ಕಾರ್ಕಳ, ನ.10:ಯರ್ಲಪಾಡಿಯ ಸರಕಾರಿ ಸಂಯುಕ್ತ ಪ್ರೌಢಶಾಲೆಯಲ್ಲಿ 35 ವರ್ಷ ಶಿಕ್ಷಕರಾಗಿ ಹಾಗೂ ಶಿಕ್ಷಣ ಸಂಯೋಜಕರಾಗಿ ಕಾರ್ಯನಿರ್ವಹಿಸಿ ನಿವೃತ್ತಿ ಹೊಂದಿದ ಶೈಲಜಾ ಹೆಗ್ಡೆ ಅವರನ್ನು ಆತ್ಮೀಯವಾಗಿ ಬೀಳ್ಕೊಡಲಾಯಿತು. ಫಲ,ಪುಷ್ಪ,ಶಾಲು ,ಹಾರದೊಂದಿಗೆ ಸ್ಮರಣಿಕೆಯಾಗಿ ಚಿನ್ನದ ಉಂಗುರವನ್ನು ಹಾಕಿ ಸಹೋದ್ಯೋಗಿಗಳು ,ಎಸ್ ಡಿಎಂಸಿ ಸದಸ್ಯರು,ಪೋಷಕರು ,ಶಾಲಾ ವಿದ್ಯಾಪೋಷಕ ದಾನಿಗಳು, ಗಣ್ಯರು ಸೇರಿ ಸನ್ಮಾನಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಜಿ. ಎಸ್. ಶಶಿಧರ್ ಅವರು ಶಿಕ್ಷಣ ಇಲಾಖೆಗೆ ಹಾಗೂ ಕಾರ್ಕಳ ಮಿಷನ್ -100ಗೆ ನೀಡಿದ ಕೊಡುಗೆಯನ್ನು ಸ್ಮರಿಸುತ್ತಾ ಅಭಿನಂದಿಸಿದರು. ಮುಖ್ಯೋಪಾಧ್ಯಾಯರಾದ ಪ್ರಕಾಶ್ ಭಟ್ ಸ್ವಾಗತಿಸಿ ಅಭಿನಂದನೆಯ ನುಡಿಗಳನ್ನಾಡಿದರು. ವಿದ್ಯಾರ್ಥಿನಿಯರಾದ ಲಿಷ್ಮಾ, ವಿದ್ಯಾ ,ಧನ್ಯಾ ಅವರು ಉತ್ತಮ ಕಲಿಸುವಿಕೆಯೊಂದಿಗೆ ತಾಯಿಯಂತೆ ಮಾರ್ಗದರ್ಶನ ಮಾಡುತ್ತಿದ್ದರು ಎಂದು ನಲ್ಮೆಯ ಮಾತುಗಳಾನ್ನಾಡಿದರು. ಚಂದ್ರಶೇಖರ ಶೆಟ್ಟಿ ಸನ್ಮಾನ ಪತ್ರ ವಾಚಿಸುತ್ತಾ ಪ್ರತಿಭಾನ್ವಿತೆ ಶಿಕ್ಷಕಿ ವಿದ್ಯಾರ್ಥಿಗಳಲ್ಲಿಯೂ ಪ್ರತಿಭೆಯನ್ನು ತುಂಬಿಸುವ ಕೆಲಸ ಮಾಡಿದ್ದಾರೆ ಎಂದರು.ಸಹೋದ್ಯೋಗಿಗಳಾದ ಚೇತನಾ, ಪುಷ್ಪಾ,ಇಂದಿರಾರವರು ಶಿಕ್ಷಕಿಯ ಸೇವೆಯನ್ನು ಸ್ಮರಿಸಿದರು.
ಶಿಕ್ಷಣ ಸಂಯೋಜಕ ವೆಂಕಟರಮಣ ಕಲ್ಕೂರ್,ಸಿ ಆರ್ ಪಿ ಉಮೇಶ್,ಎಸ್ ಡಿಎಂಸಿ ಅಧ್ಯಕ್ಷ ಭಾಸ್ಕರ ಶೆಟ್ಟಿ,ಶಿಕ್ಷಣ ತಜ್ಞ ಜಯರಾಮ ಶೆಟ್ಟಿ, ಶಾಲಾ ದಾನಿಗಳಾದ ವಿಜಯ ಶೆಟ್ಟಿ, ರಮೇಶ್ ಶೆಟ್ಟಿ, ಅರುಣ್ ಭಟ್,ಬೈಲೂರು ಉಪ ಪ್ರಾಂಶುಪಾಲ ನಾಗರಾಜ್ ,ವಿವೇಕ್‍ಶೆಟ್ಟಿ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಶಶಿಕಲಾ ದೇವಿ,ಸುರೇಶ್,ಶ್ಯಾಮಲಾ ವಿಸ್ಮಿತಾ ಉಪಸ್ಥಿತರಿದ್ದರು. ರಮೇಶ್ ಕುಲಾಲ್ ಕಾರ್ಯಕ್ರಮ ನಿರೂಪಿಸಿದರು.
ಶಿಕ್ಷಕಿ ಶೈಲಜಾ ಹೆಗ್ಡೆಯವರಿಗೆ ವಿದಾಯ ಕೂಟ















































































