ಪೈಪೋಟಿ ನೀಡುತ್ತಿದೆ.
ಪ್ರಸ್ತುತ ಎನ್‌ಡಿಎ 130+ ಸ್ಥಾನಗಳಲ್ಲಿ ಮುನ್ನಡೆಯಲ್ಲಿದೆ. ಮಹಾಘಟಬಂಧನ್‌ 105+ ಸ್ಥಾನಗಳಲ್ಲಿ ಮುನ್ನಡೆಯಲ್ಲಿದೆ. 243 ಸ್ಥಾನಗಳಿರುವ ಬಿಹಾರ ವಿಧಾನಸಭೆಯಲ್ಲಿ ಸರಳ ಬಹುಮತಕ್ಕೆ 122 ಸ್ಥಾನಗಳು ಬೇಕು. ಸದ್ಯದ ಟ್ರೆಂಡಿಂಗ್‌ ಪ್ರಕಾರ ಎನ್‌ಡಿಎ ಮೈತ್ರಿಕೂಟ ಬಹುಮತಗಳಿಸುವ ಸಾಧ್ಯತೆ ಗೋಚರಿಸುತ್ತದೆ.
ಚುನಾವಣಾಧಿಕಾರಿಗಳು ಸಂಜೆಯಷ್ಟೇ ಅಧಿಕೃತ ಫಲಿತಾಂಶ ಘೋಷಿಸುವ ಪ್ರಕ್ರಿಯೆ ಪ್ರಾರಂಭಿಸಿದ್ದಾರೆ. ಬಿಜೆಪಿ, ಆರ್‌ಜೆಡಿ ಮತ್ತು ಜೆಡಿಯು ತಲಾ ಎರಡು ಮತ್ತು ವಿಐಪಿ ಒಂದು ಸ್ಥಾನವನ್ನು ಗೆದ್ದುಕೊಂಡಿವೆ. ಒಟ್ಟಾರೆಯಾಗಿ ಎನ್‌ಡಿಎಗೆ ನಾಲ್ಕು ಸ್ಥಾನಗಳು ಸಿಕ್ಕಿವೆ. ಪೂರ್ಣ ಫಲಿತಾಂಶ ಪ್ರಕಟವಾಗುವಾಗ ತಡರಾತ್ರಿಯಾಗಬಹುದು ಎಂದು ಚುನಾವಣಾ ಅಧಿಕಾರಿಗಳು ಹೇಳಿದ್ದಾರೆ.

































































































































































error: Content is protected !!
Scroll to Top