ಮುನಿರತ್ನ ಗೆಲುವಿಗೆ ಕಾರಣವಾದ ಅಂಶಗಳು

ಆರ್. ಆರ್. ನಗರದ ಮತದಾರರು ಮುನಿರತ್ನ ಅವರಿಗೆ ಜೈಕಾರ ಹಾಕಿದ್ದಾರೆ. ಅದು ಬಹು ದೊಡ್ಡ ಅಂತರದ ಗೆಲುವು. ಬಿಜೆಪಿ ಸರಕಾರವು ಗೆಲುವು ನಿಶ್ಚಿತ ಎಂದು ಹೇಳುತ್ತಿದ್ದರೂ ಈ 57,963 ಅಂತರದ ಮುನ್ನಡೆಯನ್ನು ಅವರೂ ನಿರೀಕ್ಷೆ ಮಾಡಿರಲಿಲ್ಲ. ಮುನಿರತ್ನ ಕಾಂಗ್ರೆಸ್ ಪಕ್ಷ ಬಿಟ್ಟು ಬಿಜೆಪಿಗೆ ಬಂದು ಚುನಾವಣೆ ಎದುರಿಸಿದವರು. ಒಕ್ಕಲಿಗರ ಬಾಹುಳ್ಯದ ಕ್ಷೇತ್ರದಲ್ಲಿ ಕುಸುಮಾ ಎಂಬ ಒಕ್ಕಲಿಗರ ಹುಡುಗಿಯನ್ನು ತಂದು ನಿಲ್ಲಿಸಿದ್ದು, ಡಿಕೆ ರವಿ ಸಾವಿನ ಅನುಕಂಪದ ಅಲೆಯನ್ನು ನಗದೀಕರಿಸಲು ಮುಂದಾಗಿದ್ದು ಕಾಂಗ್ರೆಸ್ಸಿಗೆ ಲಾಭ ಆಗಿಲ್ಲ ಎಂದು ಚುನಾವಣೆಯ ಫಲಿತಾಂಶ ಸಾರಿ ಹೇಳುತ್ತಿದೆ. ಡಿಕೆಶಿ ಕಾಂಗ್ರೆಸ್ ಅಧ್ಯಕ್ಷ ಆದ ನಂತರದ ಮೊದಲ ಚುನಾವಣೆ ಎಂಬ ಕಾರಣಕ್ಕೆ ಡಿಕೆಶಿ ಈ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದರು. ಕುಸುಮಾ ಕೂಡ ಅನುಕಂಪದ ಅಲೆಯನ್ನು ಸೃಷ್ಟಿಸಲು ಏನೆಲ್ಲಾ ಮಾಡಲು ಸಾಧ್ಯವೋ ಅದೆಲ್ಲವನ್ನೂ ಮಾಡಿದ್ದರು. ಇದ್ಯಾವುದೂ ವರ್ಕ್ ಔಟ್ ಆಗಿಲ್ಲ. ಗೆಲುವಿಗೆ ಪ್ರಮುಖ ಕಾರಣವನ್ನು ಹುಡುಕಲು ಹೊರಟರೆ ದೊರಕುವ ಮೊದಲ ಕಾರಣ ಯಡ್ಡಿ ಅವರ ನಾಯಕತ್ವ ಮತ್ತು ವಿಶ್ವಾಸಾರ್ಹತೆ. ಹೊರಗಿನಿಂದ ಬಂದ ಎಲ್ಲರಿಗೂ ಮಂತ್ರಿಗಿರಿ ಮತ್ತು ಆಯಕಟ್ಟಿನ ಸ್ಥಾನಗಳನ್ನು ನೀಡಿದ್ದು ಉತ್ತಮವಾದ ತೀರ್ಮಾನ. ಎರಡು ಸ್ಥಾನ ಇನ್ನೂ ಬಾಕಿ ಇರಿಸಿ ಪರೋಕ್ಷವಾಗಿ ಮುನಿರತ್ನ ಅವರಿಗೇ ಮುಂದಿನ ಮಂತ್ರಿ ಹುದ್ದೆ ಎಂದು ಜಾಹೀರು ಮಾಡಿದ್ದು ಗೆಲುವಿಗೆ ಕಾರಣ ಆಯಿತು. ಲಾಕ್ಮು‌ ಡೌನ್ನಿ‌ ಸಮಯದಲ್ರಲಿ ಮುನಿರತ್ತ್ನನ ತನ್ನ ಕ್ಷೇತ್ರದ ಜನರಿಗೆ ಹರಿಸಿದ ನೆರವು, ವೈಯಕ್ತಿವಾಗಿ ಅವರು ಮತದಾರರ ಜೊತೆಗೆ ಹೊಂದಿರುವ ಸಂಪರ್ಕ, ಬಲಿಷ್ಠ ಕಾರ್ಯಕರ್ತರ ಪಡೆಯ ಯೋಗದಾನ ಇತ್ಯಾದಿ ಅಂಶಗಳೂ ಇವೆ. ಅವರು ಎರಡು ಬಾರಿ ಕಾಂಗ್ರೆಸ್ ಎಂಎಲ್ಎ ಆಗಿ ಕ್ಷೇತ್ರದಲ್ಲಿ ಮಾಡಿದ ಉತ್ತಮ ಕೆಲಸಗಳು ಜನರ ನಂಬಿಕೆಗೆ ಬಲ ಕೊಟ್ಟವು. ಅಂತಿಮವಾಗಿ ಇಲ್ಲಿ ಮುನಿರತ್ನ ಅವರ ವರ್ಚಸ್ಸು ಕೆಲಸ ಮಾಡಿದ್ದು ಗಮನಕ್ಕೆ ಬರುತ್ತದೆ. ಈ ಮುಂದುವರಿದ ಕಾಲದಲ್ಲಿ ಕೂಡ ಜಾತಿಯ ಆಧಾರದ ಮೇಲೆ ಚುನಾವಣೆ ಎದುರಿಸುವ ಪಕ್ಷಗಳಿಗೆ ಇದು ಭಾರೀ ಎಚ್ಚರಿಕೆಯ ಫಲಿತಾಂಶ. ಕುಸುಮಾ ಕಾಂಗ್ರೆಸಿಗೆ ಬಂದಾಗ ಅವರ ಅತ್ತೆ ಶಾಪ ಕೊಟ್ಟದ್ದು, ಕುಸುಮಾ ಅವರ ತಂದೆ ಇನ್ನೂ ಜೆಡಿಎಸ್ ಪಕ್ಷದಲ್ಲಿಯೇ ಇದ್ದದ್ದು , ಜನರಿಗೆ ಡಿಕೆ ರವಿ ಬಗ್ಗೆ ಇರುವ ಉತ್ತಮ ಭಾವನೆಗಳು ಎಲ್ಲವೂ ಬಿಜೆಪಿ ಗೆಲುವಿಗೆ ಕಾರಣ ಆದದ್ದು ರಹಸ್ಯ ಏನಲ್ಲ. ಜೆಡಿಎಸ್ ಅಭ್ಯರ್ಥಿ ಡೆಪಾಸಿಟ್ ಕಳೆದುಕೊಂಡದ್ದು ಆಶ್ಚರ್ಯ ಏನಲ್ಲ. ಕುಮಾರಸ್ವಾಮಿ ಸೋಲನ್ನು ಚುನಾವಣೆಗೆ ಮೊದಲೇ ಒಪ್ಪಿಕೊಂಡಿದ್ದರು.



































































































error: Content is protected !!
Scroll to Top