Wednesday, October 27, 2021
spot_img
Homeಸಂವಾದಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆದ ಯಡಿಯೂರಪ್ಪ

ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆದ ಯಡಿಯೂರಪ್ಪ

ಕನಾ೯ಟಕದ ರಾಜರಾಜೇಶ್ವರಿ ನಗರ ಮತ್ತು ಶಿರಾ ವಿಧಾನ ಸಭಾಕ್ಷೇತ್ರಗಳಿಗೆ ನಡೆದ ಉಪ ಚುನಾವಣಾ ಫಲಿತಾಂಶ ಬಹುತೇಕ ನಿರೀಕ್ಷಿತವೇ ಆಗಿದ್ದರೂ ಕೆಲವು ವಿಚಾರಗಳಲ್ಲಿ ಅಚ್ಚರಿ ಹುಟ್ಟಿಸಿರುವುದಂತೂ ಸತ್ಯ. ಈ ಎರಡು ಕ್ಷೇತ್ರಗಳ ಜಯ ಸರಕಾರದ ಮೇಲೆ ನೇರ ಪರಿಣಾಮ ಬೀರದಿರಬಹುದು;ಆದರೆ ಕನಾ೯ಟಕ ರಾಜಕೀಯದ ಮೇಲೆ ಪರೋಕ್ಷವಾದ ಪರಿಣಾಮ ಬೀರುವುದರಲ್ಲಿ ಸಂಶಯವಿಲ್ಲ.ಯಾಕೆ?ಹೇಗೆ ?ಅನ್ನುವುದನ್ನು ಸಂಕ್ಷಿಪ್ತವಾಗಿ ವಿಶ್ಲೇಷಣೆ ಮಾಡೋಣ.
ಈ ಉಪ ಚುನಾವಣೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರು ಬಳಸಿದ ಕಲ್ಲು ಒಂದು.ಬಿದ್ದ ಹಕ್ಕಿಗಳು ಸಾಲುಸಾಲಾಗಿ ಎರಡು.
1.ಚುನಾವಣೆ ನಡೆದದ್ದು ಎರಡು ಕ್ಷೇತ್ರ.”ಶಿರಾ” ವನ್ನು ಮೊದಲ ಬಾರಿಗೆ” ಕೇಸರಿ ಬಾತ್” ಮಾಡಿದ ಕೀತಿ೯ ಯಡಿಯೂರಪ್ಪನವರಿಗೆ ಅದೇ ರೀತಿಯಲ್ಲಿ ಬೆಂಗಳೂರಿನ ರಾಜರಾಜೇಶ್ವರಿಯ ಒಲವು ಮೊದಲ ಬಾರಿಗೆ ಗಳಿಸಿಕೊಂಡ ಹೆಗ್ಗಳಿಕೆಗೆ ಯಡಿಯೂರಪ್ಪನವರಿಗೆ ಸಲ್ಲುತ್ತದೆ.ಹಾಗಾಗಿ ನಿಧಾ೯ರ ಒಂದು ಫಲ ಎರಡು.
2.ಈ ಎರಡೂ ಕ್ಷೇತ್ರಗಳಲ್ಲಿ ಬಿಜೆಪಿಯ ಗೆಲುವು ಕಾಂಗ್ರೆಸ್‌ನ ಇಬ್ಬರು ಪ್ರಮಖ ನಾಯಕರುಗಳಾದ ಡಿ.ಕೆ.ಶಿ.ಮತ್ತು ಸಿದ್ಧರಾಮಯ್ಯನವರ ನಾಯಕತ್ವ ಅಲ್ಲಾಡಿಸಿದ ಫಲಿತಾಂಶವಾಗಿ ಹೊರ ಹೊಮ್ಮಿದೆ.ಮುಂದೆ ಇದರ ಪರಿಣಾಮ ಏನಾಗಬಹುದು ಎಂದು ಕಾದು ನೋಡ ಬೇಕಾಗಿದೆ
3.ಯಡಿಯೂರಪ್ಪನವರ ಒಂದು ಕಲ್ಲು (ನಿಧಾ೯ರ) ರಾಜ್ಯದ ಪ್ರಮುಖ ಎರಡೂ ಪಕ್ಷಗಳಾದ ಕಾಂಗ್ರೆಸ್‌ ಮತ್ತು ಜೆಡಿಎಸ್ ಸಂಬಂಧವನ್ನು ಮರು ಚಿಂತಿಸ ಬೇಕಾದ ಪರಿಸ್ಥಿತಿಗೆ ತಂದು ಹಾಕಿದೆ ಅನ್ನುವುದರಲ್ಲಿ ಎರಡು ಮಾತಿಲ್ಲ.
4.ಯಡಿಯೂರಪ್ಪನವರಿಗೆ ಇನ್ನು ಉಳಿದಿರುವ ಎರಡೂವರೆ ವಷ೯ಗಳನ್ನು ಯಾವುದೇ ಒಳ ಹೊರಗಿನ ಒತ್ತಡದ ಮೂಲಾಜಿಲ್ಲದೆ ಅಧಿಕಾರ ಚಲಾಯಿಸುವ ನೈತಿಕ ಬಲ ಪ್ರಾಪ್ತವಾಗಿಸಿದ ಫಲಿತಾಂಶವೆಂದೇ ವ್ಯಾಖ್ಯಾನಿಸ ಬಹುದು.
5.ಈ ಎರಡು ಕ್ಷೇತ್ರಗಳ ಫಲಿತಾಂಶ ಬಿಜೆಪಿಗೆ ಹೇಗೆ ದಕ್ಕಿತು ಅನ್ನುವುದನ್ನು ನೋಡಿದಾಗ ಮೇಲ್ನೋಟಕ್ಕೆ ಕಾಣುವ ಪ್ರಮುಖ ಅಂಶಗಳೆಂದರೆ.1.ರಾಜ ರಾಜೇಶ್ವರಿ ಕ್ಷೇತ್ರದಲ್ಲಿ ಹೆಚ್ಚಿನ ಅಂತರದ ಸುಲಭ ಜಯವೆಂದೇ ಪರಿಗಣಿಸಲಾಗುತ್ತದೆ.ಈ ಕ್ಷೇತ್ರದಲ್ಲಿ ಹ್ಯಾಟ್ರಿಕ್ ಸಾಧನೆಗೈದ ಮುನಿರತ್ನ ಅವರಿಗೆ ಹಿಂದಿನ ಅಭಿವೃದ್ಧಿ ಕೆಲಸದ ಜೊತೆಗೆ ಅವರು ಕ್ಷೇತ್ರದ ಜನರ ಜೊತೆಗೆ ಇಟ್ಟು ಕೊಂಡ ಸಂಬಂಧ ಕೂಡಾ ವರದಾನವೇ ಆಗಿದೆ.ಇದರ ಜೊತೆಗೆ ಅವರದ್ದೇ ಆದ ಒಂದಿಷ್ಟು ಕಾಯ೯ಕತ೯ರು ಜೊತೆಗೆ ಬಿಜೆಪಿ ನಾಯಕರ ಸಂಘಟನಾತ್ಮಕ ವ್ಯೂಹ.ಅದೇರೀತಿಯಲ್ಲಿ ಕಾಂಗ್ರೆಸ್‌ ನ ಮಹಿಳಾ ಅಭ್ಯರ್ಥಿ ಕ್ಷೇತ್ರಕ್ಕೂ ಪರಿಚಯವಿಲ್ಲದ ಸ್ಥಿತಿ.ಅನುಕಂಪದ ಅಲೆ ಬೀಸದಿರುವುದು ಕೂಡಾ ಡಿಕೆಶಿ ಬ್ರದರ್ಸ್ ನಿಧಾ೯ರಕ್ಕೆ ಬಿದ್ದ ಮೊದಲ ಏಟು.
ಜಾತಿ ಲೆಕ್ಕಾಚಾರ ಕೂಡಾ ನಡೆಯಲೇ ಇಲ್ಲ ಅನ್ನುವುದು ಡಿಕೆಶಿ ಸೋಲಿಗೆ ಇನ್ನೊಂದು ಪ್ರಮುಖ ಕಾರಣ.ಈ ಚುನಾವಣೆಯ ಅಪಜಯ ಡಿ.ಕೆ.ಬ್ರದರ್ಸ್‌ ಸೋಲೆಂದೇ ಪರಿಗಣಿಸ ಬಹುದಾದ ಫಲಿತಾಂಶವಿದು.
2.ಶಿರಾ ಕ್ಷೇತ್ರ ಬಿಜೆಪಿಯ ಪಾಲಿಗೆ ಸುಲಭದ ತುತ್ತಾಗಿರಲಿಲ್ಲ.ಆಡಳಿತರೂಢ ಪಕ್ಷ ತಮ್ಮ ಕ್ಷೇತ್ರಕ್ಕೆ ಏನಾದರೂ ಅಭಿವೃದ್ಧಿಯ ಕೆಲಸ ಮಾಡ ಬಹುದೆಂಬ ನಿರೀಕ್ಷಿತ ವಿಜಯವಿದು.ಕಾಂಗ್ರೆಸ್ ಜೆಡಿಎಸ್ ಒಟ್ಟು ಗಳಿಕೆ ನೋಡಿದಾಗ ಓಟು ವಿಭಜನೆ ಕೂಡಾ ಬಿಜೆಪಿಗೆ ಪ್ಲಸ್ ಆಗಿದೆ ಅನ್ನುವುದು ಮೇಲ್ನೋಟಕ್ಕೆ ಕಾಣುವ ಫಲಿತಾಂಶವೂ ಹೌದು.
ಒಟ್ಟಿನಲ್ಲಿ ಕ್ಷೇತ್ರಗಳು ಎರಡಾದರೂ ಮುಂದಿನ ರಾಜಕೀಯ ಪರಿಣಾಮ ಹಲವು ಅನ್ನುವುದು ಈ ಚುನಾವಣಾ ಫಲಿತಾಂಶದ ಮುಂದಿನ ಯಶೋಗಾಥೆ.
ಪ್ರೊ.ಕೊಕ್ಕಣೆ೯ ಸುರೇಂದ್ರನಾಥ ಶೆಟ್ಟಿ, ಉಡುಪಿ

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!