ಐಪಿಎಲ್‌ ಫೈನಲ್‌ ಗೆ ಕ್ಷಣಗಣನೆ : ಕಪ್‌ಗೆ ಮುತ್ತಿಕ್ಕುವರಾರು?


13 ನೆಯ ಐಪಿಲ್ ಕೂಟದ ಅಂತಿಮ ಹಣಾಹಣಿಗೆ ಇಂದು ಕ್ಷಣ ಗಣನೆ ಆರಂಭ ಆಗಿದೆ. ಬಲಿಷ್ಟ ಮುಂಬೈ ಮತ್ತು ಯುವಪಡೆಯ ಡೆಲ್ಲಿ ನಡುವೆ ಇಂದು ಜಿದ್ದಾಜಿದ್ದಿ ಹೋರಾಟದ ನಿರೀಕ್ಷೆ ಇದೆ. ಹೊರನೋಟಕ್ಕೆ ಮುಂಬೈ ಬಲಿಷ್ಟ ಎಂದು ಅನ್ನಿಸುತ್ತದೆ. ಡಿ ಕಾಕ್, ಇಶಾನ್ ಕಿಶನ್, ಸೂರ್ಯಕುಮಾರ್, ಹಾರ್ದಿಕ ಪಾಂಡ್ಯ, ಪೊಲಾರ್ಡ್ ಇವರಲ್ಲಿ ಒಂದಿಬ್ಬರು ಸಿಡಿದು ನಿಂತರೂ ಮುಂಬೈ ಐಪಿಲ್ ಟ್ರೋಫಿಗೆ ಐದನೆಯ ಬಾರಿ ಮುತ್ತಿಡುವುಡು ಖಂಡಿತ. ಬೌಲಿಂಗ್ ವಿಭಾಗದಲ್ಲಿ ಕೂಡ ಬೌಲ್ಟ್, ಬುಮ್ರಾ, ಕೃಣಾಲ್ ಪಾಂಡ್ಯ, ಪೊಲಾರ್ಡ್ ಎದುರಾಳಿಗಳ ಎದೆ ಸೀಳುವ ಶಕ್ತಿ ಹೊಂದಿದ್ದಾರೆ. ಅತೀ ಹೆಚ್ಚು ಆಲ್ರೌಂಡರ್ ಇರುವ ತಂಡ ಮುಂಬೈ. ಡೆತ್ ಓವರಗಳಲ್ಲಿ ಹಾರ್ದಿಕ ಪಾಂಡ್ಯ ಸುಲಭವಾಗಿ ಸಿಕ್ಸರ್, ಬೌಂಡರಿ ಸುರಿಯಬಲ್ಲರು. ಆ ರೀತಿಯಾದ ಮುಂಬೈಗೆ ಗೆಲುವಿನ ಅವಕಾಶ ಹೆಚ್ಚು.
ಆದರೆ ದೆಹಲಿಯ ಸಾಮರ್ಥ್ಯವನ್ನು ಯಾರೂ ಅಂಡರ್ ಎಸ್ಟಿಮೇಟ್ ಮಾಡುವ ಹಾಗಿಲ್ಲ. ಸ್ಟೋಯಿನಿಸ್, ಶ್ರೇಯಸ್ ಅಯ್ಯರ್, ರಿಷಬ್ ಪಂತ್, ಅಜಿಂಕ್ಯ ರಹಾನೆ, ಶಿಖರ್ ಧವನ್, ಹ್ಯಾಟ್ಮೆಯರ್ ಕ್ಲಿಕ್ ಆದರೆ 200 ರನ್ ಗಳಿಸಲು ಯಾವ ತೊಂದರೆ ಕೂಡ ಇಲ್ಲ. ರಬಡ, ನೋರ್ಜೆ ಪ್ರಬಲವಾದ ಬೌಲಿಂಗ್ ಅಸ್ತ್ರಗಳು. ಅಶ್ವಿನ್, ಅಕ್ಷರ್ ಪಟೇಲ್ ಸ್ಪಿನ್ ದಿಗ್ಗಜ ಬೌಲರಗಳು. ಬೌಲಿಂಗ್ ವಿಭಾಗದಲ್ಲಿ ಡೆಲ್ಲಿ ತಂಡವೇ ಬಲಿಷ್ಠ. ತಂತ್ರಗಾರಿಕೆ ವಿಭಾಗದಲ್ಲಿ ಡೆಲ್ಲಿ ತಂಡದ ಕೋಚ್ ರಿಕ್ಕಿ ಪಾಂಟಿಂಗ್ ಅವರು ಮುಂದಿದ್ದಾರೆ.
ಐಪಿಲ್ ಚುಟುಕು ಪಂದ್ಯದಲ್ಲಿ ಅದೃಷ್ಟದ ಪಾತ್ರವೂ ಪ್ರಮುಖ ಆದ ಕಾರಣ ಇಂದು ಅದೃಷ್ಟ ಯಾರ ಪಾಲಿಗಿದೆ ಎನ್ನುವುದು ಇಂದಿನ ಕುತೂಹಲ. ಡೆಲ್ಲಿ ಇಂದು ಗೆದ್ದರೆ ಮೊದಲ ಪ್ರಶಸ್ತಿ ಪಡೆದು ಹೆಮ್ಮೆಯನ್ನು ಪಡೆಯುವುದು. ಶ್ರೇಯಸ್ ಅಯ್ಯರ್ ಆ ಭಾಗ್ಯವನ್ನು ಪಡೆಯುವರೆ ಎನ್ನುವುದನ್ನು ಕಾದು ನೋಡೋಣ. ಸೂರ್ಯ ಕುಮಾರ್ ಫಾರ್ಮ್ ಮುಂದುವರೆದರೆ, ಕಿಶಾನ್
ಸಿಡಿದು ನಿಂತರೆ, ಬೌಲ್ಟ್ ಬೌನ್ಸರ್ ಗುರಿ ತಲುಪಿದರೆ ಮುಂಬೈ ಗೆಲ್ಲುತ್ತದೆ. ಶಿಖರ್ ಧವನ್ ಮತ್ತು ಸ್ಟೋಯಿನಿಸ್ ಅಬ್ಬರಿಸಿದರೆ, ರಬಾಡ, ನೋರ್ಜೇ ಆರಂಭದಲ್ಲಿ ವಿಕೆಟ್ ಕಿತ್ತರೆ ಡೆಲ್ಲಿ ಗೆಲ್ಲುವುದು ಕಷ್ಟ ಆಗಲಾರದು.







































error: Content is protected !!
Scroll to Top