ಶಿರಾದಲ್ಲಿ ಬಿಜೆಪಿಗೆ ಗೆಲುವಿನ “ಶೀರ” ದಕ್ಕಿದ್ದು ಹೀಗೆ…

ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಈವರೆಗೆ ಬಿಜೆಪಿ ಗೆದ್ದದ್ದೇ ಇಲ್ಲ. ಅದು ಕಟ್ಟಾ ಜೆಡಿಎಸ್ ಕ್ಷೇತ್ರ. ಇತಿಹಾಸವನ್ನು ಗಮನಿಸಿದರೆ ಅಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಗೆದ್ದಿವೆ. ಹೇಳಿ ಕೇಳಿ ಒಕ್ಕಲಿಗರ ಪ್ರಾಬಲ್ಯದ ಕ್ಷೇತ್ರ. ಹಿಂದೆ ಜೆಡಿಎಸ್ ಎಂಎಲ್ಎ ಆಗಿದ್ದ ಸತ್ಯನಾರಾಯಣ ಅವರಿಗೆ ಕ್ಷೇತ್ರದಲ್ಲಿ ಉತ್ತಮವಾದ ಹೆಸರು ಇತ್ತು. ಅವರು ನಿಧನರಾದಾಗ ಜೆಡಿಎಸ್ ಪಕ್ಷ ಅವರ ಧರ್ಮಪತ್ನಿ ಮಲ್ಲಾಜಮ್ಮ ಅವರಿಗೆ ಟಿಕೆಟ್ ನೀಡಿ ಕಣಕ್ಕೆ ಇಳಿಸಿತ್ತು. ಆದರೆ ಅನುಕಂಪ ಇಲ್ಲಿ ಕೂಡ ವರ್ಕ್ ಔಟ್ ಆಗಿಲ್ಲ. ರಾಜಕೀಯದ ಗಂಧ ಗಾಳಿ ಇಲ್ಲದ ಮಲ್ಲಾಜಮ್ಮಾ ಅವರನ್ನು ಜನ ತಿರಸ್ಕಾರ ಮಾಡಿದ್ದಾರೆ. ನನಗೆ ವಿಷ ಕೊಡ್ತೀರಾ, ಅಮೃತ ಕೊಡ್ತೀರಾ ಎಂದು ಕುಮಾರಸ್ವಾಮಿ ಪ್ರಚಾರ ಸಭೆಯಲ್ಲಿ ಕಣ್ಣೀರು ಹಾಕುತ್ತಾ ಹೇಳಿದ್ದರು. ಈ ಅನುಕಂಪ ಕೂಡ ನಗದು ಆಗಿಲ್ಲ. ರಾಜೇಶ್ ಗೌಡ ಅವರಿಗೆ ಟಿಕೆಟ್ ನೀಡಿದಾಗ ಪಕ್ಷದಲ್ಲಿ ಉಂಟಾದ ಬಂಡಾಯವನ್ನು ಬಿಜೆಪಿ ತಕ್ಷಣ ಸರಿಪಡಿಸಿತು. ಜನರಿಗೆ ಯೂತ್ ಮುಖಗಳು ಹೆಚ್ಚು ಆಕರ್ಷಣೆ ಆಗಿವೆ ಅನ್ನುವುದನ್ನು ಬಿಜೆಪಿ ಅರ್ಥ ಮಾಡಿಕೊಂಡಿದೆ. ಕಾಂಗ್ರೆಸ್ ಹಿರಿತನದ ಆಧಾರದಲ್ಲಿ ಜಯಚಂದ್ರ ಅವರನ್ನು ಕಣಕ್ಕೆ ಇಳಿಸಿತು. ಅವರು ಗೆಲ್ಲುವ ಕುದುರೆ ಎಂದು ಬಿಂಬಿಸಿತು. ಆದರೆ ಜನ ಅವರನ್ನೂ ತಿರಸ್ಕರಿಸಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಸಿದ್ದು ಮತ್ತು ಡಿಕೆಶಿ ಎಂಬ ಎರಡು ಪವರ್ ಹೌಸಗಳು, ಅವರ ವೈರುಧ್ಯಗಳು, ಅವರ ಅಭಿಮಾನಿಗಳ ವಿರೋಧಾಭಾಸದ ಹೇಳಿಕೆಗಳು ಮತದಾರರನ್ನು ಗೊಂದಲಕ್ಕೆ ದೂಡಿದವು. ಬಿಜೆಪಿ ಎಲ್ಲಾ ವೈರುಧ್ಯಗಳನ್ನು ಮೆಟ್ಟಿ ನಿಂತು ಪ್ರಚಾರಕ್ಕೆ ಇಳಿಯಿತು. ಕೊನೆಯ 15 ದಿನಗಳ ಅವಧಿಯಲ್ಲಿ ಬಿ.ಎಸ್. ವಿಜಯೇಂದ್ರ ಅವರು ಕಾಲಿಗೆ ಚಕ್ರ ಕಟ್ಟಿ ಪ್ರಚಾರಕ್ಕೆ ಇಳಿದದ್ದು ಕೂಡ ಗೆಲುವಿಗೆ ಕಾರಣವಾಯಿತು. ಕೆ. ಆರ್. ಪೇಟೆಯಲ್ಲಿ ಮಾಡಿದ ಮ್ಯಾಜಿಕನ್ನು ಅವರು ಇಲ್ಲಿ ಕೂಡ ಮಾಡಿದರು. ಬಿಜೆಪಿಯಲ್ಲಿ ಇಂದು ವಿಜಯೇಂದ್ರ ಅವರು ಶಕ್ತಿಶಾಲಿಯಾಗಿ ಬೆಳೆಯುತ್ತಿದ್ದಾರೆ. ಅಂತಿಮವಾಗಿ ಯಡಿಯೂರಪ್ಪ ಅವರು ತಮ್ಮ ಸಿಎಂ ಪಟ್ಟವನ್ನು ಗಟ್ಟಿ ಮಾಡಲು ಈ ಎರಡೂ ಫಲಿತಾಂಶಗಳು ಖಂಡಿತವಾಗಿ ನೆರವಾಗುತ್ತವೆ.















































































































































error: Content is protected !!
Scroll to Top