Homeರಾಜ್ಯಕೊರೊನಾ ಭೀತಿಯ ನಡುವೆ ನಿರಾತಂಕವಾಗಿ ನಡೆದ ಉಪಚುನಾವಣೆ

Related Posts

ಕೊರೊನಾ ಭೀತಿಯ ನಡುವೆ ನಿರಾತಂಕವಾಗಿ ನಡೆದ ಉಪಚುನಾವಣೆ

ಬೆಂಗಳೂರು,ನ.3 : ಶಿರಾ ಮತ್ತು ರಾಜರಾಜೇಶ್ವರಿ ನಗರದ ಉಪ ಚುನಾವಣೆಯ ಮತದಾನದಲ್ಲಿ ಜನರು ಉತ್ಸಾಹದಿಂದ ಪಾಲ್ಗೊಂಡರು. ಕೊರೊನಾ ಆತಂಕ ಜನರ ಹುಮ್ಮಸ್ಸನ್ನು ಕುಗ್ಗಿಸಲಿಲ್ಲ. ಮತದಾನ ಪ್ರಮಾಣವೂ ಉತ್ತಮವಾಗಿತ್ತು. ಸದ್ಯದಲ್ಲೇ ನಡೆಯಲಿರುವ ಪಂಚಾಯತ್‌ ಚುನಾವಣೆಗೆ ಈ ಉಪ ಚುನಾವಣೆ ಒಂದು ಟ್ರಯಲರ್‌ನಂತಿತ್ತು. ಇದೀಗ ಉಪ ಚುನಾವಣೆ ನಿರಾತಂಕವಾಗಿ ಮುಗಿದಿರುವುದರಿಂದ ಸರಕಾರ ಪಂಚಾಯತ್‌ ಚುನಾವಣೆಗೆ ಧೈರ್ಯವಾಗಿ ಮುಂದಡಿಯಿಡಬಹುದು.
ಚುನಾವಣಾ ಸಿಬಂದಿಗಳು ಎಲ್ಲ ಕೊರೊನಾ ಮುನ್ನೆಚ್ಚರಿಕೆಗಳನ್ನು ವಹಿಸಿದ್ದರು. ಮತದಾರರಿಗೂ ಅಂತರ ಪಾಲನೆ ಮತ್ತಿತರ ನಿಯಮಗಳು ಕಡ್ಡಾಯವಾಗಿದ್ದವು.
ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ರಾಜ್ಯದ ಪ್ರಮುಖ ಮೂರು ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ನಡುವೆ ನೇರ ಹಣಾಹಣಿಯಿತ್ತು. ಮೂರೂ ಪಕ್ಷಗಳುಯ ಭರ್ಜರಿ ಪ್ರಚಾರ ನಡೆಸಿದ್ದವು.
ರಾಜರಾಜೇಶ್ವರಿ ನಗರದಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನ, ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಹಾಗೂ ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿ ಕೃಷ್ಣಮೂರ್ತಿ ಕಣದಲ್ಲಿದ್ದಾರೆ.
ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ಮಾಜಿ ಸಚಿವ ಟಿಬಿ ಜಯಚಂದ್ರ, ಬಿಜೆಪಿಯಿಂದ ರಾಜೇಶ್ ಗೌಡ, ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮ ಸೇರಿದಂತೆ ಮತ್ತಿತರರು ಕಣದಲ್ಲಿದ್ದಾರೆ. ಇಲ್ಲೂ ಮೂರು ಪಕ್ಷಗಳ ನಡುವೆ ಪೈಪೋಟಿಯಿದೆ.
ಇಂದು ಬೆಳಿಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯ ತನಕ ಮತದಾನ ನಡೆಯಿತು. ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಯುವ ಸಲುವಾಗಿ ಎರಡೂ ಕ್ಷೇತ್ರಗಳಲ್ಲೂ ಸಾಕಷ್ಟು ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಶಿರಾದಲ್ಲಿ ಒಟ್ಟು 3857 ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಆರ್.ಆರ್.ನಗರ ಕ್ಷೇತ್ರದಲ್ಲಿ 4203 ಮತದಾನ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ನವೆಂಬರ್ 10 ರಂದು ಮತ ಎಣಿಕೆ ನಡೆಯಲಿದ್ದು, ಶಿರಾ ವಿಧಾನಸಭಾ ಕ್ಷೇತ್ರದ ಮತ ಎಣಿಕೆ ತುಮಕೂರಿನ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು, ಆರ್.ಆರ್.ನಗರ ಕ್ಷೇತ್ರದ ಮತ ಎಣಿಕೆಯು ಶ್ರೀಜ್ಞಾನಾಕ್ಷಿ ವಿದ್ಯಾನಿಕೇತನದಲ್ಲಿ ನಡೆಯಲಿದೆ.

LEAVE A REPLY

Please enter your comment!
Please enter your name here

Latest Posts

error: Content is protected !!